News

ಕೆ.ಸಿ ಜನರಲ್‌ ಆಸ್ಪತ್ರೆಯಿಂದ ಬರೋಬ್ಬರಿ 48 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಬೆಸ್ಕಾಂನಿಂದ ಬಂತು ನೋಟಿಸ್‌!

01 February, 2023 11:04 AM IST By: Hitesh
48 lakh electricity bill outstanding from KC General Hospital: notice from BESCOM!

ಬೆಂಗಳೂರಿನ ಪ್ರತಿಷ್ಠಿತ ಹಾಗೂ ನಿತ್ಯ ಸಾವಿರಾರು ಜನರಿಗೆ ಆಸರೆ ಆಗಿರುವ ಸರ್ಕಾರಿ ಆಸ್ಪತ್ರೆ ಎಂದೇ ಖ್ಯಾತಿ ಗಳಿಸಿರುವ ಕೆ.ಸಿ ಜನರಲ್‌ ಆಸ್ಪತ್ರೆ ಇದೀಗ ವಿಚಿತ್ರವಾದ ಸಮಸ್ಯೆಯೊಂದನ್ನು ಎದುರಿಸುತ್ತಿದೆ. 

ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್‌: ಕೃಷಿ ಕ್ಷೇತ್ರಕ್ಕೆ ಉತ್ತೇಜನದ ನಿರೀಕ್ಷೆ

ಸರ್ಕಾರಿ ಆಸ್ಪತ್ರೆಗೆ ಬೆಸ್ಕಾಂ ನೋಟಿಸ್‌ ಜಾರಿ ಮಾಡಿದೆ. ಕೆಸಿ ಜನರಲ್‌ ಸರ್ಕಾರಿ ಆಸ್ಪತ್ರೆಯು ಬರೋಬ್ಬರಿ 48 ಲಕ್ಷ ರೂಪಾಯಿ ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ನೋಟಿಸ್ ಜಾರಿ ಮಾಡಿದೆ.

ಅಲ್ಲದೇ ಕಾಲಮಿತಿಯಲ್ಲಿ ವಿದ್ಯುತ್‌ ಬಿಲ್‌ ಪಾವತಿ ಮಾಡದೆ ಇದ್ದರೆ, ವಿದ್ಯುತ್‌ ಕಡಿತ ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಸ್ವಾಮ್ಯದ ಕೆಸಿ ಜನರಲ್‌ ಆಸ್ಪತ್ರೆಗೆ ನಿತ್ಯವು ಸಾವಿರಾರು ಜನ ಹೊರ ರೋಗಿಗಳು ಬರುತ್ತಾರೆ.

ಒಳರೋಗಿಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಸಂರ್ಭದಲ್ಲಿ ಆಸ್ಪತ್ರೆಯ ವಿದ್ಯುತ್‌ ಕಡಿತ ಮಾಡುವುದು ತೀವ್ರವಾದ ಚರ್ಚೆಗೆ ಗ್ರಾಸವಾಗಿದೆ.

ಜಯಲಲಿತಾಗೆ ಸೇರಿದ್ದ 11,000 ಸಾವಿರ ರೇಷ್ಮೆ ಉಡುಪು ಹರಾಜಿಗೆ! 

ಕೆ.ಸಿ ಜನರಲ್‌ ಆಸ್ಪತ್ರೆಯೂ ಮಾಸಿಕ ಆಧಾರದ ಮೇಲೆ ಆಸ್ಪತ್ರೆ ಬಿಲ್‌ಗಳನ್ನು ತೆರವುಗೊಳಿಸಿಲ್ಲ. ಲಕ್ಷಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಹೀಗಾಗಿ,  ನೋಟಿಸ್ ಜಾರಿ ಮಾಡಬೇಕಾಯಿತು ಎಂದು ಹೆಸರು ಹೇಳಲು ಇಚ್ಛಿಸದ ಬೆಸ್ಕಾಂನ  ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಎರಡು ತಿಂಗಳ ಹಿಂದೆಯೇ ಆಸ್ಪತ್ರೆಗೆ ಮೊದಲ ನೋಟೀಸ್ ಜಾರಿ ಮಾಡಲಾಗಿತ್ತು.  ಜ.17ರಂದು ಮತ್ತೊಮ್ಮೆ ನೋಟಿಸ್ ನೀಡಲಾಗಿದೆ. ಜ.30ರಂದು ಬೆಸ್ಕಾಂ ಸಿಬ್ಬಂದಿ ವಿದ್ಯುತ್‌ ಬಿಲ್‌ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಕೋಟಿ ವೃಕ್ಷ ಅಭಿಯಾನ, ಮತ್ತೆ ಗಾರ್ಡನ್‌ ಸಿಟಿಗೆ ಜೀವ 

