News

ರಾಜ್ಯದಲ್ಲಿ ಬುಧವಾರ ಒಂದೇ ದಿನ 39,998 ಮಂದಿಗೆ ಸೋಂಕು 517 ಜನರ ಸಾವು

13 May, 2021 8:41 AM IST By:

ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಮುಂದುವರೆದಿದ್ದು ಮಹಾಮಾರಿಗೆ ಬುಧವಾರ ಒಂದೇ ದಿನ 517 ಜೀವಗಳು ಬಲಿಯಾಗಿವೆ. ಕಳೆದ 24 ಗಂಟೆಯಲ್ಲಿ 39998 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2053191 ಕ್ಕೇರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 20 ಸಾವಿರದ ಗಡಿ ದಾಟಿದೆ.

ಬೆಂಗಳೂರಿನಲ್ಲಿ ಸಾವಿನ ಸರಮಾಲೆ ನಿಂತಿಲ್ಲ‌. ಒಂದೇ ದಿನ 275 ಜನರು ಸಾವಿಗೀಡಾಗಿದ್ದು‌ ಮೃತರ ಸಂಖ್ಯೆ 8964 ಕ್ರೆ ಹೆಚ್ಛಳವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ 16286‌ ಮಂದಿ ಸೋಂಕು ತಗುಲಿದ್ದು 18209 ಜನರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರೊಂದಿಗೆ 630221 ಮಂದಿ ಬಿಡುಗಡೆ ಹೊಂದಂತಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 999805 ಕ್ಕೆ ಏರಿಕೆಯಾಗಿದೆ.
ಅದೇ ರೀತಿ ರಾಜ್ಯದಲ್ಲಿ 1440621 ಇದುವರೆಗೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 592182 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಇದುವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2053191ರಷ್ಚಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ.

ಬಾಗಲಕೋಟೆ 610, ಬಳ್ಳಾರಿ 1823, ಬೆಳಗಾವಿ 856, ಬೆಂಗಳೂರು ಗ್ರಾಮಾಂತರ 1138, ಬೆಂಗಳೂರು ನಗರ 16286, ಬೀದರ್ 281, ಚಾಮರಾಜನಗರ 517, ಚಿಕ್ಕಬಳ್ಳಾಪುರ 554, ಚಿಕ್ಕಮಗಳೂರು 664, ಚಿತ್ರದುರ್ಗ 192, ದಕ್ಷಿಣ ಕನ್ನಡ 1077, ದಾವಣಗೆರೆ 362, ಧಾರವಾಡ 904, ಗದಗ 347, ಹಾಸನ 1572, ಹಾವೇರಿ 189, ಕಲಬುರಗಿ 646, ಕೊಡಗು 678, ಕೋಲಾರ 815, ಕೊಪ್ಪಳ 278, ಮಂಡ್ಯ 1223, ಮೈಸೂರು 1773, ರಾಯಚೂರು 289, ರಾಮನಗರ 135, ಶಿವಮೊಗ್ಗ 1125, ತುಮಕೂರು 2360, ಉಡುಪಿ 919, ಉತ್ತರ ಕನ್ನಡ 960, ವಿಜಯಪುರ 690 ಮತ್ತು ಯಾದಗಿರಿಯಲ್ಲಿ 753 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.