News

ಚರ್ಮಗಂಟು ರೋಗ ನಿಯಂತ್ರಿಸಲು ಜಿಲ್ಲೆಗಳಿಗೆ 37.5 ಲಕ್ಷ ಲಸಿಕೆ: ಪ್ರಭು ಚವ್ಹಾಣ

22 December, 2022 10:19 AM IST By: Hitesh
37.5 lakh vaccine to districts to control ringworm: Prabhu Chavan

ರಾಜ್ಯದಲ್ಲಿ ಚರ್ಮಗಂಟು ರೋಗ ನಿಯಂತ್ರಿಸುವ ಉದ್ದೇಶದಿಂದ 35.74 ಲಕ್ಷ ಡೋಸ್ ಲಸಿಕೆಗಳನ್ನು ಖರೀದಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್   ತಿಳಿಸಿದ್ದಾರೆ.

ಚರ್ಮಗಂಟು ರೋಗವನ್ನು ನಿಯಂತ್ರಿಸುವ ಉದ್ದೇಶದಿಂದ ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಉಡುಪಿ ಹಾಗೂ ರಾಯಚೂರು ಜಿಲ್ಲೆಗಳಿಗೆ ತಲಾ  5ಲಕ್ಷ ರೂಪಾಯಿಗಳಂತೆ ಒಟ್ಟು 30 ಲಕ್ಷ ರೂಪಾಯಿ ಅನುದಾನವನ್ನು ತುರ್ತು ಔಷಧ ಪೂರೈಕೆಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. 

COVID ಕೇಂದ್ರ ಸರ್ಕಾರದಿಂದ ತುರ್ತು ಸಭೆ: ಜನನಿಬಿಡ ಪ್ರದೇಶದಲ್ಲಿ ಮಾಸ್ಕ್‌ ಧರಿಸಲು ಸೂಚನೆ 

ಚರ್ಮಗಂಟು ರೋಗ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ಅನುದಾನದಲ್ಲಿ ಪ್ರತಿ ಡೋಸ್ಗೆ 5.25 ರೂಪಾಯಿಯಂತೆ 37.5 ಲಕ್ಷ ಲಸಿಕೆಗಳನ್ನು ಖರೀದಿಸಿ ಜಿಲ್ಲೆಗಳಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.  

ಸದಸ್ಯರಾದ ಮಧು ಜಿ ಮಾದೇಗೌಡ, ಎಸ್ ವಿ ಸಂಕನೂರ, ಶಶಿಲ್ ಜಿ ನಮೋಶಿ, ಪ್ರಾಣೇಶ ಎಂ ಕೆ, ಎಸ್ ರವಿ, ಗೋವಿಂದರಾಜು, ಡಾ. ಡಿ.ತಿಪ್ಪಯ್ಯ ಮತ್ತು ಅ.ದೇವೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಅವರು ವಿವರಣೆ ನೀಡಿದರು.

ಬೆಂಗಳೂರಿನ ಹೆಬ್ಬಾಳದಲ್ಲಿರುವ ರಾಜ್ಯದ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ವತಿಯಿಂದ 35.74 ಲಕ್ಷ ಡೋಸ್ ಲಸಿಕೆಗಳನ್ನು ರಾಜ್ಯ ಸರ್ಕಾರದಿಂದ ಜಿಲ್ಲೆಗಳಿಗೆ ವಿತರಿಸಲಾಗಿದೆ.

ಚರ್ಮಗಂಟು ರೋಗದ ಚಿಕಿತ್ಸೆಗೆ ಔಷಧಿ ಮತ್ತು ಪೂರಕ ರಾಸಾಯನಿಕಗಳನ್ನು ಪೂರೈಸಲು ಹಾಗೂ ಪರಿಹಾರ ಧನಕ್ಕೆ 11ಕೋಟಿ ಹೆಚ್ಚುವರಿ ಅನುದಾನಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಜಾನುವಾರುಗಳಿಗೆ ಲಸಿಕೆ ಹಾಕಲು ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ, ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ತರಬೇತಿ ಪಡೆದ ಲಸಿಕೆದಾರರು, ಮೈತ್ರಿ ಕಾರ್ಯಕರ್ತರನ್ನು ಲಸಿಕಾ ಕಾರ್ಯಕ್ರಮಕ್ಕೆ  ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.  

37.5 lakh vaccine to districts to control ringworm: Prabhu Chavan

ರಾಜ್ಯದ 234 ತಾಲ್ಲೂಕಿನ 15977 ಗ್ರಾಮಗಳಲ್ಲಿ ಚರ್ಮಗಂಟು ರೋಗಕ್ಕೆ 2,37,194 ಜಾನುವಾರುಗಳು ತುತ್ತಾಗಿದ್ದು, ಈ ಪೈಕಿ 1,64,254 ಜಾನುವಾರುಗಳು ಚಿಕಿತ್ಸೆಯಿಂದ ಗುಣಮುಖ ಹೊಂದಿವೆ. ಶೇ.60.57ರಷ್ಟು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ ಎಂದರು.

ಬೀದರ ಜಿಲ್ಲೆಯ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 2020-21ರಲ್ಲಿ 32 ಕೋಟಿ ರೂ. ಭ್ರಷ್ಟಾಚಾರ ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ನೌಕರರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.  

ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದ ಗುತ್ತಿಗೆ ನೌಕರರನ್ನು ವಿಶ್ವವಿದ್ಯಾಲಯದ ಕಚೇರಿಯಿಂದ ಅಮಾನತು ಮಾಡಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ಅವರು ಹೇಳಿದ್ದಾರೆ.

Prabhu Chavan

ಪಶು ವೈದ್ಯರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿ  

ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವ ಸಂಸ್ಥೆಗಳಿಗೆ ಜಾನುವಾರುಗಳ ಚಿಕಿತ್ಸೆಗೆ ತೊಡಕಾಗುವುದನ್ನು ತಪ್ಪಿಸುವ ಉದ್ದೇಶದಿಂದ ಅಧಿಕ ಪ್ರಭಾರ ವ್ಯವಸ್ಥೆ ಮಾಡಲಾಗಿದ್ದು, ಪುಸ್ತುತ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿ ಪ್ರಕ್ರಿಯೆ ಪುಗತಿಯಲ್ಲಿದೆ.

290 ಪಶು ವೈದ್ಯರುಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡು ಸೇವೆ ನೀಡಲಾಗುತ್ತದೆ ಎಂದು ಹೇಳಿದರು.