ಕನ್ನಡ ಪುಸ್ತಕ ಪ್ರಿಯರಿಗೆ ಇಲ್ಲಿದೆ ಸಂತಸದ ಸುದ್ದಿ. ಸಪ್ನ ಬುಕ್ ಹೌಸ್ ರಾಜ್ಯೋತ್ಸವದ ಅಂಗವಾಗಿ ಕನ್ನಡ ಪುಸ್ತಕ ಖರೀದಿಸುವವರಿಗೆ ರಿಯಾಯಿತಿ ಘೋಷಿಸಿದೆ.ಯಾವುದಾದರೂ ಕನ್ನಡ ಪುಸ್ತಕ ಖರೀದಿ ಮಾಡಬಯಸಿದರೆ ಇದೇ ತಿಂಗಳಲ್ಲಿ ಖರೀದಿಸಿ ರಿಯಾಯಿತಿ ಪಡೆಯಿರಿ.
ಪ್ರತಿವರ್ಷದಂತೆ ಈ ವರ್ಷವೂ ಸಹ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸಪ್ನ ಬುಕ್ ಹೌಸ್ ನವೆಂಬರ್ 1ರಿಂದ 30 ರವರೆಗೆ ಕನ್ನಡ ಪುಸ್ತಕಗಳಿಗೆ ಶೇ 10ರಿಂದ ಶೇ 20ರಷ್ಟು ರಿಯಾಯಿತಿ ಘೋಷಿಸಿದೆ.
ಈ ತಿಂಗಳಲ್ಲಿ 200 ಮೌಲ್ಯದ ಪುಸ್ತಕ ಖರೀದಿಸಿದರೆ ಸಪ್ನ ಸದಸ್ಯತ್ವ ಕಾರ್ಡ್ ನೀಡಲಾಗುತ್ತಿದೆ. ಇದರಿಂದ ಒಂದು ವರ್ಷದ ಅವಧಿಯಲ್ಲಿ ಪುಸ್ತಕ ಪ್ರೇಮಿಗಳು ಯಾವುದೇ ಶಾಖೆಗೆ ಹೋದರೂ ಕಾರ್ಡ್ ತೋರಿಸಿ ಶೇ 10ರಷ್ಟು ರಿಯಾಯಿತಿ ಪಡೆಯಬಹುದು.
‘ಓದುಗರ ಆಯ್ಕೆ ಸಮೃದ್ಧ ಬೆಳೆ’ ಎನ್ನುವ ಪುಸ್ತಕ ಪ್ರದರ್ಶನ ಆರಂಭಿಸಲಾಗಿದ್ದು, ಇಲ್ಲಿ ಪುಸ್ತಕ ಖರೀದಿಸಿದರೆ ಶೇ 15ರಷ್ಟು ರಿಯಾಯಿತಿ ಮತ್ತು ಸಪ್ನದ ಎಲ್ಲ ಕನ್ನಡ ಪ್ರಕಟಣೆಗಳಿಗೆ ಶೇ 20ರಷ್ಟು ರಿಯಾಯಿತಿ ನೀಡಲಾಗುವುದು.