News

ದೇಶದಲ್ಲಿ ಪ್ರಸಕ್ತ ವರ್ಷ 31.5 ಮಿಲಿಯನ್‌ ಹೆಕ್ಟೇರ್‌ ಗೋಧಿ ಬಿತ್ತನೆ ಸಾಧ್ಯತೆ!

07 December, 2022 10:11 AM IST By: Hitesh
31.5 million hectares of wheat is likely to be sown in the country this year!

ಪ್ರಸಕ್ತ ಋತುವಿನಲ್ಲಿ ಭಾರತದಲ್ಲಿ ಒಟ್ಟಾರೆ 31.5 ಮಿಲಿಯನ್ ಹೆಕ್ಟೇರ್‌ಗಳಲ್ಲಿ ಗೋಧಿ ಬಿತ್ತನೆ ಮಾಡುವ ಸಾಧ್ಯತೆ ಇದೆ

ಎಂದು ದೇಶದ ಗೋಧಿ ಕೃಷಿಯ ಉನ್ನತ ಸಂಸ್ಥೆಯಾಗಿರುವ ಐಸಿಎಆರ್- ಭಾರತೀಯ ಗೋಧಿ ಮತ್ತು ಬಾರ್ಲಿ ಸಂಶೋಧನಾ ಸಂಸ್ಥೆ (ICAR-IIWBR)

ನಿರ್ದೇಶಕ ಜ್ಞಾನೇಂದ್ರ ಸಿಂಗ್ ಅವರು ತಿಳಿಸಿದ್ದಾರೆ.

ಈ ಬಾರಿಯ ಗೋಧಿ ಬಿತ್ತನೆಯ ಪ್ರಮಾಣವು ಕಳೆದ ವರ್ಷಕ್ಕಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಪ್ರಸಕ್ತ ವರ್ಷ    ಅಂದಾಜು 1.5 ಮಿಲಿಯನ್ ಹೆಕ್ಟೇರ್‌ಗಳಷ್ಟು ಹೆಚ್ಚು ಪ್ರದೇಶದ ಬಿತ್ತನೆ ಮಾಡಲಾಗಿದೆ.

ಸಾಮಾನ್ಯವಾಗಿ ಗೋಧಿ ಬಿತ್ತನೆಯನ್ನು ನವೆಂಬರ್ ಪ್ರಾರಂಭದಿಂದ ಡಿಸೆಂಬರ್ ಅಂತ್ಯದವರೆಗೆ ಬಿತ್ತನೆ ಮಾಡಲಾಗುತ್ತದೆ.

ಚೀನಾದ ವುಹಾನ್‌ “ಪ್ರಯೋಗ”ದಿಂದಲೇ ಹರಡಿತಂತೆ ಕೊರೊನಾ ಮಹಾಮಾರಿ!

ಈ ಪೈಕಿ ಇಡೀ ಗೋಧಿ ಸುಗ್ಗಿಯ ಅವಧಿಯಲ್ಲಿ ಈ ವರ್ಷ ಭಾರತ ಬಿತ್ತನೆಯಲ್ಲಿ ಗರಿಷ್ಠ ಸಾಧನೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.  

ಒಟ್ಟಾರೆ ಈ ವರ್ಷ ಭಾರತವು 112 ಮಿಲಿಯನ್ ಟನ್ ಗೋಧಿ ಉತ್ಪಾದಿಸುವ ನಿರೀಕ್ಷೆ ಇದೆ.

ಈ ಪ್ರಮಾಣದಲ್ಲಿ ಗೋಧಿ ಉತ್ಪಾದನೆಯಾದರೆ, ಅದು ಕಳೆದ ಸಾಲಿಗಿಂತ 5 ಮಿಲಿಯನ್ ಟನ್‌ಗಳಷ್ಟು ಅಧಿಕವಾಗಲಿದೆ.   

PmKisan | ಪಿ.ಎಂ ಕಿಸಾನ್‌ ಸಮ್ಮಾನ್‌ 13ನೇ ಕಂತಿನ ಹಣಕ್ಕೆ ಕ್ಷಣಗಣನೆ!  

ಇಳುವರಿ ಹೆಚ್ಚಾಗಲು ಕಾರಣವೇನು ?

ಈ ಬಾರಿ ಗೋಧಿ ಇಳುವರಿಯು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲು ಹಲವು ಕಾರಣಗಳಿವೆ.  

ಪ್ರಸಕ್ತ ವರ್ಷ ರೈತರು ಹೊಸ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ. ಇದು ತಾಪಮಾನದಲ್ಲಾಗುವ ಬದಲಾವಣೆ, ಅಧಿಕ ಶಾಖವನ್ನು ತಡೆದುಕೊಳ್ಳುವ

ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ, ಈ ಬಾರಿ ಉತ್ತಮ ಇಳುವರಿ ನಿರೀಕ್ಷೆ ಮೂಡಿದೆ. 

