News

ಕರ್ನಾಟಕ ರಾಜ್ಯದಲ್ಲಿ ಭಾನುವಾರ ಒಂದೇ ದಿನ 25979 ಜನರಿಗೆ ಕೊರೋನಾ ಪಾಸಿಟಿವ್ 626 ಜನರ ಸಾವು

23 May, 2021 9:32 PM IST By:
corona

ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಘೋಷಣೆಯಾದಾಗಿನಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಾಣಿಸಿದೆ. ಭಾನುವಾರ ಕೂಡ ಗುಣಮುಖರ ಸಂಖ್ಯೆ ಹೆಚ್ಚಾಗಿದ್ದು, 35573 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ 1926615 ಮಂದಿ ಚೇತರಿಸಿಕೊಂಡಿದ್ದಾರೆ. ಭಾನುವಾರ ಒಂದೇ ದಿನ 25,979 ಜನರಿಗೆ ಹೊಸ ಸೋಂಕು ತಗುಲಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 472986 ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ರಾಜ್ಯದಲ್ಲಿ 626 ಮಂದಿ ಸಾವಿಗೀಡಾಗಿದ್ದಾರೆ.ಒಟ್ಟು ಮೃತರ ಸಂಖ್ಯೆ 25,282 ಕ್ಕೆ ಹೆಚ್ಚಳವಾಗಿದೆ. ಒಟ್ಡು ಖಚಿತ ಪ್ರಕರಣಗಳ ಸಂಖ್ಯೆ 2424904ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು 362 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 11,216 ಕ್ಕೆ ಏರಿಕೆಯಾಗಿದೆ.
ನಗರದಲ್ಲಿ 7494 ಮಂದಿಗೆ ಹೊಸ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 1119552ಕ್ಕೆ ಹೆಚ್ವಳವಾಗಿದೆ. 12,407 ಇಂದು ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.ಈ ಮೂಲಕ 852493 ಜನರು ಇದುವರೆಗೆ ಚೇತರಿಸಿಕೊಂಡಿದ್ದಾರೆ.

ಜಿಲ್ಲೆಗಳ ವಿವರ ಹೀಗಿದೆ:

ಬಾಗಲಕೋಟೆ 218, ಬಳ್ಳಾರಿ 1190, ಬೆಳಗಾವಿ 1068, ಬೆಂಗಳೂರು ಗ್ರಾಮಾಂತರ 400,  ಬೆಂಗಳೂರು ನಗರ 7494, ಬೀದರ್ 49, ಚಾಮರಾಜನಗರ 407, ಚಿಕ್ಕಬಳ್ಳಾಪುರ 613, ಚಿಕ್ಕಮಗಳೂರು 577 ,ಚಿತ್ರದುರ್ಗ 365, ದಕ್ಷಿಣಕನ್ನಡ 899, ದಾವಣಗೆರೆ 363, ಧಾರವಾಡ 858, ಗದಗ 371,ಹಾಸನ 1618, ಹಾವೇರಿ 243, ,ಕಲಬುರಗಿ 234,ಕೊಡಗು 329, ಕೋಲಾರ 439, ಕೊಪ್ಪಳ 356,ಮಂಡ್ಯ 643, ಮೈಸೂರು 2222,ರಾಯಚೂರು 540, ರಾಮನಗರ 279, ಶಿವಮೊಗ್ಗ 643, ತುಮಕೂರು 1269, ಉಡುಪಿ 909, ಉತ್ತರಕನ್ನಡ 862,ವಿಜಯಪುರ 246 ಮತ್ತು  ಯಾದಗಿರಿ ಜಿಲ್ಲೆಯಲ್ಲಿ 277 ಪ್ರಕರಣಗಳು ದಾಖಲಾಗಿವೆ.