News

ಈಗ WhatsApp Group Call ನಲ್ಲಿ 32 ಜನ ಮಾತನಾಡಬಹುದು! ಹೊಸ Updateನ ಬಗ್ಗೆ ಈಗಲೇ ತಿಳಿದುಕೊಳ್ಳಿ

26 April, 2022 12:34 PM IST By: Kalmesh T
32 people can now talk on WhatsApp Group Call! Learn about the new update now

ವಿಶ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Instant Messaging Faltform ಆದ WhatsApp ತನ್ನ ಬಳಕೆದಾರರಿಗೆ ಮತ್ತೊಂದು ಪ್ರಮುಖ ವೈಶಿಷ್ಟ್ಯವೊಂದನ್ನು ಪರಿಚಯಿಸಿದ್ದು, ಕಳೆದ ಕೆಲವು ದಿನಗಳಿಂದಲೂ ಸುದ್ದಿಯಲ್ಲಿದ್ದ 'ಒಂದು WhatsApp ಗ್ರೂಪ್ ಕರೆಯಲ್ಲಿ 32 ಜನರು ಏಕಕಾಲದಲ್ಲಿ ಭಾಗವಹಿಸುವ' ನವೀಕರಣವನ್ನು ತಂದಿದೆ.

ಒಂದು ಕರೆಯಲ್ಲಿ 32 ಭಾಗವಹಿಸುವವರನ್ನು ಅನುಮತಿಸುವ ಇತ್ತೀಚಿನ ಅಪ್‌ಡೇಟ್ ಅನ್ನು ಅಪ್ಲಿಕೇಶನ್‌ನ 22.8.80 ಆವೃತ್ತಿಯೊಂದಿಗೆ ಹೊರತರಲಾಗುತ್ತಿದ್ದು, ಈ ಹೊಸ ನವೀಕರಣವು ಆಡಿಯೊ ಲೇಔಟ್ (Audio layout) , ಸ್ಪೀಕರ್ ಹೈಲೈಟ್ (Speaker Highlight)  ಮತ್ತು ತರಂಗರೂಪಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಇಂಟರ್ಫೇಸ್ (Interface) ನ್ನು ಒಳಗೊಂಡಿರುತ್ತದೆ. WhatsApp ಅಪ್ಲಿಕೇಷನ್ ನಲ್ಲಿ ಎಮೋಜಿ ರಿಯಾಕ್ಷನ್ (Emoji reaction), 2GB ವರೆಗಿನ ದೊಡ್ಡ ಫೈಲ್‌ ಹಂಚಿಕೆ ಸಾಮರ್ಥ್ಯ ಮತ್ತು 32-ಸದಸ್ಯರ ಧ್ವನಿ ಕರೆಗಳ ಸಾಮರ್ಥ್ಯಗಳು ಸೇರಿದಂತೆ ಒಟ್ಟು ಐದು ಹೊಸ ವೈಶಿಷ್ಟ್ಯಗಳು ಬರುತ್ತಿರುವ ಬಗ್ಗೆ WhatsApp ಇತ್ತೀಚಿಗಷ್ಟೇ ಅಧಿಕೃತ ಮಾಹಿತಿಯನ್ನು ನೀಡಿತ್ತು.

ಇದನ್ನೂ ಓದಿರಿ:

Whatsapp Status ನಲ್ಲಿ Location ಸ್ಟೀಕರ್! ಹೇಗೆ? ಏನು? ಇಲ್ಲಿದೆ ಸಂಪೂರ್ಣ ವಿವರ

WhatsApp “ಲಾಸ್ಟ್‌ ಸೀನ್‌”ನಲ್ಲಿ ದೊಡ್ಡ ಬದಲಾವಣೆಗೆ ಮುಂದಾದ ಕಂಪನಿ..! ಏನಿದು ಹೊಸ ಫೀಚರ್‌..?

