News

10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಪಶ್ಚಿಮ ರೈಲ್ವೆಯಲ್ಲಿ ಖಾಲಿಯಿರುವ 3591 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

20 May, 2021 9:15 PM IST By:
Train

ಎಸ್ಎಸ್ಎಲ್ಸಿ ಹಾಗೂ ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳಿಗಿಲ್ಲಿದೆ ಸಂತಸದ ಸುದ್ದಿ. ಪಶ್ಚಿಮ ರೈಲ್ವೆಯಲ್ಲಿ ಒಟ್ಟು 3591 ಹುದ್ದೆಗಳನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಫಿಟ್ಟರ್, ವೆಲ್ಡರ್, ಟರ್ನರ್, ಮೆಷಿನಿಸ್ಟ್, ಕಾರ್ಪೆಂಟರ್, ಪೇಂಟರ್, ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ವೈರ್ ಮನ್, ಶೈತ್ಯೀಕರಣ ಮತ್ತು ಎಸಿ ಮೆಕ್ಯಾನಿಕ್, ಪೈಪ್ ಫಿಟ್ಟರ್, ಪ್ಲಂಬರ್, ಡ್ರಾಫ್ಟ್ ಮ್ಯಾನ್, ಸ್ಟೆನೋಗ್ರಾಫರ್, ಪ್ರೋಗ್ರಾಮಿಂಗ್ ಸಿಸ್ಟಮ್ ಅಡ್ಮಿನಿಸ್ಟ್ರೇಷನ್ ಅಸಿಸ್ಟೆಂಟ್ ಟ್ರೇಡ್ ಗಾಗಿ ಈ ಭರ್ತಿ ಮಾಡಲಾಗುತ್ತದೆ.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯು ಇದೇ ತಿಂಗಳ ಮೇ 25 ರಿಂದ ಆರಂಭವಾಗುತ್ತದೆ. ಅರ್ಜಿ ಸಲ್ಲಿಸಲು ದಿನಾಂಕ 24 ಜೂನ್ 2021 ಕೊನೆಯ ದಿನಾಂಕವಾಗಿರುತ್ತದೆ. ಅಪ್ರೆಂಟಿಸ್ ಗಳ ಈ ನೇಮಕಾತಿಗೆ ಯಾವುದೇ ಪರೀಕ್ಷೆ ಮತ್ತು ಸಂದರ್ಶನ ಇರುವುದಿಲ್ಲ. ನೇಮಕಾತಿಯು ಹತ್ತನೇ ತರಗತಿ ಮತ್ತು ಐಟಿಐ ಕೋರ್ಸ್ ಗಳಲ್ಲಿ ಪಡೆದ ಅಂಕಗಳನ್ನು ಆಧರಿಸಿ ನೇಮಕಾತಿ ಮಾಡಲಾಗುವುದು.

ಎಸ್ಎಸ್ಎಲ್ಸಿ ಮತ್ತು ಐಟಿಐನಲ್ಲಿ ಪಡೆದಈ ಅಂಕಗಳ ಆಧಾರದ ಮೇಲೆ, ಒಂದು ಅರ್ಹತೆಯನ್ನು ರಚಿಸಲಾಗುತ್ತದೆ. ಅದೇ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು www.rrc-wr.com ಈ ಲಿಂಕ್ ಮೇಲೆ ಕ್ಲಿಕ್ ಮಾಡಿ  ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.

ವಯೋಮಿತಿ: ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷಗಳಿಗಿಂತ ಕಡಿಮೆ ಇರಬೇಕು. 2021ರ ಜೂನ್ 24ರಿಂದ ಈ ವಯಸ್ಸನ್ನು ಲೆಕ್ಕ ಹಾಕಲಾಗುತ್ತದೆ.  ಒಬಿಸಿ ವರ್ಗಕ್ಕೆ ಗರಿಷ್ಠ ವಯಸ್ಸಿನ ಮಿತಿಯನ್ನು ಮೂರು ವರ್ಷ, ಎಸ್ಸಿ/ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ದಿವ್ಯಾಂಗರಿಗೆ ಹತ್ತು ವರ್ಷ ಸಡಿಲಿಸಲಾಗುವುದು.

ಅರ್ಜಿ ಶುಲ್ಕ:  ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ. 100 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್ಸಿ, ಎಸ್ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ನೋಟಿಫಿಕೇಷನ್ ವಿವರಣೆ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಬೇಕು. https://www.rrc-wr.com/rrwc/Act_Appr_2021-22/Apprentice_2021-22_Notification.pdf ಹೆಚ್ಚಿನ ಮಾಹಿತಿಗಾಗಿ www.rrc-wr.com  ವೆಬ್ ಸೈಟ್ ಗೆ ಸಂಪರ್ಕಿಸಬಹುದು.