News

ಏಳನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಬಂಪರ್ ಉಡುಗೊರೆ.

18 December, 2022 10:44 AM IST By: Maltesh
7th Pay Commission New Update 2022

7ನೇ ವೇತನ ಆಯೋಗದ ಫಿಟ್‌ಮೆಂಟ್ ಅಂಶ: ಕೇಂದ್ರ ಸರ್ಕಾರಿ ನೌಕರರು  ಹಲವು ದಿನದಿಂದಲೂ ಫಿಟ್‌ಮೆಂಟ್ ಅಂಶ ಹೆಚ್ಚಳಕ್ಕೆ ಆಗ್ರಹಿಸುತ್ತಿರುವುದು ಗೊತ್ತೇ ಇದೆ. ಸದ್ಯ 2.57ರಂತೆ ಫಿಟ್ ಮೆಂಟ್ ನೀಡುತ್ತಿದ್ದಾರೆ.. 3.68ಕ್ಕೆ ಏರಿಸಬೇಕೆಂದು ನೌಕರರ ಬೇಡಿಕೆ ಕುರಿತು ಕೇಂದ್ರ ನಿರ್ಧಾರ ಕೈಗೊಂಡರೆ ನೌಕರರ ವೇತನ ಹೆಚ್ಚಳವಾಗಲಿದೆ. 

ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ. ಶೀಘ್ರದಲ್ಲೇ ನೌಕರರ ವೇತನದಲ್ಲಿ ಹೆಚ್ಚಳವಾಗಲಿದೆ. ನೌಕರರ ವೇತನದ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ ಬರುತ್ತಿದೆ. ನೌಕರರ ವೇತನದಲ್ಲಿ ಈ ಹೆಚ್ಚಳ ಏಕಾಏಕಿ ಆಗಲಿದೆ ಎಂದು ತಿಳಿಸಲಾಗಿದೆ. ಈ ಬಾರಿ ಹೊಸ ವರ್ಷದ ಸಂದರ್ಭದಲ್ಲಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಸರ್ಕಾರ ಮುಂದಾಗಿದೆ.

ಇನ್ಮುಂದೆ 4 ಕಂತುಗಳಲ್ಲಿ ಪಿಎಂ ಕಿಸಾನ್‌ ಹಣ? ರೈತ ವಲಯದಲ್ಲಿ ಮೂಡಿದೆ ನೀರಿಕ್ಷೆ

ಬಜೆಟ್ನಲ್ಲಿ ಫಿಟ್ಮೆಂಟ್ ಅಂಶಇದಲ್ಲದೇ ಈ ಬಾರಿಯ ಬಜೆಟ್ ನಲ್ಲಿ ಫಿಟ್ ಮೆಂಟ್ ಅಂಶವನ್ನೂ ಸರ್ಕಾರ ಪರಿಷ್ಕರಿಸುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಸದ್ಯ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಸದ್ಯದಲ್ಲೇ ಅಪ್‌ಡೇಟ್‌ ಬರಲಿದೆ ಎನ್ನಲಾಗಿದೆ. ಸದ್ಯ ನೌಕರರಿಗೆ 2.57ರ ಫಿಟ್‌ಮೆಂಟ್‌ ಅಂಶ ಸಿಗುತ್ತಿದ್ದು.. 3.68ಕ್ಕೆ ಏರಿಸಬೇಕೆಂಬ ಬೇಡಿಕೆಗಳು ಕೇಳಿಬರುತ್ತಿವೆ. ಇದೇ ವೇಳೆ ನೌಕರರ ಕನಿಷ್ಠ ವೇತನ ನೇರವಾಗಿ ರೂ.18,000ದಿಂದ ರೂ.26 ಸಾವಿರಕ್ಕೆ ಏರಿಕೆಯಾಗಲಿದೆ.

ಲೆಕ್ಕಾಚಾರ ಹೀಗಿದೆ..

ನಿಮ್ಮ ಮೂಲ ವೇತನವು ರೂ.18 ಸಾವಿರವಾಗಿದ್ದರೆ, ಇತರ ಎಲ್ಲಾ ರೀತಿಯ ಭತ್ಯೆಗಳನ್ನು ಹೊರತುಪಡಿಸಿ 2.57 ರ ಪ್ರಕಾರ ರೂ.46,260 ಅನ್ನು ಫಿಟ್‌ಮೆಂಟ್ ಅಂಶವಾಗಿ ಪಡೆಯುತ್ತೀರಿ. ಸರಕಾರ ಮುಂದಿನ ಬಜೆಟ್ ನಲ್ಲಿ ಮೂಲವೇತನವನ್ನು 3.68ರಷ್ಟು ಹೆಚ್ಚಿಸಿದರೆ ಫಿಟ್ ಮೆಂಟ್ ಅಂಶವನ್ನು ರೂ.26 ಸಾವಿರಕ್ಕೆ ಹೆಚ್ಚಿಸಲಾಗುವುದು.

ಆಫೀಸ್‌ ಮುಂದೆ ಎತ್ತು ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ‌ರೈತನಿಗೆ ಬಿತ್ತು ಭಾರೀ ದಂಡ