News

ಕರ್ನಾಟಕದಲ್ಲಿ ಒಂದೇ ದಿನ 50,000 ಗಡಿ ದಾಟಿದ ಕೊರೊನಾವೈರಸ್

05 May, 2021 9:25 PM IST By:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆಗೆ ಕರ್ನಾಟಕಕ್ಕೆ ಕರ್ನಾಟಕವೇ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಹಿಂದೆಂದೂ ದಾಖಲಾಗದಷ್ಟು ಕೊವಿಡ್-19 ಪ್ರಕರಣಗಳು ಕಳೆದ 24 ಗಂಟೆಗಳಲ್ಲೇ ವರದಿಯಾಗಿವೆ.

ರಾಜ್ಯದಲ್ಲಿ ಬುಧವಾರ ಮಹಾಮಾರಿ ಕೊರೊನಾ ರೌದ್ರವತಾರ ತಾಳಿದೆ. ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಅಂದರೆ 50,112 ಮಂದಿಗೆ ಹೊಸ ಸೋಂಕು ತಗುಲಿದೆ. ಇದೇ ಮೊದಕ ಬಾರಿಗೆ ಪ್ರಕರಣಗಳ ಸಂಖ್ಯೆ ಅರ್ಧ ಲಕ್ಷ ಗಡಿ ದಾಟಿದೆ. ಇದುವರೆಗಿನ ದಾಖಲೆ ಪ್ರಮಾಣದಲ್ಲಿ ಸೋಂಕು ದಾಖಲಾಗಿದ್ದು ರಾಜ್ಯದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಮೃತರ ಸಂಖ್ಯೆಯಲ್ಲೂ ಇಂದು ಗಣನೀಯ ಏರಿಕೆ ಯಾಗಿದೆ 346 ಜನರು ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ 350 ರ ಸಮೀಪಕ್ಕೆ ಬಂದು ತಲುಪಿದೆ.
ಬೆಂಗಳೂರು ನಗರದಲ್ಲಿ ಇಂದು ಒಂದೇ ದಿನ 161 ಮಂದಿ ಸಾವನ್ನಪ್ಪಿದ್ದು ಮೃತರ ಸಂಖ್ಯೆ 7006 ಕ್ಕೆ ಹೆಚ್ವಳವಾಗಿದೆ ಎಂದು ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 16884 ಕ್ಕೆ ಏರಿಕೆಯಾಗಿದೆ. 26841 ಮಂದಿ ಇಂದು ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಇದುವರೆಗೆ 1236854 ಮಂದಿ ಮನೆಗೆ ತೆರಳಿದ್ದಾರೆ.
ಒಟ್ಟು 487288 ಸಕ್ರಿಯ ಪ್ರಕರಣಗಳಿವೆ. ಇದರೊಂದಿಗೆ 1741046 ಜನರಿಗೆ ಸೋಂಕು ತಗುಲಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಂಕಿ ಅಂಶ ತಿಳಿಸಿದೆ.
ಒಟ್ಟಾರೆ ಸೋಂಕಿತರ ಪ್ರಮಾಣ ಶೇಕಡ 32.82ರಷ್ಟಿದೆ. ಸೋಂಕಿಗೆ ಬಲಿಯಾದವರ ಪ್ರಮಾಣ ಶೇಕಡ 0.69ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ.
ಜಿಲ್ಲೆ ಜಿಲ್ಲೆಗಳಲ್ಲೂ ಕೊರೊನಾ ಸೋಂಕಿನ ಆರ್ಭಟ ಮುಂದುವರಿದಿದೆ ಅದರ ವಿವರ ಹೀಗಿದೆ
ಬಾಗಲಕೋಟೆ 719, ಬಳ್ಳಾರಿ 927, ಬೆಳಗಾವಿ 920, ಬೆಂಗಳೂರು ಗ್ರಾಮಾಂತರ 1,033, ಬೆಂಗಳೂರು ನಗರ 23,106, ಬೀದರ್ 482, ಚಾಮರಾಜನಗರ 542, ಚಿಕ್ಕಬಳ್ಳಾಪುರ 830, ಚಿಕ್ಕಮಗಳೂರು 1009, ಚಿತ್ರದುರ್ಗ 152, ದಕ್ಷಿಣ ಕನ್ನಡ 1,529, ದಾವಣಗೆರೆ 548, ಧಾರವಾಡ 1030, ಗದಗ 189, ಹಾಸನ 1,604, ಹಾವೇರಿ 224, ಕಲಬುರಗಿ 1,097, ಕೊಡಗು 768, ಕೋಲಾರ 1,115, ಕೊಪ್ಪಳ 182, ಮಂಡ್ಯ 1,621, ಮೈಸೂರು 2,790, ರಾಯಚೂರು 427, ರಾಮನಗರ 475, ಶಿವಮೊಗ್ಗ 702, ತುಮಕೂರು 2,335, ಉಡುಪಿ 1,655, ಉತ್ತರ ಕನ್ನಡ 849, ವಿಜಯಪುರ 513 ಮತ್ತು ಯಾದಗಿರಿಯಲ್ಲಿ 739 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಬುಧವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಇದುವರೆಗೆ ಒಟ್ಟು 1741046 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಈವರೆಗೂ 12,36,854 ಸೋಂಕಿತರು ಗುಣಮುಖರಾಗಿದ್ದು, 16,884 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 4,87,288 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.