ಇನ್ನು ಆಸ್ಪತ್ರೆ ಆಗಿರುವ ಕಾರಣದಿಂದಾಗಿ ವಿದ್ಯುತ್‌ ಕಡಿತ ಮಾಡಿದರೆ, ಆಸ್ಪತ್ರೆಯಾಗಿರುವುದರಿಂದ ವಿದ್ಯುತ್‌ ಕಡಿತ ಮಾಡಿದರೆ ರೋಗಿಗಳಿಗೆ ತೊಂದರೆ ಎದುರಾಗಲಿದೆ. ಹೀಗಾಗಿ, ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲು ಮುಂದಾಗಿಲ್ಲ.

ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ವಿಚಾರದಲ್ಲೂ ಹೀಗೆಯೇ ಆಗಿದೆ. ನೀರಿನ ಬಿಲ್‌ಗಳನ್ನು ಪಾವತಿ ಮಾಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳು ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಪಾವತಿಸಿದರೆ, ಸರ್ಕಾರಿ ಸಂಸ್ಥೆಗಳು ಪಾವತಿಗಳನ್ನು ವಿಳಂಬ ಧೋರಣೆ ಅನುಸರಿಸುತ್ತಿವೆ ಎಂದು ದೂರುಗಳು ಕೇಳಿಬಂದಿವೆ.  

ಆಸ್ಪತ್ರೆಯ ಮಾಸಿಕ ಬಿಲ್ ತಿಂಗಳಿಗೆ ಸರಾಸರಿ  7ರಿಂದ 8 ಲಕ್ಷ ರೂಪಾಯಿಯ ವರೆಗೆ ಬರಲಿದೆ. ಸಕಾಲದಲ್ಲಿ ಆರೋಗ್ಯ ಇಲಾಖೆಯಿಂದ ಅಗತ್ಯ ಹಣ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ, ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿರುವುದಾಗಿ ವರದಿ ಆಗಿದೆ.  

ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಯ ಮಹಾಪೂರ, 5 ಕೋಟಿ ಬಹುಮಾನ! 

48 lakh electricity bill outstanding from KC General Hospital: notice from BESCOM!

ನೀರು ಮತ್ತು ವಿದ್ಯುತ್ ಬಿಲ್‌ಗಳ ಮೊತ್ತವನ್ನು ಮಾಸಿಕ ನಿರ್ವಹಣೆ ಮೊತ್ತದ ಅಡಿಯಲ್ಲಿ ನಿಗದಿತ ದಿನಾಂಕಗಳಲ್ಲಿ ಪೂರ್ವನಿಯೋಜಿತವಾಗಿ ಬಿಡುಗಡೆ ಮಾಡಬೇಕು. ಆದರೆ, ಪ್ರತಿ ಬಿಲ್ ನಾವು ಇಲಾಖೆಯ ಅನುಮೋದನೆಯನ್ನು ಪಡೆಯುವುದು ಅನಿವಾರ್ಯವಾಗಿದೆ. ಇಲಾಖೆಯಿಂದ ಸಣ್ಣ ಮೊತ್ತದ ಹಣ ಬಿಡುಗಡೆ ಮಾಡುತ್ತಿರುವುದಾಗಿಯೂ ಇದರಿಂದ ಬಿಲ್‌ಗಳು ಬಾಕಿ ಉಳಿದಿವೆ ಎನ್ನಲಾಗಿದೆ.   

PMKisan| ರೈತರಿಗೆ ಸಿಹಿಸುದ್ದಿ: ಪಿ.ಎಂ ಕಿಸಾನ್‌ ಸಮ್ಮಾನ್‌ ನಿಧಿ 8 ಸಾವಿರಕ್ಕೆ ಹೆಚ್ಚಳ ಸಾಧ್ಯತೆ!