ಕೇಂದ್ರ ಸರ್ಕಾರ ದೇಶದ ಜನರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಗಳಲ್ಲಿ ಪ್ರತಿಯೊಂದು ವರ್ಗಕ್ಕೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ವಿದ್ಯಾರ್ಥಿಗಳು, ರೈತರು, ಉದ್ಯೋಗಿಗಳು ಮತ್ತು ವ್ಯಾಪಾರಸ್ಥರಿಗೆ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಕೈಗಾರಿಕೆಗಳನ್ನು ಉತ್ತೇಜಿಸಲು ಮುದ್ರಾ ಸಾಲ ನೀಡಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಆಧಾರ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರದಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲ ಸಿಗುತ್ತದೆ ಎಂಬ ಬರಹವಿದ್ದ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು. ಇದರಲ್ಲಿ ಕೇಂದ್ರ ಸರ್ಕಾರದ ಹೆಸರಿನಲ್ಲಿ ಸಾಲದ ಯೋಜನೆಯನ್ನು ಹೇಳಲಾಗುತ್ತಿತ್ತು. ಆಧಾರ್ ಕಾರ್ಡ್ ಹೊಂದಿರುವ ಎಲ್ಲಾ ನಾಗರಿಕರಿಗೆ ಕೇಂದ್ರ ಸರ್ಕಾರ 4.78 ಲಕ್ಷ ರೂಪಾಯಿ ಸಾಲವನ್ನು ನೀಡುತ್ತಿದೆ ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿತ್ತು.
ಒಂದೇ ಬೆಳೆಯಲ್ಲಿ ನಾಲ್ಕು ಬೆಳೆ! ಈ ಹೊಸ ತಂತ್ರದಿಂದ ರೈತರಿಗೆ ಭಾರೀ ಹಣ ಸಿಗಲಿದೆ
It is being claimed that the central government is providing a loan of ₹4,78,000 to all Aadhar card owners#PibFactCheck
— PIB Fact Check (@PIBFactCheck) August 16, 2022
▶️ This claim is #fake
▶️ Do not forward such messages
▶️ Never share your personal/financial details with anyone pic.twitter.com/U5gbE3hCLD
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಪೋಸ್ಟರ್ ನಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ತಿಳಿಯೋಣ. ಅನೇಕ ಸಂದೇಶಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇವುಗಳಲ್ಲಿ ಮೋದಿ ಸರ್ಕಾರದ ಯೋಜನೆಗಳೂ ಸೇರಿವೆ. ಮೋದಿ ಸರ್ಕಾರ ಆಧಾರ್ ಕಾರ್ಡ್ ಮೇಲೆ ಸಾಲ ನೀಡುತ್ತಿದೆ ಎಂದು ಸುದ್ದಿಯೊಂದು ವೈರಲ್ ಆಗಿದೆ.
ಈ ರೀತಿಯ ಸಂದೇಶ ಬಂದರೆ ಎಚ್ಚರದಿಂದಿರಿ. ಏಕೆಂದರೆ ಇದರ ಬಲೆಗೆ ಬೀಳುವುದರಿಂದ ನಿಮ್ಮ ಠೇವಣಿ ಬಂಡವಾಳವನ್ನೂ ಕಳೆದುಕೊಳ್ಳಬಹುದು.
ವಾಸ್ತವಾಂಶ ಬಿಚ್ಚಿಟ್ಟ PIB
ಸರ್ಕಾರಿ ಮಾಹಿತಿ ಸಂಸ್ಥೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಟ್ವೀಟ್ ಮಾಡುವ ಮೂಲಕ ಈ ಕುರಿತು ಇರುವ ಅಂತೆ ಕಂತೆಗಳನ್ನು ಸ್ಪಷ್ಟಪಡಿಸಿದೆ. ಈ ಪೋಸ್ಟರ್ ಸಂಪೂರ್ಣ ನಕಲಿ ಎಂದು ಪಿಐಬಿ ಹೇಳಿದೆ. ಇದರೊಂದಿಗೆ ಸರಕಾರದಿಂದ ಅಂತಹ ಸಾಲ ನೀಡುತ್ತಿಲ್ಲ ಎಂದಿದೆ. ಇಂತಹ ನಕಲಿ ಸಂದೇಶಗಳನ್ನು ಶೇರ್ ಮಾಡಬೇಡಿ ಎಂದು ಸಲಹೆ ನೀಡಿದೆ.
