News

ರಾಜ್ಯದಲ್ಲಿ 10 ಸಾವಿರ ಗಡಿದಾಟಿದ ಕೊರೋನಾ-ಒಂದೇ ದಿನ 14 ಬಲಿ

25 June, 2020 8:46 AM IST By:

ಕರ್ನಾಟಕದಲ್ಲಿ ಕೊರೋನಾ ರೌದ್ರಾವತಾರ ಭೀಕರವಾಗಿ ಗೋಚರಿಸುತ್ತಿದೆ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆಯೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದ್ದರಿಂದ ಜನತೆ ಆತಂಕದಲ್ಲಿದ್ದಾರೆ. ಬುಧವಾರ ಒಂದೇ ದಿನ 397 ಪ್ರಕರಣದೊಂದಿಗೆ ರಾಜ್ಟದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ!, ಬುಧವಾರ ಒಂದೇ ದಿನ ಬರೋಬ್ಬರಿ 14 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 164ಕ್ಕೇರಿಕೆಯಾಗಿದೆ. ಬುಧವಾರ ಒಂದೇ ದಿನ ಬಂದ 397 ಪ್ರಕರಣದೊದಿಗೆ  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10118ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಬುಧವಾರ 149 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 6151ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 3799 ಸಕ್ರಿಯ ಪ್ರಕರಣಗಳಿದ್ದು, 112 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ಒಂದರಲ್ಲಿಯೇ 173 ಹೊಸ ಸೋಂಕಿತರು ಕಂಡುಬಂದಿರುವುದು ರಾಜಧಾನಿಯಲ್ಲಿ ಕೊರೋನಾ ಪರಿಸ್ಥಿತಿ ಕೈಮೀರುತ್ತಿರುವ ಸೂಚನೆ ಕಾಣುತ್ತಿದೆ.

ಬೆಂಗಳೂರಲ್ಲಿ ಸತತ 4ನೇ ದಿನ ಕೊರೋನಾ ಶತಕ:

ರಾಜಧಾನಿ ಬೆಂಗಳೂರಲ್ಲಿ ಕೊರೋನಾ ವೈರಸ್‌ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಸತತ ಒಂದು ವಾರದಿಂದ ಸೋಂಕಿತರ ಸಂಖ್ಯೆ 100ರ ಗಡಿ ದಾಟುತ್ತಿದೆ. ಬುಧವಾರ 173 ಪ್ರಕರಣಗಳು ಕಂಡುಬಂದಿದ್ದು, ಸೋಂಕಿತರ ಸಂಖ್ಯೆ 1678ಕ್ಕೆ ಏರಿಕೆಯಾಗಿದೆ. ಕಳೆದ 6 ದಿನಗಳಿಂದ 840ಕ್ಕೂ ಹೆಚ್ಚು ಪ್ರಕರಣಗಳು ರಾಜಧಾನಿಯಲ್ಲಿ ವರದಿಯಾಗಿವೆ. ಇದರಿಂದ ಬೆಂಗಳೂರಲ್ಲಿ ಬೆಡ್‌ಗಳ ಸಮಸ್ಯೆಯೂ ಕಾಡ್ತಾ ಇರುವುದು ರಾಜ್ಯ ಸರಕಾರ ಹಾಗೂ ಬಿಬಿಎಂಪಿಯ ನಿದ್ದೆಗೆಡಿಸಿದೆ. ಹೊಸ ಸೋಂಕಿತರ ಪೈಕಿ 71 ಜನ ಐಎಲ್‌ಐ ಹಿನ್ನೆಲೆ ಹೊಂದಿದ್ದರೆ, 60ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರುವುದು ನಿಗೂಢವಾಗಿದ್ದು, ಬಿಬಿಎಂಪಿ ಹಾಗೂ ಆರೋಗ್ಯ ಅಧಿಕಾರಿಗಳು ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.

ಹೊಸ ಸೋಂಕಿತರ ಸಂಖ್ಯೆ ಜಿಲ್ಲಾವಾರು ಮಾಹಿತಿ:

ಬೆಂಗಳೂರು 173; ಬಳ್ಳಾರಿ 34; ಕಲಬುರಗಿ 22; ರಾಮನಗರ 22; ಉಡುಪಿ 14; ಯಾದಗಿರಿ 13; ದಕ್ಷಿಣ ಕನ್ನಡ 12; ಧಾರವಾಡ 12; ಕೊಪ್ಪಳ 11; ರಾಯಚೂರು 9; ಉತ್ತರ ಕನ್ನಡ 9; ದಾವಣಗೆರೆ 8; ಚಿಕ್ಕಬಳ್ಳಾಪುರ 8; ಮೈಸೈರಯ 7; ಬೆಂಗಳೂರು ಗ್ರಾಮಾಂತರ 7; ಗದಗ 6; ಕೋಲಾರ 6; ಬೀದರ್‌ 5; ವಿಜಪುರ 4; ಶಿವಮೊಗ್ಗ 3; ಮಂಡ್ಯ 2; ಚಿತ್ರದುರ್ಗ 2; ಕೊಡಗು 2; ಬೆಳಗಾವಿ1; ಹಾಸನ 1; ತುಮಕೂರು 1; ಚಿಕ್ಕಮಗಳೂರು 1.

ಮೃತಪಟ್ಟವರ ವಿವರ: 

ಬೆಂಗಳೂರು ನಗರ 5, ಬಳ್ಳಾರಿ 4, ಕಲಬುರಗಿ 2, ರಾಮನಗರ 2, ತುಮಕೂರು 1.