News

2021 ರಲ್ಲಿ ಶನಿವಾರ, ಭಾನುವಾರ ಹೊರತುಪಡಿಸಿ 20 ದಿನ ಸರ್ಕಾರಿ ರಜೆ

22 November, 2020 6:00 AM IST By:

ರಾಜ್ಯ ಸರಕಾರ 2021ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಪ್ರತಿ ತಿಂಗಳ ಎರಡನೇ ಶನಿವಾರ,  ಭಾನುವಾರ  ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ಒಟ್ಟು 20 ದಿನಗಳ ರಜೆಯನ್ನು ಘೋಷಿಸಲಾಗಿದೆ.

ಒಟ್ಟು 20 ಸಾರ್ವತ್ರಿಕ ರಜೆ, 52 ಭಾನುವಾರ, ಪ್ರತಿ ತಿಂಗಳ 2ನೇ ಮತ್ತು ನಾಲ್ಕನೇ ಶನಿವಾರ ರಜೆ ಜೊತೆಗೆ 19 ಪರಿಮಿತ ರಜೆಗಳನ್ನು ಘೋಷಿಸಲಾಗಿದೆ.

ಏಪ್ರಿಲ್‌ 25 ರಂದು ಮಹಾವೀರ ಜಯಂತಿ ಹಾಗೂ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬರಲಿದೆ. ಡಿಸೆಂಬರ್‌ 25 ರಂದು ಕ್ರಿಸ್‌ಮಸ್‌ ನಾಲ್ಕನೇ ಶನಿವಾರದಂದು ಬರಲಿದೆ. ಹಾಗಾಗಿ ಈ ದಿನಗಳಂದು ಸಾರ್ವತ್ರಿಕ ರಜೆ ಘೋಷಿಸಿಲ್ಲ.

ರಜೆಗಳ ವಿವರ:

ದಿನಾಂಕ

ವಾರಗಳು

ಸಾರ್ವತ್ರಿಕ ರಜಾ ದಿನಗಳು

ಜನವರಿ 14

ಗುರುವಾರ

ಉತ್ತರಾಯಣ ಪುಣ್ಯ ಕಾಲ, ಮಕರ ಸಂಕ್ರಾಂತಿ

ಜನವರಿ 26

ಮಂಗಳವಾರ

ಗಣರಾಜ್ಯೋತ್ಸವ

ಮಾರ್ಚ್‌ 11

ಗುರುವಾರ

ಮಹಾ ಶಿವರಾತ್ರಿ

ಏಪ್ರಿಲ್‌ 2

ಶುಕ್ರವಾರ

ಗುಡ್‌ ಫ್ರೈಡೇ

ಏಪ್ರಿಲ್‌ 13

ಮಂಗಳವಾರ

ಯುಗಾದಿ

ಏಪ್ರಿಲ್‌ 14

ಬುಧವಾರ

ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ

ಮೇ 1

ಶನಿವಾರ

ಕಾರ್ಮಿಕ ದಿನಾಚರಣೆ

ಮೇ 14

ಶುಕ್ರವಾರ

ಬಸವ ಜಯಂತಿ/ಅಕ್ಷಯ ತೃತೀಯ/ ಖುತುಬ್‌ ಎ ರಂಜಾನ್

ಜುಲೈ 21

ಬುಧವಾರ

ಬಕ್ರೀದ್

ಆಗಸ್ಟ್‌ 20

ಶುಕ್ರವಾರ

ಮೊಹರಂ ಕಡೇ ದಿನ

ಸೆಪ್ಟೆಂಬರ್‌ 10

ಶುಕ್ರವಾರ

ವರ ಸಿದ್ಧಿವಿನಾಯಕ ವ್ರತ

ಅಕ್ಟೋಬರ್‌ 2

ಶನಿವಾರ

ಗಾಂಧಿ ಜಯಂತಿ

ಅಕ್ಟೋಬರ್ ‌6

ಬುಧವಾರ

ಮಹಾಲಯ ಅಮವಾಸ್ಯೆ

ಅಕ್ಟೋಬರ್‌ 14

ಗುರುವಾರ

ಮಹಾ ನವಮಿ, ಆಯುಧ ಪೂಜೆ

ಅಕ್ಟೋಬರ್‌ 15

ಶುಕ್ರವಾರ

ವಿಜಯ ದಶಮಿ

ಅಕ್ಟೋಬರ್‌ 20

ಬುಧವಾರ

ಮಹರ್ಷಿ ವಾಲ್ಮೀಕಿ ಜಯಂತಿ, ಈದ್‌ ಮಿಲಾದ್‌

ನವೆಂಬರ್‌ 1

ಸೋಮವಾರ

ಕನ್ನಡ ರಾಜ್ಯೋತ್ಸವ

ನವೆಂಬರ್‌ 3

ಬುಧವಾರ

ನರಕ ಚತುರ್ದಶಿ

ನವೆಂಬರ್‌ 5

ಶುಕ್ರವಾರ

ಬಲಿ ಪಾಡ್ಯಮಿ, ದೀಪಾವಳಿ

ನವೆಂಬರ್‌ 22

ಸೊಮವಾರ

ಕನಕದಾಸ ಜಯಂತಿ

ಮುಸ್ಲಿಂ ಸಮುದಾಯದ ಹಬ್ಬಗಳು ಘೋಷಿತ ದಿನಾಂಕದ ಬದಲು ಬೇರೆ ದಿನ ಬಂದರೆ, ನಿಗದಿತ ದಿನಾಂಕದಂದು ರಜೆ ನೀಡದೆ ಹಬ್ಬದ ದಿನ ಆ ಸಮುದಾಯದ ಸರಕಾರಿ ನೌಕರರಿಗೆ ರಜೆ ನೀಡಬಹುದು ಎಂದು ಸರಕಾರ ತಿಳಿಸಿದೆ. ಇದರಲ್ಲಿ ಶಿಕ್ಷಣ ಇಲಾಖೆಯ ರಜೆಗಳು ಒಳಗೊಂಡಿಲ್ಲ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತ್ಯೇಕ ರಜೆ ಪಟ್ಟಿ ಬಿಡುಗಡೆ ಮಾಡಲಿದೆ.