ಪಿಯುಸಿ ಹಾಗೂ ಪದವಿ ಪಾಸ್ ಆದವರಿಗೆ ಇಲ್ಲಿದೆ ಟಾಪ್ 5 ನೇಮಕಾತಿ ವಿವರಗಳು
ಕೇವಲ ನಾಲ್ಕೇ ತಿಂಗಳಲ್ಲಿ 79 ಲಕ್ಷ ಮಕ್ಕಳಿಗೆ ಬಾಲ ಆಧಾರ್ ವಿತರಣೆ
ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ (ಏಪ್ರಿಲ್-ಜುಲೈ) 0-5 ವರ್ಷದೊಳಗಿನ 79 ಲಕ್ಷ ಮಕ್ಕಳು ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೋಂದಾಯಿಸಲ್ಪಟ್ಟಿದ್ದಾರೆ.
ಇದು 0-5 ವರ್ಷದೊಳಗಿನ ಹೆಚ್ಚಿನ ಮಕ್ಕಳನ್ನು ತಲುಪಲು ಮತ್ತು ಪೋಷಕರು ಮತ್ತು ಮಕ್ಕಳಿಗೆ ಬಹು ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡಲು ಬಾಲ್ ಆಧಾರ್ ಉಪಕ್ರಮದ ಅಡಿಯಲ್ಲಿ ಹೊಸ ಪ್ರಯತ್ನದ ಭಾಗವಾಗಿದೆ. ಮಾರ್ಚ್ 31, 2022 ರ ಅಂತ್ಯದ ವೇಳೆಗೆ, 0-5 ವರ್ಷ ವಯಸ್ಸಿನ 2.64 ಕೋಟಿ ಮಕ್ಕಳು ಬಾಲ ಆಧಾರ್ ಹೊಂದಿದ್ದರು ಮತ್ತು ಜುಲೈ 2022 ರ ಅಂತ್ಯದ ವೇಳೆಗೆ ಈ ಸಂಖ್ಯೆ 3.43 ಕೋಟಿಗೆ ಏರಿದೆ.
ದೇಶಾದ್ಯಂತ, ಬಾಲ ಆಧಾರ್ ನೋಂದಣಿ ಪ್ರಕ್ರಿಯೆಯು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಹಿಮಾಚಲ ಪ್ರದೇಶ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ, 0-5 ವಯಸ್ಸಿನ ಮಕ್ಕಳ ದಾಖಲಾತಿಯು ಈಗಾಗಲೇ ಉದ್ದೇಶಿತ ವಯಸ್ಸಿನ 70% ಕ್ಕಿಂತ ಹೆಚ್ಚು ಜನರನ್ನು ಒಳಗೊಂಡಿದೆ. ಜಮ್ಮು ಮತ್ತು ಕಾಶ್ಮೀರ, ಮಿಜೋರಾಂ, ದೆಹಲಿ, ಆಂಧ್ರಪ್ರದೇಶ, ಲಕ್ಷದ್ವೀಪ ಸೇರಿದಂತೆ ಹಲವಾರು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಕ್ಕಳ ದಾಖಲಾತಿ (0-5 ವಯೋಮಾನದವರು) ಪ್ರಭಾವಶಾಲಿಯಾಗಿ ಮುಂದುವರಿದಿದೆ.
ಒಟ್ಟಾರೆಯಾಗಿ, ಪ್ರಸ್ತುತ ಆಧಾರ್ ಸ್ಯಾಚುರೇಶನ್ ಮಟ್ಟವು ಸುಮಾರು 94% ಆಗಿದೆ. ಮತ್ತು ವಯಸ್ಸಾದವರಲ್ಲಿ ಆಧಾರ್ ಸ್ಯಾಚುರೇಶನ್ ಮಟ್ಟವು ಸುಮಾರು 100% ಆಗಿದೆ. ಆಧಾರ್ ಪ್ರಸ್ತುತ ಜೀವನ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ವೇಗವರ್ಧಕವಾಗಿದೆ.