ಮುಂದೆ WhatsApp ನಲ್ಲಿ ಆಗಲಿರುವ 5 ಹೊಸ ವೈಶಿಷ್ಟ್ಯಗಳು

  • 32 ಜನರ ಧ್ವನಿ ಕರೆಗಳ ಸಾಮರ್ಥ್ಯ (Capacity Of 32 Voice Call)

WhatsApp ಇದೀಗ ತನ್ನ ಅಪ್ಲಿಕೇಷನ್ ನಲ್ಲಿ ಮತ್ತೊಂದು ಮಹತ್ತರ ಬದಲಾವಣೆಯನ್ನು ತಂದಿದ್ದು, WhatsApp ಗ್ರೂಪ್ ಕರೆಗಳಲ್ಲಿ ಒಟ್ಟು 32 ಜನರು ಪಾಲ್ಗೊಳ್ಳಬಹುದಾದ ಅವಕಾಶವನ್ನು ನೀಡಿದೆ. WhatsApp ಗ್ರೂಪ್ ನಲ್ಲಿ ಹೆಚ್ಚಿನ ಸದಸ್ಯರಿಗೆ ಅವಕಾಶ ಕಲ್ಪಿಸಲು, ಕರೆ ಭಾಗವಹಿಸುವವರನ್ನು ಪರದೆಯ ಮೇಲೆ ಹೇಗೆ ಪ್ರದರ್ಶಿಸಲಾಗುತ್ತದೆ ಎಂಬುದನ್ನು ಅಪ್ಲಿಕೇಶನ್‌ನಲ್ಲಿ ತಿಳಿಸಿದ್ದು, ಇದಕ್ಕಾಗಿ WhatsApp ವೇವ್‌ಫಾರ್ಮ್ ಗ್ರಾಫಿಕ್ಸ್ ಅನ್ನು ಬಳಸಲಿದೆ. ಮೊದಲು 8 ಜನರಿಗೆ ಮಾತ್ರ WhatsApp ಗ್ರೂಪ್ ಕರೆಗೆ ಅವಕಾಶವಿತ್ತು.

  • 2.  WhatsApp ನಲ್ಲಿ ಎಮೋಜಿ ಪ್ರತಿಕ್ರಿಯೆಗಳು

WhatsAppನಲ್ಲಿ ಎಮೋಜಿ ಪ್ರತಿಕ್ರಿಯೆಗಳನ್ನು ನೀಡಬಹುದಾದ ವೈಶಿಷ್ಟ್ಯವನ್ನು ತರುತ್ತಿರುವುದಾಗಿ WhatsApp ಸಂಸ್ಥೆ ಅಧಿಕೃತವಾಗಿ ತಿಳಿಸಿದೆ. ಈ ಹಿಂದೆ WhatsApp ಬಳಕೆದಾರರು ಪ್ರತಿಕ್ರಿಯೆಯನ್ನು ತಿಳಿಸಲು ಹೊಸದೊಂದು ಸಂದೇಶವನ್ನು ರಿಪ್ಲೇ ಮಾಡುತ್ತಿದ್ದರು. ಆದರೆ, ಹೊಸ ವೈಶಿಷ್ಟ್ಯವು ಜನರು ತಮ್ಮ ಅಭಿಪ್ರಾಯವನ್ನು ತ್ವರಿತವಾಗಿ ಹಂಚಿಕೊಳ್ಳಲು ಅನುಮತಿಸುತ್ತದೆ. WhatsAppನಲ್ಲಿ ಎಮೋಜಿಗಳು ಮತ್ತು ಸ್ಕಿನ್-ಟೋನ್‌ಗಳು ಬರಲಿವೆ ಎಂದು WhatsApp ಮುಖ್ಯಸ್ಥರಾದ ವಿಲ್ ಕ್ಯಾತ್ ಕಾರ್ಟ್ ಅವರು ತಿಳಿಸಿದ್ದಾರೆ.
SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

