News

ದ್ವಿತೀಯ ಪಿಯು ಫಲಿತಾಂಶ: ಕಲಾವಿಭಾಗದಲ್ಲಿ ರೈತನ ಮಗ ಟಾಪರ್

15 July, 2020 10:13 AM IST By:

ಮಹಾಮಾರಿ ಕೊರೋನಾ ಸಂಕಷ್ಟದ ನಡುವೆ ರಾಜ್ಯದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 61.81 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.  ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದರೆ  ಶೇ.68.73ರಷ್ಟು ಬಾಲಕಿಯರು, ಶೇ. 54.77ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ.

 ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ ದಕ್ಷಿಣ ಕನ್ನಡ ದ್ವಿತೀಯ ಮತ್ತು ಕೊಡಗು ತೃತೀಯ ಸ್ಥಾನದಲ್ಲಿವೆ. ಈ ಬಾರಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಟಾಪರ್ ವಿವರ ಇಲ್ಲಿದೆ.

ಕಲಾ ವಿಭಾಗ (Arts Department):  

ಕಲಾ ವಿಭಾಗದಲ್ಲಿ ಇಡೀ ರಾಜ್ಯಕ್ಕೆ ಟಾಪರ್​ ಆಗಿ ಕೃಷಿಕನ ಪುತ್ರ ಕರಿಗೌಡ ದಾಸನಗೌಡ್ರ(Karigowda Dasanagowda)  ಹೊರಹೊಮ್ಮಿದ್ದಾರೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಹಾಜನದಹಳ್ಳಿಯ ಕರಿಗೌಡ ಅವರು ಕೊಟ್ಟೂರಿನ ಪಿಯು ಕಾಲೇಜು ವಿದ್ಯಾರ್ಥಿ. 600ಕ್ಕೆ 594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಅಲಂಕರಿಸಿದ್ದಾರೆ. 

ಕರಿಗೌಡರ ತಂದೆ ಮೂರು ಎಕರೆ ಕೃಷಿ ಜಮೀನು ಹೊಂದಿದ್ದು, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬೆಳೆಯುತ್ತಾರೆ. ರಜೆಯಲ್ಲಿ ಕರಿಗೌಡ ಕೂಡ ಕೃಷಿ ಕೆಲಸಕ್ಕೆ ಹೋಗುತ್ತಿದ್ದರು. ಇವರ ಅಕ್ಕ ಕೊಟ್ಟೂರಿನ ಗ್ರಾಮ ಲೆಕ್ಕಾಧಿಕಾರಿ. ಭಾವ ಪೊಲೀಸ್​. ಅಕ್ಕನ ಮನೆಯಿಂದಲೇ ಕರಿಗೌಡ ಕಾಲೇಜಿಗೆ ಹೋಗುತ್ತಿದ್ದರು.

ವಿಜ್ಞಾನ ವಿಭಾಗ (Science Department):

ವಿಜ್ಞಾನ ವಿಭಾಗದಲ್ಲಿ ಉಡುಪಿಯ ವಿದ್ಯೋದಯ ಕಾಲೇಜು ವಿದ್ಯಾರ್ಥಿನಿಯಾಗಿರುವ ಅಭಿಜ್ಞಾ ರಾವ್ ಟಾಪರ್ ಆಗಿದ್ದಾರೆ. ಅಭಿಜ್ಞಾ ರಾವ್ವಿ (Abgignya Rao) ಜ್ಞಾನ ವಿಭಾಗದಲ್ಲಿ 596 ಅಂಕಗಳನ್ನು ಗಳಿಸಿಕೊಂಡಿದ್ದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗ (Commerce Department):

ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ವಿದ್ಯಾಮಂದಿರ್ ಪಿ.ಯು ಕಾಲೇಜಿನ ಅರವಿಂದ ಶ್ರೀವತ್ಸ (Aravind Shreevatsa) 598 ಅಂಕಗಳೊಂದಿಗೆ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.