News

ರಾಜ್ಯದಲ್ಲಿ ಗುರುವಾರ ಒಂದೇ ದಿನ 49058 ಜನರಿಗೆ ಕೋವಿಡ್ ಪತ್ತೆ

06 May, 2021 9:14 PM IST By:

ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಲೇ ಇದೆ. ಗುರುವಾರ ಸಹ ಒಂದೇ ದಿನ 49058 ಜನರಿಗೆ ಕೊರೋನಾ ಸೋಂಕು ತಗುಲಿದೆ. ರಾಜ್ಯದಲ್ಲಿ 328 ಮಂದಿ ಸಾವನ್ನಪ್ಪಿದ್ದು 17212 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 139 ಮಂದಿ ಬಲಿಯಾಗಿದ್ದು ನಗರದಲ್ಲಿ ಮೃತರ ಸಂಖ್ಯೆ 7145 ಕ್ಕೆ ಏರಿಕೆಯಾಗಿದೆ.

ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.29.83 ಮತ್ತು ಮರಣ ಪ್ರಮಾಣ ಶೇ.0.66ರಷ್ಟಿದೆ. ರಾಜ್ಯದಲ್ಲಿ 45,17,075 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.
ಇಂದು ಒಟ್ಟು 1,64,441 ಸ್ಯಾಂಪಲ್ (ರಾಪಿಡ್ 11071+ಆರ್ ಟಿಪಿಸಿಆರ್ 1,53,370) ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರು ಬಿಟ್ಟರೆ ಮೈಸೂರು ಮತ್ತು ತುಮಕೂರಿನಲ್ಲಿ ಇಂದು ಕೂಡ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶ ನೀಡಿದೆ.

ಜಿಲ್ಲೆಗಳ ವಿವರ:ಬಾಗಲಕೋಟೆ 665, ಬಳ್ಳಾರಿ 922, ಬೆಳಗಾವಿ 843, ಬೆಂಗಳೂರು ಗ್ರಾಮಾಂತರ 963, ಬೆಂಗಳೂರು ನಗರ 23,706, ಬೀದರ್ 336, ಚಾಮರಾಜನಗರ 707, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 452, ಚಿತ್ರದುರ್ಗ 126, ದಕ್ಷಿಣ ಕನ್ನಡ 1,191, ದಾವಣಗೆರೆ 672, ಧಾರವಾಡ 824, ಗದಗ 191, ಹಾಸನ 1,403, ಹಾವೇರಿ 236, ಕಲಬುರಗಿ 1,652, ಕೊಡಗು 697, ಕೋಲಾರ 756, ಕೊಪ್ಪಳ 357, ಮಂಡ್ಯ 1,301, ಮೈಸೂರು 2,531, ರಾಯಚೂರು 819, ರಾಮನಗರ 413, ಶಿವಮೊಗ್ಗ 635, ತುಮಕೂರು 2,418, ಉಡುಪಿ 1,526, ಉತ್ತರ ಕನ್ನಡ 734, ವಿಜಯಪುರ 662 ಮತ್ತು ಯಾದಗಿರಿಯಲ್ಲಿ 721 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.