ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ರೈತರು ತಮ್ಮ ಕೃಷಿ ಕಾರ್ಯಗಳಿಗೆ ಎತ್ತು, ಕೋಣಗಳನ್ನು ಹೊರತುಪಡಿಸಿ ಹೆಚ್ಚಾಗಿ ಉಪಯೋಗಿಸವುದು ಟ್ರ್ಯಾಕ್ಟರಗಳನ್ನೇ ಎಂಬುದು ಎಲ್ಲರಿಗೂ ಗೊತ್ತಿದ ವಿಷಯ. ಕಡಿಮೆ ಬಜೆಟ್ನಲ್ಲಿ ಬಳಕೆಯಾಗುವ ಸಣ್ಣ ಟ್ರ್ಯಾಕ್ಟರ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ರೈತರಿಗೆ ಭತ್ತದ ಗದ್ದೆ ಉಳುಮೆ ಸೇರಿದಂತೆ ಬಹು ಉಪಯೋಗವಾಗುತ್ತಿವೆ.
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಟ್ರ್ಯಾಕರ್ ಕಂಪನಿಗಳು ರೈತರ ಬೇಡಿಕೆಗೆ ತಕ್ಕಂತೆ ಸಣ್ಣ ರೈತರು ಸಹ ಟ್ರ್ಯಾಕ್ಟರ್ ಖರೀದಿಸಲು ಸಾಧ್ಯವಾಗುವಂತಹ ದರದಲ್ಲಿ ಟ್ರ್ಯಾಕ್ಟರ್ ಗಳನ್ನು ನಿರ್ಮಿಸುತ್ತಿವೆ. ಅಂತಹದರಲ್ಲಿ ಮಹೀಂದ್ರಾ, ಸೋನಾಲಿಕಾ, ಜಾನ್ ಡೀರ್, ಸ್ವರಾಜ್, ನ್ಯೂ ಹಾಲೆಂಡ್, ಕುಬೋಟಾ, ವಿಎಸ್‌ಟಿ ಟ್ರ್ಯಾಕ್ಟರ್, ಡುಯೆಟ್ಝ್ ಫಾಹ್ರ ಮತ್ತು ಫೋರ್ಸ್ ಸೇರಿದಂತೆ ಇತರ ಟ್ರ್ಯಾಕ್ಟರ್ ಗಳ ಕಂಪನಿಗಳು ಮಾರುಕಟ್ಟೆಯಲ್ಲಿ ಒಳ್ಳೊಳ್ಳೆ ಟ್ರ್ಯಾಕ್ಟರ್ ಗಳನ್ನು ತಂದು ರೈತಾಪಿ ವರ್ಗದವರ ಮನಗೆದ್ದಿವೆ.
ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವು ಮಿನಿ ಟ್ರ್ಯಾಕ್ಟರ್ ಗಳ ಬಗ್ಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಅತ್ಯಂತ ಸಹಾಯಕವಾಗಿರುವ ಕೆಲವು ಕಿರು ಟ್ರ್ಯಾಕ್ಟರ್ ಗಳ ಬಗ್ಗೆ ಇಲ್ಲಿದೆ ಮಾಹಿತಿ
ಮಹೀಂದ್ರಾ ಯುವರಾಜ 215 NXT:
ಈ ಮಿನಿ ಟ್ರ್ಯಾಕ್ಟರ್ ಎಲ್ಲಾ ರೀತಿಯ ಕೃಷಿ ಕೆಲಸಗಳನ್ನು ಸುಲಭಗೊಳಿಸುತ್ತದೆ.. ಇದರ ಬೆಲೆ 2.50 ರಿಂದ 2.75 ಲಕ್ಷ.. ಡಬಲ್ ಸಿಲಿಂಡರ್ ಕೂಲ್ ವರ್ಟಿಕಲ್ ಎಂಜಿನ್ ಹೊಂದಿದೆ 15 ಹೆಚ್.ಪಿ,ಯುಳ್ಳದ್ದಾಗಿದೆ
ಸ್ವರಾಜ್ 717 :
ಈ ಕೈಗೆಟುಕುವ ಮಿನಿ ಟ್ರ್ಯಾಕ್ಟರ್ ವಿಶ್ವಾಸಾರ್ಹ, ಬಳಸಲು ಸುಲಭಮತ್ತು 15 HP 2300 rpm ನೊಂದಿಗೆ ಬರುತ್ತದೆ. 780 ಕೆಜಿ ಲಿಫ್ಟ್ ಸಾಮರ್ಥ್ಯ ಮತ್ತು ವೀಲ್ ಡ್ರೈವ್ 2WD ಹೊಂದಿರುವ ಸ್ವರಾಜ್ 717 ಟ್ರ್ಯಾಕ್ಟರ್ ನ ಅತ್ಯುತ್ತಮ ವೈಶಿಷ್ಟ್ಯವೆಂದರೆ ಡ್ರೈ ಡಿಸ್ಕ್ ಬ್ರೇಕ್ ಗಳು. ಇದು 6 ಫಾರ್ವರ್ಡ್ + 3 ರಿವರ್ಸ್ ಗೇರ್ ಬಾಕ್ಸ್ ನಂತೆ ಕೆಲಸ ಮಾಡಲು ಸುಲಭವಾದ ಗೇರ್ ಶಿಫ್ಟ್ ಹೊಂದಿದೆ. ಮಿನಿ ಟ್ರ್ಯಾಕ್ಟರ್ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ಬೆಲೆ ಯಾದ 2.60 ರಿಂದ 2.85 ಲಕ್ಷ ರೂ.
