ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿಯ) 2023-24ನೇ ಸಾಲಿ ಬಜೆಟ್ ಮಂಡನೆಯಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿಯೂ ಕಸ ನಿರ್ವಹಣೆಗೆ ಸಿಂಹಪಾಲು ಇರಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2023-24ನೇ ಸಾಲಿನ ಬಜೆಟ್ ಅನ್ನು ಆಡಳಿತಾಧಿಕಾರಿಗಳ ನೇತೃತ್ವದಲ್ಲಿಯೇ ಮಂಡಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2023-24ನೇ ಸಾಲಿನ ಆಯವ್ಯಯ ಅಂದಾಜು ಮಂಡನೆಯನ್ನು ಗುರುವಾರ ಬೆಳಿಗ್ಗೆ 11.30ಕ್ಕೆ ಸರ್.ಪುಟ್ಟಣ್ಣ ಚೆಟ್ಟಿ
ಪುರಭವನ(ಟೌನ್ ಹಾಲ್)ದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಅವರ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಮಂಡಿಸಿದ್ದು, ಈ ಬಾರಿಯೂ ಅಧಿಕಾರಿಗಳೇ ಪಾಲಿಕೆಯ ಬಜೆಟ್ ಮಂಡಿಸಿದ್ದಾರೆ.
Pension ಹಳೇ ಪಿಂಚಣೆ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಸರ್ಕಾರ!
- ಹಲವು ಯೋಜನೆಗಳಿಗೆ ಕೋಟ್ಯಾಂತರ ರೂಪಾಯಿ ಮೀಸಲಿರಿಸಲಾಗಿದೆ.
- ಬೃಹತ್ ಯೋಜನೆಗಳ ವಿವರ ಮತ್ತು ಮೀಸಲಿಟ್ಟ ಅನುದಾನದ ವಿವರ ಇಲ್ಲಿದೆ.
- ಒಂಟಿ ಮನೆ ನಿರ್ಮಾಣಕ್ಕಾಗಿ ಫಲಾನುಭವಿಗಳಿಗೆ ಸಹಾಯಧನ ನೀಡಲು ಒಟ್ಟು ರೂ.100 ಕೋಟಿಗಳು
- ಲ್ಯಾಪ್ ಟಾಪ್‌ಗಳ ವಿತರಣೆಗಾಗಿ ರೂ.25 ಕೋಟಿಗಳು
- ಹೊಲಿಗೆ ಯತ್ರಗಳ ವಿತರಣೆಗಾಗಿ ರೂ.9 ಕೋಟಿಗಳು
- ವೃದ್ಧಾಶ್ರಮಗಳಿಗಾಗಿ ರೂ.16 ಕೋಟಿಗಳು
- ವಿದ್ಯಾರ್ಥಿ ವೇತನ ನೀಡಲು ರೂ.5 ಕೋಟಿಗಳು
- 15ನೇ ಹಣಕಾಸು ಯೋಜನೆ ಅಡಿಯ ಕಾಮಗಾರಿಗಳಿಗಾಗಿ ರೂ.461 ಕೋಟಿಗಳು
Bank 5 ದಿನ ಮಾತ್ರ ಇನ್ಮುಂದೆ ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸ ?
