News

7th Pay Commission: ನೂತನ ಸೂತ್ರದಡಿ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳಕ್ಕೆ ಯೋಚನೆ..!

24 May, 2022 10:06 AM IST By: Kalmesh T
7th Pay Commission: Govt Employees Fitment factor…

7ನೇ ವೇತನ ಆಯೋಗವು ನೂತನ ಸೂತ್ರದಡಿ ಸರ್ಕಾರಿ ನೌಕರರ ವೇತನದಲ್ಲಿ ಮೂಲವೇತನ ಪರಿಷ್ಕರಣೆಗೆ ಮುಂದಾಗುವ ಕುರಿತು ಚರ್ಚೆ ನಡೆಸಿದೆ.

ಇದನ್ನೂ ಓದಿರಿ: ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಗ್ರಾಹಕರಿಗೆ ಒತ್ತಾಯವಾಗಿ "ಸೇವಾ ಶುಲ್ಕ" ವಿಧಿಸುವ ರೆಸ್ಟೋರೆಂಟ್‌ಗಳಿಗೆ ಎಚ್ಚರಿಕೆ ನೀಡಲು DOCA ಜೂನ್ 2ರಂದು ಸಭೆ!

ಫಿಟ್ಮೆಂಟ್ ಫ್ಯಾಕ್ಟರ್ ಮೂಲಕ ವೇತನ ಹೆಚ್ಚಳದ ಬದಲು ಇದೀಗ ಹೊಸ ಸೂತ್ರದಡಿ ಮೂಲವೇತನವನ್ನು ಪರಿಷ್ಕರಣೆ ಮಾಡುವ ಕುರಿತು ಚಿಂತನೆ ನಡೆಸುವ ಸಾಧ್ಯತೆ ಇದೆ. ಇದಲ್ಲದೆ ಪ್ರತಿ ವರ್ಷ ಬೇಸಿಕ್ ವೇತನವನ್ನು (Basic Salary) ಹೆಚ್ಚಿಸುವ ಯೋಜನೆ ಮೇಲೂ ಕೂಡ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಫಿಟ್‌ಮೆಂಟ್ ಅಂಶದಿಂದ ಸಂಬಳವನ್ನು ಹೆಚ್ಚಿಸುವ ಬದಲು, ಇದೀಗ ಹೊಸ ಸೂತ್ರದ ಅಡಿ ಮೂಲ ವೇತನ ಪರಿಷ್ಕರಣೆಯ ಸಾಧ್ಯತೆ ಇದೆ. ಇದಲ್ಲದೇ ಪ್ರತಿ ವರ್ಷ ಮೂಲ ವೇತನ ಹೆಚ್ಚಿಸುವ ಯೋಜನೆಯೂ ಕೂಡ ಇದೆ ಎನ್ನಲಾಗಿದೆ.

ಆದರೆ, ಈ ಹೊಸ ಸೂತ್ರವು 2024 ರ ನಂತರ ಜಾರಿಗೆ ಬರುವ ಸಾಧ್ಯತೆಯಿದೆ ಎಂದೂ ಕೂಡ ತಿಳಿಸಲಾಗಿದೆ.

7ನೇ ವೇತನ ಆಯೋಗದಿಂದ ಗುಡ್‌ನ್ಯೂಸ್‌; ಸರ್ಕಾರಿ ನೌಕರರ ವೇತನ ಖಾತೆಗೆ ಬರಲಿದೆ 2 ಲಕ್ಷ ರೂಪಾಯಿ..! ಏನಿದು ತಿಳಿಯಿರಿ

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ಶೇ.14% ರಷ್ಟು ತುಟ್ಟಿಭತ್ಯೆ ಹೆಚ್ಚಳ..!

ಪ್ರತಿ ವರ್ಷ ಮೂಲ ವೇತನ  ನಿಗದಿ

7ನೇ ವೇತನ ಆಯೋಗದ (7th Pay Commission) ಶಿಫಾರಸುಗಳನ್ನು 2016ರಲ್ಲಿ ಜಾರಿಗೊಳಿಸಲಾಗಿತ್ತು. ಮೂಲಗಳ ಪ್ರಕಾರ, ಕೇಂದ್ರ ನೌಕರರ ವೇತನವನ್ನು ನಿರ್ಧರಿಸಲು ಹೊಸ ಸೂತ್ರ ಜಾರಿಗೆ ಬರುವ ಸಾಧ್ಯತೆ ಇದ್ದು, ಪ್ರತಿ ವರ್ಷ ಕೇಂದ್ರ ನೌಕರರ ವೇತನವನ್ನು ನಿಗದಿಪಡಿಸುವ ಗುರಿಹೊಂದಲಾಗಿದೆ ಎನ್ನಲಾಗಿದೆ.