ಈ ಬಾರಿ ಗರಿಷ್ಠ ಪ್ರಮಾಣದಲ್ಲಿ ಬಿತ್ತನೆಯಾದ ಗೋಧಿ ತಳಿಗಳು

ಈ ಬಾರಿ ಬಿತ್ತನೆ ಮಾಡಲಾದ ಗೋಧಿ ತಳಿಗಳಲ್ಲಿ ಪ್ರಮುಖವಾಗಿ ಡಿಬಿಡಬ್ಲ್ಯೂ (DBW)187, ಡಿಬಿಡಬ್ಲ್ಯೂ 303,

ಡಿಬಿಡಬ್ಲ್ಯೂ 222, ಡಿಬಿಡಬ್ಲ್ಯೂ 327 ಮತ್ತು ಡಿಬಿಡಬ್ಲ್ಯೂ 332. ಇವೆಲ್ಲವುಗಳು ಗೋಧಿಯ ಹೊಸ ತಳಿಗಳಾಗಿವೆ. ಗೋಧಿ ಕೆ.ಜಿ ಸಗಟು ಬೆಲೆ 29.50ರೂ.ಗೆ ಏರಿಕೆ ಕಂಡಿದೆ.

ಮಿದುಳು ಜ್ವರ; ರಾಜ್ಯದ 48 ಲಕ್ಷ ಮಕ್ಕಳಿಗೆ ಲಸಿಕೆ: ಡಾ.ಕೆ ಸುಧಾಕರ್‌

31.5 million hectares of wheat is likely to be sown in the country this year!

ಇನ್ನು ಗೋಧಿಯ ಸಗಟು ಬೆಲೆ ಕೆ.ಜಿಗೆ 30 ರೂ. ವರೆಗೆ ಏರಿಕೆ ಆಗಿದೆ.

ದೇಶದ ಬಹುತೇಕ ಭಾಗಗಳಲ್ಲಿ ಗೋಧಿ ಬೆಲೆ ಪ್ರತಿ ಕೆ.ಜಿಗೆ ರೂ.27ರಿಂದ 29.50 ರೂ. ವರೆಗೆ ಮಾರಾಟವಾಗುತ್ತಿದೆ.

ಇದು ಕನಿಷ್ಠ ಬೆಂಬೆಲ ಬೆಲೆ (ಎಂಎಸ್‌ಪಿ) ಪ್ರತಿ ಕೆ.ಜಿ. 20.15ರೂಪಾಯಿಗಿಂತಲೇ ಶೇ. 30ರಿಂದ 40ರಷ್ಟು ಅಧಿಕವಾಗಿದೆ.

ಭಾರತದ ಗೋಧಿ ಸಂಗ್ರಹಣೆಯು 2022-23 ಮಾರುಕಟ್ಟೆ ವರ್ಷದಲ್ಲಿ 43.444 ಮಿಲಿಯನ್ ಟನ್‌ನಿಂದ 18.792 ಮಿಲಿಯನ್

ಟನ್‌ನ ವರೆಗೆ ಇಳಿಕೆ ಆಗಿದೆ.  ದೇಶೀಯ ಉತ್ಪಾದನೆಯಲ್ಲಿನ ಕುಸಿತ ಮತ್ತು ಖಾಸಗಿ ಕಂಪನಿಗಳ ಆಕ್ರಮಣಕಾರಿ ಖರೀದಿ ಪ್ರಕ್ರಿಯೆಯೇ ಇದಕ್ಕೆ ಕಾರಣವಾಗಿದೆ.  

2022-23 ಗೋಧಿ ಋತುವಿನ ಆರಂಭದಲ್ಲಿ ಗೋಧಿ ರಫ್ತುನ್ನು ಉತ್ತೇಜಿಸಲಾಗಿತ್ತು.

ಆದರೆ, ಕೆಲವೇ ದಿನಗಳಲ್ಲಿ ಹವಾಮಾನ ವೈಪರೀತ್ಯ, ಗೋಧಿ ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆ ಹಾಗೂ ಸ್ಥಳೀಯವಾಗಿ

ಗೋಧಿ ಲಭ್ಯತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರವು ಗೋಧಿ ರಫ್ತಿನ ಮೇಲೆ ನಿರ್ಬಂಧ ವಿಧಿಸಿತು.

ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದ ನಂತರದಲ್ಲಿ ಸಗಟು ಗೋಧಿ ಬೆಲೆ ಏರಿಕೆ ಕಂಡಿತ್ತು.    

Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!