- ಉದ್ಯಾನವನಗಳ ನಿರ್ವಹಣೆಗಾಗಿ ಒಟ್ಟಾರೆ ರೂ.80 ಕೋಟಿಗಳು
- ಹೊಸ ವಲಯಗಳ ಉದ್ಯಾನವನಗಳಿಗೆ ರೂ.35 ಕೋಟಿ
- ಹಳೆ ವಲಯಗಳ ಉದ್ಯಾನವನಗಳಿಗೆ ರೂ.45 ಕೋಟಿ
- ಶಿಕ್ಷಣ ಉನ್ನತೀಕರಣ ಕಾರ್ಯಕ್ರಮಗಳಿಗಾಗಿ ರೂ.11.56 ಕೋಟಿಗಳು
- ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಸಂಸ್ಥೆಗೆ ರೂ.700 ಕೋಟಿಗಳ ಸಹಾಯನುದಾನ
- ಬೀದಿ ನಾಯಿಗಳ ನಿರ್ವಹಣೆಗಾಗಿ ರೂ.20 ಕೋಟಿಗಳು
- ಇಂದಿರಾ ಕ್ಯಾಂಟೀನ್ ಗಾಗಿ ರೂ.50 ಕೋಟಿಗಳು
- ಬೆಂಗಳೂರು ಆರೋಗ್ಯ ವ್ಯವಸ್ಥೆಗಾಗಿ ರೂ.2 ಕೋಟಿಗಳು
- ಅವಿನು ಪ್ಲಾಂಟೇಷನ್‌ಗಾಗಿ ರೂ.11 ಕೋಟಿಗಳು
- ಮರಗಳ ಗಣತಿಗಾಗಿ ರೂ.4 ಕೋಟಿಗಳು
- ಸಸಿಗಳ ಬೆಳೆಸುವಿಕೆ ಮತ್ತು ನಿರ್ವಹಣೆಗಾಗಿ ರೂ.7.5 ಕೋಟಿಗಳು
- Tree canopy ನಿರ್ವಹಣೆಗಾಗಿ ರೂ.14 ಕೋಟಿಗಳು
Gold Rate Today ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳ!
- ಹೈ-ಟೆಕ್ ನರ್ಸರಿಗಳಿಗಾಗಿ ರೂ.8 ಕೋಟಿಗಳು
- ಶಾಲಾ ವಿದ್ಯಾರ್ಥಿಗಳಿಗೆ ಸಮವಸಂತ, ಶೂ ನೀಡಲು ರೂ.25 ಕೋಟಿಗಳು
- ಬೀದಿ ವ್ಯಾಪಾರಿಗಳ ವಲಯಗಳಿಗಾಗಿ ರೂ.25 ಕೋಟಿಗಳು
- ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕಾಗಿ ರೂ.210 ಕೋಟಿಗಳು
- 10 ಹೊಸ ಪ್ಲಾಜಗಳ ಅಭಿವೃದ್ಧಿಗಾಗಿ ರೂ.50 ಕೋಟಿಗಳು
- ಕೊಳಗೇರಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.80 ಕೋಟಿಗಳು
- ಬೃಹತ್ ಮಳೆ ನೀರುಗಾಲುವೆಗಳ ಅಭಿವೃದ್ಧಿಗಾಗಿ ರೂ.45 ಕೋಟಿಗಳು
- ಪ್ರಗತಿಯಲ್ಲಿರುವ 9 ಮೇಲು ಸೇತುವೆ ಕಾಮಗಾರಿಗಳಿಗೆ ರೂ.195 ಕೋಟಿಗಳು
2023-24 ಆಯವ್ಯಯ ಅಂದಾಜುಗಳ ಮುಖ್ಯಾಂಶಗಳು
- ಒಟ್ಟು ಆಯವ್ಯಯ ಅಂದಾಜುಗಳು ರೂ.11,157 ಕೋಟಿ
- ಒಟ್ಟು ಸ್ವೀಕೃತಿಗಳು ರೂ.11,158 ಕೋಟಿ
- ರಾಜಸ್ವ ಸ್ವೀಕೃತಿಗಳು ರೂ.6,376 ಕೋಟಿ
- ಬಂಡವಾಳ ಸ್ವೀಕೃತಿಗಳು ರೂ.3,461 ಕೋಟಿ
- ಅಸಾಧರಣಾ ಸ್ವೀಕೃತಿಗಳು ರೂ.1,321 ಕೋಟಿ
- ಒಟ್ಟು ವೆಚ್ಚಗಳು ರೂ.11,157 ಕೋಟ
- ರಾಜಸ್ವ ವೆಚ್ಚಗಳು ರೂ.4,400 ಕೋಟಿ
- ಬಂಡವಾಳ ವೆಚ್ಚಗಳು ರೂ.6,264 ಕೋಟಿ
- ಅಸಾಧರಣಾ ವೆಚ್ಚಗಳು ರೂ.493 ಕೋಟಿ
- ಉಳಿತಾಯ ರೂ.6.14 ಕೋಟಿ
- 7th Pay Commission ಸರ್ಕಾರಿ ನೌಕರರ ಶೇ 17ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಅಸ್ತು: ಏನೆಲ್ಲ ಸೌಲಭ್ಯ, ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್!