News

ರೈತರಿಗೆ 65 ಸಾವಿರ ಕೋಟಿ ರಸಗೊಬ್ಬರ ಸಬ್ಸಿಡಿ ನೀಡಲಾಗುವುದು- ನಿರ್ಮಲಾ ಸೀತಾರಾಮನ್

13 November, 2020 2:15 PM IST By:

ಲಾಕ್ಡೌನ್ ಕಾರಣಕ್ಕೆ ಸಂಕಷ್ಟಕ್ಕೀಡಾಗಿರುವ ದೇಶದ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶದಿಂದ  ರೈತರಿಗೆ 65,000 ಕೋಟಿ ರೂಪಾಯಿ ರಸಗೊಬ್ಬರ ಸಬ್ಸಿಡಿ ನೀಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರದೊರೆಯುವಂತೆ ಮಾಡಲು ಮತ್ತು ಮುಂಬರುವ ಬೆಳೆ ಋತುವಿನಲ್ಲಿ ರಸಗೊಬ್ಬರಗಳನ್ನು ಸಕಾಲದಲ್ಲಿ ಪಡೆಯಲು ಅನುಕೂಲವಾಗುವಂತೆ  65,000 ಕೋಟಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಇನ್ಮುಂದೆ ಸಬ್ಸಿಡಿ ಆಧಾರಿತ ರಸಗೊಬ್ಬರ ಪೂರೈಕೆ ಹೆಚ್ಚಲಿದೆ. ಮುಂದಿನ ಕೃಷಿ ಸೀಸನ್ನಲ್ಲಿ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಖರೀದಿಸಲು ನೆರವಾಗುವ ದೃಷ್ಟಿಯಿಂದ ಈ ಪ್ಯಾಕೇಜ್ ಘೋಷಿಸಲಾಗಿದೆ. ಇದಕ್ಕೆ ಹೊರತಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಯೋಜನೆ ಪ್ರಕಾರ 10,000 ಕೋಟಿ ರೂಪಾಯಿಯನ್ನು ಈ ಹಣಕಾಸು ವರ್ಷದ ಅವಧಿಯಲ್ಲೇ ಪೂರೈಸಲಾಗುತ್ತದೆ. ಇದರಿಂದ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆ ವೇಗ ಗೊಳ್ಳಲಿದೆ ಎಂದು ಅವರು ಹೇಳಿದರು.