News

ಬಂಪರ್‌ ನ್ಯೂಸ್‌: ಅಂತ್ಯೋದಯ ಕಾರ್ಡ್‌ದಾರರಿಗೆ ಸಿಗಲಿದೆ ವರ್ಷಕ್ಕೆ 3 ಉಚಿತ LPG ಸಿಲಿಂಡರ್‌

15 May, 2022 9:38 AM IST By: Maltesh
LPG

ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಸಿಲಿಂಡರ್‌ ರೇಟ್‌ನಿಂದ ಹೈರಾಣಾಗಿರುವ ಜನರಿಗೆ ಸ್ವಲ್ಪ ರೀಲ್ಯಾಕ್ಸ್‌ ಆಗಿದ್ದು, ಬಿಜೆಪಿ ಸರ್ಕಾರ ಬಂಪರ್‌ ನ್ಯೂಸ್‌ ನೀಡಿದೆ. ಅಂತ್ಯೋದಯ ಕಾರ್ಡ್‌ದಾರರಿಗೆ ಭರ್ಜರಿ ನ್ಯೂಸ್‌ ಒಂದು ಲಭ್ಯವಾಗಿದ್ದು, ಈ ಕಾರ್ಡ್‌ ಉಳ್ಳವರಿಗೆ ಪ್ರತಿ ವರ್ಷ 3 LPG ಸಿಲಿಂಡರ್‌ಗಳನ್ನು ಉಚಿತವಾಗಿ  ನೀಡಲಾಗುದು ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.

ಹೌದು ಇತ್ತೀಚಿಗೆ ನಡೆದ ಎರಡನೇ ಸಂಪುಟ ಸಭೆಯಲ್ಲಿ, ಅಂತ್ಯೋದಯ ಕಾರ್ಡುದಾರರಿಗೆ ಪ್ರತಿ ವರ್ಷ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿತು. ಈ ನಿರ್ಧಾರವು 2022 ರ ರಾಜ್ಯ ಚುನಾವಣೆಯ ಪೂರ್ವದಲ್ಲಿ ಬಿಡುಗಡೆಯಾದ ಬಿಜೆಪಿಯ ಚುನಾವಣಾ ಪ್ರಣಾಳಿಕೆಗೆ ಅನುಗುಣವಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ಪರ್ಷೋತ್ತಮ್ ರೂಪಾಲಾ ಅವರಿಂದ ವಿದ್ಯಾರ್ಥಿಗಳಿಗೆ “ಗೋ ಕಾಶ್ಟ್” ಯಂತ್ರ ವಿತರಣೆ!

ರಸಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಆನ್ಲೈನ್ ಡೀಲರ್ಶಿಪ್ ಪರವಾನಗಿ ಪಡೆಯುವ ವಿಧಾನಗಳು!

ಮುಖ್ಯಮಂತ್ರಿ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಉಚಿತ ಅಡುಗೆ ಅನಿಲ ಸಿಲಿಂಡರ್ ನೀಡಲು ತೀರ್ಮಾನಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಎಸ್‌ಎಸ್ ಸಂಧು ಅವರ ಪ್ರಕಾರ, ಈ ನಿರ್ಧಾರ ಉತ್ತರಾಖಂಡ್‌ ರಾಜ್ಯದ ಒಟ್ಟು  1,84,142 ಅಂತ್ಯೋದಯ ಕಾರ್ಡ್‌ದಾರರಿಗೆ ಲಭ್ಯವಾಗಲಿದೆ. ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಧು, ಈ ಹಿಂದೆ ರೈತರಿಗೆ ಗೋಧಿ ಖರೀದಿಯ ಮೇಲೆ ನೀಡುತ್ತಿದ್ದ 20 ರೂಪಾಯಿ ಬೋನಸ್‌ ಅನ್ನು ಕೂಡ ಮತ್ತೇ ಮುಂದುವರೆಸುವುದಾಗಿ ತಿಳಿಸಿದ್ದಾರೆ.

ಸದ್ಯ  ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಒದಗಿಸುವ ಸಂಪುಟದ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದೆ, ಇದು ಕಲ್ಯಾಣ ರಾಜ್ಯದ ಕಲ್ಪನೆಗೆ ಅನುಗುಣವಾಗಿದೆ ಎಂದು ಹೇಳಿದೆ. "ಇದು ಪ್ರಮುಖ ತೀರ್ಪು." ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ಅನುಸರಿಸಿದೆ ಎಂದು ಅವರು ಹೇಳಿದ್ದಾರೆ.]

ಇದು ಅವರಿಗೆ ಉತ್ತಮ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ರಾಜ್ಯ ಬಿಜೆಪಿ ಪ್ರಚಾರ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್ ಹೇಳಿದ್ದಾರೆ.

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

ಮೇ 31 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಈ ಕ್ರಮವು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಮತ್ತು ಪಕ್ಷವು ಈ ವಿಷಯವನ್ನು ಚುನಾವಣಾ ಆಯೋಗಕ್ಕೆ ಕೊಂಡೊಯ್ಯಲಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿಕೊಂಡಿದೆ.

ಕಾಂಗ್ರೆಸ್ ಪ್ರಕಾರ, ಮೇ 31, 2022 ರಂದು ವಿಧಾನಸಭಾ ಉಪಚುನಾವಣೆ ನಡೆಯಲಿದೆ ಎಂದು ಘೋಷಿಸಿದಾಗ MCC ಜಾರಿಗೆ ಬಂದಿತು. ಪಕ್ಷದ ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರಲು ಈ ಹೇಳಿಕೆಯನ್ನು ಸಾರ್ವಜನಿಕಗೊಳಿಸಲಾಗಿದೆ ಮತ್ತು ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.

#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!

ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್‌ ನಂಬರ್‌ ಅನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡಿ

ಸುಮಾರು 1.8 ಲಕ್ಷ ಅಂತ್ಯೋದಯ ಕಾರ್ಡ್‌ದಾರರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಗುರುತಿಸಲಾದ ಕಾರ್ಡುದಾರರಿಗೆ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲಾಗುವುದು. ಈ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 55 ಕೋಟಿ ರೂಪಾಯಿ ವೆಚ್ಚವಾಗಲಿದೆ.