News

ರಾಜ್ಯದ 13 ಜಿಲ್ಲೆಗಳ 61 ತಾಲೂಕು ಅತೀವೃಷ್ಟಿ, ಪ್ರವಾಹ ಪೀಡಿತ-ಸರ್ಕಾರ ಘೋಷಣೆ

12 August, 2021 9:11 AM IST By:

ರಾಜ್ಯದಲ್ಲಿ ಕಳೆದ ತಿಂಗಳು ಸುರಿದ ಮಳೆಯಿಂದಾಗಿ ಉಂಟಾದ ಪ್ರವಾಹ ಹಾಗೂ ಅತೀವೃಷ್ಟಿಯಿಂದಾಗಿ 13 ಜಿಲ್ಲೆಗಳ 61 ತಾಲೂಕುಗಳನ್ನು ಅತೀವೃಷ್ಟಿ ಹಾಗೂ ಪ್ರವಾಹ ಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿ ಆದೇಶ ಹೊರಡಿಸಿದೆ. ಜುಲೈ ತಿಂಗಳಲ್ಲಿ ಮುಂಗಾರು ಮಳೆಯಿಂದಾಗಿ ಅತೀವೃಷ್ಟಿ ಉಂಟಾಗಿ ನದಿ ಹರಿವಿನಿಂದಾಗಿ ಪ್ರವಾಹ ಹೆಚ್ಚಾಗಿತ್ತು. ಪರಿಣಾಮ ಅಪಾರ ಪ್ರಮಾಣದಲ್ಲಿ  ಜೀವಹಾನಿ, ಮನೆ, ಬೆಳೆಹಾನಿ ಉಂಟಾಗಿ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಪ್ರವಾಹಪೀಡಿತ ತಾಲೂಕುಗಳಲ್ಲಿ ಎಸ್.ಡಿ.ಆರ್.ಎಫ್/ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಮತ್ತು ಪರಿಹಾರ ಕಾರ್ಯಗಳಿಗೆ ಸರ್ಕಾರದಿಂದ ಕಾಲ-ಕಾಲಕ್ಕೆ ಹೊರಡಿಸಲಾದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಿಲ್ಲಾಡಳಿತವು ಅಗತ್ಯ ಪರಿಹಾರ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ಸೂಚನೆ ನೀಡಲಾದಿಗೆ.

ನಿರಂತರವಾಗಿ ಸುರಿಯುವ ಮಳೆ ಹಾಗೂ ಪ್ರವಾಹದಿಂದಾಗಿ ಜೀವಹಾನಿ, ಮನೆ ಹಾಗೂ ಬೆಳೆಹಾನಿ ಉಂಟಾದರೆ ಸರ್ಕಾರ ಅತೀವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶವೆಂದು ಘೋಷಣೆ ಮಾಡುತ್ತದೆ. ಪ್ರವಾಹಪೀಡಿತ ಪ್ರದೇಶಗಳಿಗೆ ಸರ್ಕಾರವು ಪರಿಹಾರವನ್ನೂ ಸಹ ನೀಡುತ್ತದೆ. ಬೆಳೆ ಹಾಳೆದರೆ ಅತೀವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ರೈತರಿಗೆ ಪರಿಹಾರ ಘೋಷಣೆ ಮಾಡುತ್ತದೆ. ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಪ್ರದೇಶಗಳು ಪ್ರವಾಹಪೀಡಿತಕ್ಕೊಳಗಾಗಿವೆ.

ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ಒದಗಿಸುವ ಸಲುವಾಗಿ 61 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಣೆ ಮಾಡಲಾಗಿದೆ.

ಇಲ್ಲಿದೆ 13 ಜಿಲ್ಲೆಯ 61 ತಾಲೂಕುಗಳ ಪಟ್ಟಿ

ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳ್ಳಿ, ನ್ಯಾಮತಿ, ರಾಯಚೂರು ಜಿಲ್ಲೆಯಲ್ಲಿ ದೇವದುರ್ಗ, ಲಿಂಗಸೂಗೂರು, ರಾಯಚೂರು ತಾಲೂಕು ಪ್ರವಾಹ ಪೀಡಿತಕ್ಕೊಳಗಾಗಿವೆ. ಬೆಳಗಾವಿ ಜಿಲ್ಲೆಯ ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ಖಾನಾಪೂರ, ರಾಯಬಾಗ, ರಾಮದುರ್ಗ, ಸವದತ್ತಿ, ಕಿತ್ತೂರು, ನಿಪ್ಪಾಣಿ, ಕಾಗವಾಡ, ಮೂಡಲಗಿ ತಾಲೂಕುಗಳು, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬಾಗಾಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ, ಗುಳೇದಗುಡ್ಡ, ಇಳಕಲ್, ರಬಕವಿ ತಾಲೂಕುಗಳು, ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕುಗಳು, ಹಾವೇರಿ ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೇರೂರ ರಾಣೆಬೆನ್ನೂರ, ಸವಣೂರು, ಶಿಗ್ಗಾಂವಿ, ರಟ್ಟಿಹಳ್ಳಿ, ಧಾರವಾಡ ಜಿಲ್ಲೆಯ ಕಲಘಟಗಿ, ಕುಂದಗೋಳ, ನವಲಗುಂದ, ಆಳ್ವಾವರ ಪ್ರವಾಹ ಪೀಡಿತವೆಂದು ಘೋಷ,ಸಲಾಗಿದೆ.