News

ಕಬ್ಬು ರೈತರಿಗೆ 3500 ಕೋಟಿ ಸಬ್ಸಿಡಿ-ಇನ್ನೂ ಮುಂದೆ ಸಬ್ಸಿಡಿ ಹಣ ನೇರವಾಗಿ ರೈತರ ಖಾತೆಗೆ

17 December, 2020 11:49 AM IST By:

ಕೇಂದ್ರ  ಸರ್ಕಾರದ ವಿರುದ್ಧ ರೈತರು ಧರಣಿ ನಡೆಸುತ್ತಿರುವಾಗಲೇ ಸರ್ಕಾರ ರೈತರಿಗೊಂದು ಸುದ್ದಿಯನ್ನು ನೀಡಿದೆ. ಹೌದು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ.

ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ಬಲವಾಗುತ್ತಿರುವ ಸಂದರ್ಭದಲ್ಲಿಯೇ ಆರ್ಥಿಕ ವ್ಯವಹಾರಗಳ ಕೇಂದ್ರ ಸಂಪುಟ ಸಮಿತಿ ಕೃಷಿಗೆ ಸಂಬಂಧಪಟ್ಟ ಕೆಲವೊಂದು ನಿರ್ಧಾರಗಳನ್ನು ಕೈಗೊಂಡಿದೆ.  ಕಬ್ಬು ಬೆಳೆಗಾರರಿಗೆ 3,500 ಕೋಟಿ ರೂಪಾಯಿ ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ನಿರ್ಧಾರದಿಂದ ದೇಶದ 5 ಕೋಟಿ ರೈತರಿಗೆಉಪಯೋಗವಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವೆಡಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನೇರವಾಗಿ   3,500 ಕೋಟಿ ರೂಪಾಯಿ ಸಬ್ಸಿಡಿಯನ್ನು ರೈತರ ಖಾತೆಗೆ ಜಮಾ ಮಾಡಲು ನಿರ್ಧರಿಸಿದೆ.  ಗೋದಾಮಿನಲ್ಲಿ ಸಕ್ಕರೆ ಸ್ಟಾಕ್ ಇರುವ ಕಾರಣದಿಂದ ಸರ್ಕಾರ ಸಕ್ಕರೆ ರಪ್ತು ಮಾಡಲು ನಿರ್ಧರಿಸಿದೆ. ಸರ್ಕಾರ 60 ಲಕ್ಷ ಟನ್ ಸಕ್ಕರೆ ರಫ್ತಿಗೆ ಹಾಗೂ  ಪ್ರತಿ ಟನ್  ಸಕ್ಕರೆಗೆ 6000 ಸಬ್ಸಿಡಿ ನೀಡಲು ನಿರ್ಧರಿಸಿದೆ. ಈ ವರ್ಷ 310  ಲಕ್ಷ ಟನ್ ಸಕ್ಕರೆಯನ್ನು ಉತ್ಪಾದಿಸಲಾಗಿದೆ ಹಾಗೂ 60 ಲಕ್ಷ ಟನ್ ಸಕ್ಕರೆಯನ್ನು ರಫ್ತು ಮಾಡಲಾಗುವುದು.

ಈ ಮೂಲಕ ಬರುವ ಸಬ್ಸಿಡಿ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ನಿರ್ಧಾರ ಮೂಲಕ 5ಕೋಟಿ ಕಬ್ಬು ಬೆಳೆಗಾರರು ಹಾಗೂ ಕಾರ್ಮಿಕ ರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.