ಆದರೆ, ಈ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ದೃಢೀಕರಣ ಬಂದಿಲ್ಲ. ವೇತನ ಆಯೋಗದಿಂದ ಪ್ರತ್ಯೇಕವಾಗಿ ವೇತನವನ್ನು ಹೆಚ್ಚಿಸುವ ಸೂತ್ರವನ್ನು ಪರಿಗಣಿಸುವ ಸಮಯ ಇದೀಗ ಬಂದಿದೆ ಎಂದು ಮೂಲಗಳು ವರದಿ ಮಾಡಿವೆ.

Aykroyd ಸೂತ್ರವನ್ನು ಕೇಂದ್ರ ನೌಕರರ ವೇತನ ಹೆಚ್ಚಳಕ್ಕೆ ಪರಿಗಣಿಸಲಾಗುವುದು ಎನ್ನಲಾಗಿದೆ. ಈ ಹೊಸ ಸೂತ್ರದ ಕುರಿತು ದೀರ್ಘಕಾಲದಿಂದ ಚರ್ಚೆ ನಡೆಯುತ್ತಿದೆ. ಪ್ರಸ್ತುತ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

EPFO ಖಾತೆದಾರರಿಗೆ ಗುಡ್ನ್ಯೂಸ್: ಇನ್ಮುಂದೆ SMS ಮತ್ತು Missed Call ಮೂಲಕ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಬಹುದು!

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

ಇದರ ಮೇಲೆ ತುಟ್ಟಿಭತ್ಯೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಆದರೆ, ಮೂಲ ವೇತನದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ತಜ್ಞರ ಪ್ರಕಾರ, ಹೊಸ ಸೂತ್ರದೊಂದಿಗೆ, ಉದ್ಯೋಗಿಗಳ ಸಂಬಳವು ಹಣದುಬ್ಬರ ದರ, ಜೀವನ ವೆಚ್ಚ ಮತ್ತು ಉದ್ಯೋಗಿಯ ಕಾರ್ಯಕ್ಷಮತೆ ಆಧರಿಸಿ ಇರಲಿದೆ ಎನ್ನಲಾಗಿದೆ.

ಈ ಎಲ್ಲಾ ವಿಷಯಗಳ ಮೌಲ್ಯಮಾಪನದ ನಂತರ, ಪ್ರತಿ ವರ್ಷ ವೇತನವನ್ನು ಹೆಚ್ಚಿಸಲಾಗುವುದು ಎನ್ನಲಾಗಿದೆ. ಇದು ಖಾಸಗಿ ವಲಯದ ಕಂಪನಿಗಳಲ್ಲಿ ನಡೆಯುವ ಮೌಲ್ಯಮಾಪನದಂತೆಯೇ ಇರಲಿದೆ ಎನ್ನಲಾಗಿದೆ.

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಹೊಸ ಸೂತ್ರವನ್ನು ಏಕೆ ಬೇಕು?

ಇದರಲ್ಲಿ ಎಲ್ಲ ವರ್ಗದ ನೌಕರರು ಸಮಾನ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುದು ಸರ್ಕಾರದ ಅನಿಸಿಕೆಯಾಗಿದೆ. ಪ್ರಸ್ತುತ ಗ್ರೇಡ್-ಪೇ ಪ್ರಕಾರ, ಪ್ರತಿಯೊಬ್ಬರ ವೇತನದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಆದರೆ, ಹೊಸ ಸೂತ್ರಗಳ ಆಗಮನದಿಂದ, ಈ ಅಂತರವನ್ನು ಕಡಿಮೆ ಮಾಡಲು ಪ್ದ್ರಯತ್ನಿಸಲಾಗುವುದು ಎನ್ನಲಾಗಿದೆ.

ಸರ್ಕಾರಿ ಇಲಾಖೆಗಳಲ್ಲಿ ಪ್ರಸ್ತುತ ಒಟ್ಟು  14 ವೇತನ ಶ್ರೇಣಿಗಳಿವೆ. ಪ್ರತಿ ವೇತನ ಶ್ರೇಣಿಯು ಸಾಮಾನ್ಯ ನೌಕರರಿಂದ ಹಿಡಿದು ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಹೊಸ ಸೂತ್ರದ ಸಲಹೆ ಒಳ್ಳೆಯದು, ಆದರೆ ಇಂತಹ ಯಾವುದೇ ಸೂತ್ರವನ್ನು ಇದುವರೆಗೆ ಚರ್ಚಿಸಲಾಗಿಲ್ಲ.