ಮಹೀಂದ್ರಾ GIVO 225 DI:
ಈ ಮಿನಿ ಟ್ರ್ಯಾಕ್ಟರ್ ಎಲ್ಲಾ ರೀತಿಯ ಕೃಷಿ ಕೆಲಸಗಳನ್ನು ಸುಲಭಗೊಳಿಸುತ್ತದೆ.. ಇದರ ಬೆಲೆ 2.85 ರಿಂದ 3.45 ಲಕ್ಷ.. ಡಬಲ್ ಸಿಲಿಂಡರ್ ಕೂಲ್ ವರ್ಟಿಕಲ್ ಎಂಜಿನ್ ಹೊಂದಿದೆ 20 ಹೆಚ್.ಪಿ,ಯುಳ್ಳದ್ದಾಗಿದೆ. ವಿವಿಧ ಇಂಪ್ಲಾಂಟ್ ಗಳನ್ನು ಎಳೆಯುವ ಉತ್ತಮ ಸಾಮರ್ಥ್ಯ ಹೊಂದಿದೆ. ಇದು 8 ಫಾರ್ವರ್ಡ್ + 4 ರಿವರ್ಸ್ ಗೇರ್ ಬಾಕ್ಸ್ ನಂತೆ ಕೆಲಸ ಮಾಡಲು ಸುಲಭವಾದ ಗೇರ್ ಶಿಫ್ಟ್ ಹೊಂದಿದೆ
ಯುವರಾಜ್-215 NXT :
ಯುವರಾಜ್-215 NXT ಭಾರತದ ಮೊದಲ 15 ಪವರ್ ಯುನಿಟ್ ಟ್ರ್ಯಾಕ್ಟರ್ ಆಗಿದೆ. ಮಹೀಂದ್ರ ಮಿನಿ ಟ್ರ್ಯಾಕ್ಟರ್ 15 ಎಚ್ ಪಿ ಸಿಂಗಲ್ ಸಿಲಿಂಡರ್ ಕೂಲ್ ವರ್ಟಿಕಲ್ ಎಂಜಿನ್ ಹೊಂದಿದೆ. ಚೌಕದ ಸೌಂದರ್ಯವು ಸುಂದರಮತ್ತು ಆಕರ್ಷಕವಾಗಿದೆ. ಈ ಮಿನಿ ಟ್ರ್ಯಾಕ್ಟರ್ ಅನ್ನು ಆಲೂಗಡ್ಡೆ, ಈರುಳ್ಳಿ, ಹತ್ತಿ, ಕಬ್ಬು, ಸೇಬು, ಮಾವು ಮತ್ತು ಕಿತ್ತಳೆ ಯಂತಹ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಬೆಲೆ 2.75 ರಿಂದ 3.00 ಲಕ್ಷ ರೂ.
ಮಹೀಂದ್ರಾ GO 245 DI:
ಈ ಮಿನಿ ಟ್ರ್ಯಾಕ್ಟರ್ ಎಲ್ಲಾ ರೀತಿಯ ಕೃಷಿ ಕೆಲಸಗಳನ್ನು ಸುಲಭಗೊಳಿಸುತ್ತದೆ.. ಇದರ ಬೆಲೆ 3.90 ರಿಂದ 4.05 ಲಕ್ಷ.. ಡಬಲ್ ಸಿಲಿಂಡರ್ ಕೂಲ್ ವರ್ಟಿಕಲ್ ಎಂಜಿನ್ ಹೊಂದಿದೆ 24 ಹೆಚ್.ಪಿ,ಯುಳ್ಳದ್ದಾಗಿದೆ. ವಿವಿಧ ಇಂಪ್ಲಾಂಟ್ ಗಳನ್ನು ಎಳೆಯುವ ಉತ್ತಮ ಸಾಮರ್ಥ್ಯ ಹೊಂದಿದೆ. ಇದು 6 ಫಾರ್ವರ್ಡ್ + 4 ರಿವರ್ಸ್ ಗೇರ್ ಬಾಕ್ಸ್ ನಂತೆ ಕೆಲಸ ಮಾಡಲು ಸುಲಭವಾದ ಗೇರ್ ಶಿಫ್ಟ್ ಹೊಂದಿದೆ