News

36 Million ವರ್ಷ ಹಳೆಯ ತಿಮಿಂಗಲು ಪತ್ತೆ! ಇದರ Speciality ಏನು?

20 March, 2022 11:27 AM IST By: Kalmesh T
36 Million Year Old Whale Found! What is its specialty?

ಸದಾ ಚರ್ಚೆಯಲ್ಲಿರುವ ಜೀವಿಗಳು

ಭೂಮಿಯಲ್ಲಿ ಅತಿಯಾಗಿ ಕುತೂಹಲ ಮತ್ತು ಚರ್ಚೆಗೆ ಒಳಗಾದ ವಿಷಯಗಳೆಂದರೆ Aliens ಗಳ ಕುರಿತಾದ ಚರ್ಚೆ, ಉಪಗ್ರಹಗಳ ಕುರಿತಾದ ಪರಿಕಲ್ಪನೆ, ಪೌರಾಣಿಕ ಕಥೆಗಳು ಮತ್ತದರ ಅವಶೇಷಗಳು, Dinasaurs ಗಳು ಹಾಗೂ ಸಮುದ್ರವಾಸಿಗಳು. ಹಾಗೆಯೇ ಈ ಎಲ್ಲವುಗಳ ಕುರಿತು ಸುಮಾರು ಜನ ಸಂಶೋಧಕರು ಸಾಕಷ್ಟು ಅಧ್ಯಯನ, ಸಂಶೋಧನೆಗಳನ್ನು ನಡೆಸಿದ್ದಾರೆ. ಈಗ ಇಂಥದ್ದೆ ಒಂದು ಕುತೂಹಲಕರ ವಿಷಯ ನಿಮ್ಮ ಮುಂದೆ ಇಡುತ್ತಿದ್ದೇವೆ. ಏನಂತೀರಾ ಹಾಗಿದ್ದರೆ ಇದನ್ನು ತಪ್ಪದೇ ಓದಿ.

ಹಳೆಯ ತಿಮಿಂಗಿಲದ ತಲೆಬುರುಡೆ ಹೇಗಿದೆ ಗೊತ್ತೆ?

36 ಮಿಲಿಯನ್ ವರ್ಷಗಳ ಹಿಂದೆ ಸಮುದ್ರಗಳಲ್ಲಿ ವಾಸಿಸುತ್ತಿದ್ದ ತಿಮಿಂಗಿಲದ ಪಳೆಯುಳಿಕೆ ̧   ಅವಶೇಷಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಈ ಅವಶೇಷಗಳು ಕಳೆದ ವರ್ಷ Peruvian desert ಅಂದರೆ ಪೆರುವಿಯನ್ ಮರುಭೂಮಿಯಲ್ಲಿ ಕಂಡು ಬಂದಿತ್ತು. ಇದೀಗ ಪ್ಯಾಲಿಯಂಟಾಲಜಿಸ್ಟ್‌ಗಳು (Palaeontologists) ಅದನ್ನು ಅನಾವರಣಗೊಳಿಸಿ , ʼಹೊಸ ಪೆರುವಿಯನ್ ಬೆಸಿಲೋಸಾರಸ್ (Peruvian basiloaurus)ನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇದು 36 Million ವರ್ಷಗಳ ಹಿಂದೆ ಜೀವಿಸಿದ್ದ ಹಳೆಯ ತಿಮಿಂಗಿಲದ ಪೂರ್ಣ ತಲೆಬುರುಡೆಯಾಗಿದೆʼ ಎಂದು ತಂಡದ ಮುಖ್ಯಸ್ಥ Palaeontologist ಆಗಿರುವ ಮಾರಿಯೋ ಉರ್ಬಿನಾ AFP ಗೆ ತಿಳಿಸಿದ್ದಾರೆ. ಲಿಮಾದಿಂದ ದಕ್ಷಿಣಕ್ಕೆ ಸುಮಾರು 350 Kilometres (215 ಮೈಲುಗಳು) ದೂರದಲ್ಲಿರುವ ಒಕುಕಾಜೆ ಮರುಭೂಮಿಯ (kukkaje Desert) ಇಕಾ ಡಿಪಾರ್ಟ್​​ಮೆಂಟ್​ನಲ್ಲಿ 2021ರ ಕೊನೆಯಲ್ಲಿ ಬೆಸಿಲೋಸಾರಸ್ ಕಂಡುಬಂದಿತ್ತು ಎಂದು ಉರ್ಬಿನಾ ಮಾಹಿತಿ ನೀಡಿದ್ದಾರೆ.

