News

ಗುಡ್‌ನ್ಯೂಸ್‌: ರಾಜ್ಯದ ರೈತರ ಏಳ್ಗೆಗಾಗಿ 400 ಕೋಟಿ ಅನುದಾನ ಮೀಸಲು- ಸಚಿವ ಬಿ.ಸಿ. ಪಾಟೀಲ

06 July, 2022 3:58 PM IST By: Kalmesh T
400 crore grant reserve for the development of farmers in the state!

ರಾಜ್ಯದಲ್ಲಿ ಕೃಷಿ ಉತ್ಪನ್ನ ಹೆಚ್ಚಿಸಲು ರೈತ ಶಕ್ತಿ ಯೋಜನೆ ಜಾರಿಗೆ ತಂದಿದ್ದು, 400 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಇದನ್ನೂ ಓದಿರಿ: ರಾಜ್ಯದಲ್ಲಿ ಮುಂದುವರೆಯಲಿದೆ ಮಳೆಯಬ್ಬರ; ಇನ್ನೂ 4-5 ದಿನಗಳ ಕಾಲ ಭಾರೀ ಮಳೆ..!

ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿ.ಸಿ. ಪಾಟೀಲ ಮಾತನಾಡಿದರು.

ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆ ಪ್ರೋತ್ಸಾಹಿಸಿ ಇಂಧನದ ಮೇಲಿನ ವೆಚ್ಚ ಕಡಿಮೆ ಮಾಡಲು ಪ್ರತಿ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ 5 ಎಕರೆ ಭೂಮಿಗೆ ಡಿಟಿಬಿ ಮೂಲಕ ಡಿಸೆಲ್‌ ಖರೀದಿಗೆ ಸಹಾಯಧನ ನೀಡುವ ರೈತ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ  ಎಂದರು.

2022ರಲ್ಲಿ ಭಾರತದ ಕಾಫಿ ರಫ್ತು 19 ರಷ್ಟು ಏರಿಕೆ; 1,88,736 ಟನ್‌ ರಫ್ತು!

ರೈತ ಮಹಿಳೆಯರಿಗೆ ಕೃಷಿ ಪ್ರಶಸ್ತಿ

ರೈತ ಮಹಿಳೆಯರಿಗೆ ಪ್ರಾಶಸ್ತ್ಯ ಮತ್ತು ಪ್ರೋತ್ಸಾಹ ನೀಡುವ ಸಲುವಾಗಿ ಪ್ರತ್ಯೇಕ ಕೃಷಿ ಮತ್ತು 'ಪಂಡಿತ ಪ್ರಶಸ್ತಿ' ನೀಡಲು ತೀರ್ಪಾನಿಸಲಾಗಿದೆ.

ಅಷ್ಟೇ ಅಲ್ಲದೇ ರೈತರ ಆದಾಯ ಹೆಚ್ಚಿಸಲು ಸೆಕಂಡರಿ ಕೃಷಿ ನಿರ್ದೇಶನಾಲಯ ಸ್ಥಾಪಿಸಿ, ಉತ್ಪನ್ನಗಳಿಗೆ ಮಾರುಕಟ್ಟೆ ಅವಕಾಶ ಕಲ್ಪಿಸಲು 5 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

187.89 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹ; ₹37,859.34 ಲಕ್ಷ ಕೋಟಿ ಲಾಭ!

ನೈಸರ್ಗಿಕ ಕೃಷಿ ಮೂಲಕ ಸಾವಯವ ಉತ್ಪನ್ನಕ್ಕೆ 10 ಕೋಟಿ ರೂ., ಕೃಷಿ ಸಂಜಿವಿನಿ  ಸಸ್ಯ ಆರೋಗ ಚಿಕಿತ್ಸಾಲಯಗಳನ್ನು ಪ್ರತಿ ಜಿಲ್ಲೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಿಸಲಾಗಿದ್ದು, 100 ಕೃಷಿ ಸಂನಿ ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.