  • 2GB ವರೆಗಿನ ದೊಡ್ಡ ಫೈಲ್‌ ಹಂಚಿಕೆ ಸಾಮರ್ಥ್ಯ

2GB ವರೆಗಿನ ದೊಡ್ಡ ಫೈಲ್‌ಗಳನ್ನು ಹಂಚಿಕೊಳ್ಳಬಹುದಾದ ವೈಶಿಷ್ಟ್ಯವನ್ನು WhatsApp ಅಪ್ಲಿಕೇಷನ್ ನಲ್ಲಿ ತರಲಾಗುತ್ತಿದೆ. WhatsApp ಅಪ್ಲಿಕೇಷನ್ ಮೂಲಕ ಫೈಲ್‌ಗಳ ಹಂಚಿಕೆ ಮಿತಿಯನ್ನು ಹೆಚ್ಚಿಸಲು WhatsApp ಸಿದ್ಧವಾಗಿದೆ. ಈ ಹೊಸ ವೈಶಿಷ್ಟ್ಯದ ಅಧಿಕೃತ ರೋಲ್‌ಔಟ್‌ಗೆ ಮುಂಚಿತವಾಗಿ ಫೈಲ್ ಫಾರ್ಮ್ಯಾಟ್ ಕುರಿತು ವಿವರಗಳನ್ನು ಬಹಿರಂಗಪಡಿಸಲಾಗಿದೆ. ಪ್ರಸ್ತುತ WhatsApp ಅಪ್ಲಿಕೇಷನ್ ನಲ್ಲಿ 100MB ಯಷ್ಟು ಫೈಲ್‌ಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು ಎಂಬುದನ್ನು ನಾವಿಲ್ಲಿ ಗಮನಿಸಬಹುದು.

  • 4. WhatsApp ಗ್ರೂಪ್ ಅಡ್ಮಿನ್‌ಗೆ ನಿಯಂತ್ರಣಗಳು

ಮುಂಬರುವ WhatsApp ಅಪ್‌ಡೇಟ್‌ನಲ್ಲಿ, WhatsApp ಗ್ರೂಪ್ ಅಡ್ಮಿನ್‌ಗಳು ತಮ್ಮ ಗ್ರೂಪ್‌ಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲಿದ್ದಾರೆ. ಇದಕ್ಕಾಗಿ WhatsApp ಗ್ರೂಪ್ ಅಡ್ಮಿನ್‌ಗೆ ಹೆಚ್ಚು ನಿಯಂತ್ರಣದ ಹೊಸ ವೈಶಿಷ್ಟ್ಯವನ್ನು ತರಲಾಗುತ್ತಿದ್ದು, ಈ ವೈಶಿಷ್ಟ್ಯದ ರೋಲ್‌ಔಟ್ ಆದ ನಂತರ, ಗ್ರೂಪಿನಲ್ಲಿ ಎಲ್ಲರೂ ಕಳುಹಿಸಬಹುದಾದ ಸಂದೇಶಗಳನ್ನು ಡಿಲೀಟ್ ಮಾಡಬಹುದಾದ ಆಯ್ಕೆಯನ್ನು ಹೊಂದಲಿದ್ದಾರೆ. ಆದರೆ, ಸದ್ಯಕ್ಕೆ, ಈ ಹೊಸ ನಿಯಂತ್ರಣಗಳ ಮಿತಿಗಳು ಮತ್ತು ವಿನಾಯಿತಿಗಳನ್ನು ಬಹಿರಂಗಪಡಿಸಿಲ್ಲ.

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

WhatsApp “ಲಾಸ್ಟ್‌ ಸೀನ್‌”ನಲ್ಲಿ ದೊಡ್ಡ ಬದಲಾವಣೆಗೆ ಮುಂದಾದ ಕಂಪನಿ..! ಏನಿದು ಹೊಸ ಫೀಚರ್‌..?