News

ರಾಜ್ಯದಲ್ಲಿ ಮುಂದುವರಿದ ಕೊರೋನಾ ಸ್ಫೋಟ: ಒಂದೇ ದಿನ 39 ಸಾವಿರ ದಾಟಿದ ಪ್ರಕರಣ, 229 ಸಾವು

28 April, 2021 9:18 PM IST By:
covid-19

ಕರ್ನಾಟಕ ರಾಜ್ಯದಲ್ಲಿ ಕೊರೋನಾ ಮಹಾಸ್ಪೋಟವೇ ಉಂಟಾಗಿದೆ. ದಿನದಿಂದ ದಿನಕ್ಕೆ ದಾಖಲೆಯ ಹೆಚ್ಚಳ ಕಾಣುತ್ತಿರುವ ಕೊರೋನಾ ಬುಧವಾರ ಮತ್ತೆ ಸ್ಫೋಟಗೊಂಡಿದೆ. ಹೌದು  ರಾಜ್ಯದಲ್ಲಿ ಒಂದೇ ದಿನ 39,047 ಹೊಸ ಪ್ರಕರಣಗಳು ದಾಖಲಾಗಿವೆ..
ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದ್ದು 229 ಮಂದಿ ದಾಖಲೆ ಪ್ರಮಾಣದಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 15036 ಕ್ಕೆ ಹೆಚ್ಚಳವಾಗಿದೆ.

ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 328884 ಕ್ಕೆ ಏರಿಕೆಯಾಗಿವೆ. 11,883 ಜನರು ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಬಿಡುಗಡೆಯಾದವರ ಸಂಖ್ಯೆ 1095883ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 2292 ಜನರು ದಾಖಲಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 143982 ಕ್ಜೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ ಇಂದೂ ಹೊಸ ಪ್ರಕರಣಗಳು ಏರಿಕೆಯಾಗಿದ್ದು, 22596 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 710347 ಕ್ಕೆ ಏರಿಕೆಯಾಗಿದೆ.
ಒಂದೇ ದಿನ ನಗರದಲ್ಲಿ 137 ಮಂದಿ ಸಾವಿಗೀಡಾಗಿದ್ದು ನಿನ್ನೆಗಿಂತ ಮೃತರ ಸಂಖ್ಯೆಯಲ್ಲೂ ಏರು ಮುಖದತ್ತ ಸಾಗಿದೆ.
ಮೃತರ ಸಂಖ್ಯೆ 6139 ಕ್ಕೆ ಏರಿದೆ.ಇಂದು ನಗರದಲ್ಲಿ 4530 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಒಟ್ಟು 480055 ಮಂದಿ ಮನೆಗೆ ತೆರಳಿದಂತಾಗಿದೆ.224152 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ. 22.70. ರಷ್ಷಿದೆ ಹಾಗೂ ಸಾವಿನ ಪ್ರಮಾಣ ಶೇ.0.58 ರಷ್ಟಿದೆ.
ಬಾಗಲಕೋಟೆ 333, ಬಳ್ಳಾರಿ 1106, ಬೆಳಗಾವಿ 360, ಬೆಂಗಳೂರು ಗ್ರಾಮಾಂತರ 732, ಚಾಮರಾಜನಗರ 424, ಚಿಕ್ಕಬಳ್ಳಾಪುರ 683, ಚಿಕ್ಕಮಗಳೂರು 297, ಚಿತ್ರದುರ್ಗ 110, ದಕ್ಷಿಣ ಕನ್ನಡ 664, ದಾವಣಗೆರೆ 196, ಧಾರವಾಡ 654, ಗದಗ 129, ಹಾಸನ 1001, ಹಾವೇರಿ 36, ಕಲಬುರಗಿ 901, ಕೊಡಗು 388, ಕೋಲಾರ1194, ಕೊಪ್ಪಳ 444, ಮಂಡ್ಯ 935, ಮೈಸೂರು ,1759, ರಾಯಚೂರು 511, ರಾಮನಗರ 164, ಶಿವಮೊಗ್ಗ 333, ತುಮಕೂರು 1174, ಉಡುಪಿ 664, ಉತ್ತರ ಕನ್ನಡ 301, ವಿಜಯಪುರ. 394 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 295n ಪ್ರಕರಣಗಳು ದಾಖಲಾಗಿವೆ.

ಇಂದು ನಡೆಸಿದ ಒಟ್ಟು ಪರೀಕ್ಷೆಗಳಿಗೆ ಹೋಲಿಸಿದರೆ ಸೋಂಕು ಪತ್ತೆ ಪ್ರಮಾಣ ಶೇ.22.70ಕ್ಕೆ ಏರಿಕೆಯಾಗಿದ್ದು. ಇದು ಸಾರ್ವಕಾಲಿಕ ದಾಖಲೆಯ ಪ್ರಮಾಣವಾಗಿದೆ. ಸೋಂಕು ಸಮುದಾಯ ಹಂತಕ್ಕೆ ಹಬ್ಬಿದ್ದು, ಇದರ ಅಪಾಯದ ಮಟ್ಟವನ್ನು ಸೂಚಿಸುತ್ತಿದೆ. ಸೋಂಕಿನಿಂದ ಸಂಭವಿಸುವ ಮರಣ ಪ್ರಮಾಣ ಕೂಡ ಶೇ. 0.58ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಒಂದರಲ್ಲೇ 22,596 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದಾಗಿ ನಗರದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 22,41,52ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಒಂದೇ ದಿನ 137 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.