17 ಮೀಟರ್ (55 ಅಡಿ) ಉದ್ದದ ತಿಮಿಂಗಲು

ಈ ಪ್ರದೇಶವು ಲಕ್ಷಾಂತರ ವರ್ಷಗಳ ಹಿಂದೆ ಬಹಳಷ್ಟು ಆಳವಿಲ್ಲದ ಸಾಗರವಾಗಿತ್ತು ಎಂದಿರುವ ಅವರು, ಪ್ರಸ್ತುತ ಈ ಪ್ರದೇಶದಲ್ಲಿ ಪ್ರಾಚೀನ ಸಮುದ್ರ ಸಸ್ತನಿ ಅವಶೇಷಗಳು ಕಾಣಸಿಗುತ್ತಿವೆ ಎಂದಿದ್ದಾರೆ. Ocucaje Predator ಎಂದು ಸಂಶೋಧಕರು ತಿಮಿಂಗಿಲನ್ನು ಹೆಸರಿಸಿದ್ದು, ಅದು ಸುಮಾರು 17 ಮೀಟರ್ (55 ಅಡಿ) ಉದ್ದವಿತ್ತು. ಶಾರ್ಕ್ ಮೊದಲಾದ ಆಹಾರವನ್ನು ತಿನ್ನಲು ಅದರ ಬೃಹತ್, ಶಕ್ತಿಯುತ ಹಲ್ಲುಗಳನ್ನು ಬಳಸುತ್ತಿತ್ತು ಎಂದು ಸಂಶೋಧಕರು ಹೇಳಿದ್ದಾರೆ. ‘ಈ ಸಂಶೋಧನೆ ಬಹಳ ಮುಖ್ಯವಾಗಿದೆ. ಇದಕ್ಕೆ ಕಾರಣ, ಜಗತ್ತಿನಲ್ಲಿ ಇದುವರೆಗೆ ಇಂತಹ ಯಾವುದೇ ಮಾದರಿಗಳು ಪತ್ತೆಯಾಗಿಲ್ಲ’ ಎಂದು ಲಿಮಾದಲ್ಲಿರುವ National University of San Marcos ನ ಸಂಶೋಧಕ ಉರ್ಬಿನಾ ಹೇಳಿದ್ದಾರೆ.

ಬೆಚ್ಚಗಿನ ಸಮುದ್ರದಲ್ಲಿ ಅವಿತಿದ್ದ ತಿಮಿಂಗಲು

ತಂಡದ ಸದಸ್ಯ ರೊಡಾಲ್ಫೊ ಸಲಾಸ್-ಗಿಸ್ಮೊಂಡಿ ಮಾಹಿತಿ ನೀಡುತ್ತಾ ‘ಬೆಸಿಲೋಸಾರಸ್’ ಹೇಗೆ ಉಳಿದವುಗಳಿಗಿಂತ ಭಿನ್ನ ಎಂದು ತಿಳಿಸಿದ್ದಾರೆ. ಹಳೆಯ ತಿಮಿಂಗಿಲ ಪ್ರಭೇದಗಳಿಗಿಂತ ಇದರ ಗಾತ್ರ ಮತ್ತು ದರ ಹಲ್ಲುಗಳ ಬೆಳವಣಿಗೆಯಿಂದ ಭಿನ್ನವಾಗಿದೆ. ಇದು ಆಹಾರ ಸರಪಳಿಯ ಮೇಲ್ಭಾಗದಲ್ಲಿದೆ ಎಂದಿದ್ದಾರೆ. ಲಿಮಾದಲ್ಲಿನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದಲ್ಲಿ Vertebrates ಪ್ಯಾಲಿಯಂಟಾಲಜಿ ವಿಭಾಗದ ಮುಖ್ಯಸ್ಥರಾದ ಸಲಾಸ್-ಗಿಸ್ಮೊಂಡಿ ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಕಂಡುಕೊಳ್ಳುವಿಕೆಯಿಂದ ಆದ ಪ್ರಯೋಜನಗಳನ್ನು ತಿಳಿಸಿದ್ದಾರೆ. ಆ ಸಮಯದಲ್ಲಿ ಪೆರುವಿಯನ್ ಸಮುದ್ರವು ಬೆಚ್ಚಗಿತ್ತು. ಈ ಪಳೆಯುಳಿಕೆಗಳಿಂದ ಪೆರುವಿಯನ್ ಸಮುದ್ರದ ಇತಿಹಾಸವನ್ನು ನಾವು ಪುನರ್​ ನಿರ್ಮಿಸಬಹುದು ಎಂದು ಅವರು ಹೇಳಿದ್ದಾರೆ.