ಬಂಗಾಳಕೊಲ್ಲಿಯಲ್ಲಿ ವಾಯುಭಾರ ಉಂಟಾದ ಕಾರಣ ರಾಜ್ಯದ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಮೈಸೂರು, ಕೊಡಗು, ಸೇರಿದಂತೆ ಒಳನಾಡಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಕಾರಣ ಅದರ ಪ್ರಭಾವ ರಾಜ್ಯದ ಮೇಲೂ ಬೀರಲಿದೆ. ಡಿಸೆಂಬರ್ 30 ರಿಂದ ಈ ಮಳೆ ಆರಂಭವಾಗಲಿದ್ದು, ಸಾಧಾರಣವಾಗಿ 2 ದಿನಗಳವರೆಗೆ ಮುಂದುವರೆಯಲಿದೆ.
80 ಕೋಟಿಗೂ ಹೆಚ್ಚು ಜನರಿಗೆ ಇನ್ನೂ 1 ವರ್ಷ ಉಚಿತ ಪಡಿತರ
ಇತ್ತ ಚಾಮರಾಜನಗರ, ಮೈಸೂರು ಹಾಗೂ ಕೊಡಗು ಭಾಗದಲ್ಲಿ ಮಳೆ ಅಧಿಕ ಪ್ರಮಾಣದಿಂದ ಕೂಡಿರಲಿದೆ. ಇನ್ನಿತರ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳಿವೆ. ಇಂದು ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರದಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಈ ರಾಜ್ಯಗಳಲ್ಲಿ ಕೂಡ ಮಳೆ ಸಾಧ್ಯತೆ..ಹವಾಮಾನ ಇಲಾಖೆ ಸೂಚನೆ
ಅಸ್ಸಾಂ, ನಾಗಾಲ್ಯಾಂಡ್, ಒಡಿಶಾ, ಹರಿಯಾಣ, ಚಂಡಿಗಢ, ಪಂಜಾಬ್, ಉತ್ತರ ಪ್ರದೇಶ ಹಾಗೂ ದೆಹಲಿ ಭಾಗಗಳಲ್ಲಿ ಶೀತ ಹವಾಮಾನದ ಅಲೆಗಳು ತೀವ್ರಗೊಳ್ಳಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಲ್ಲಿ 5 ದಿನಗಳವರೆಗೆ ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ. ಅಲ್ಲಲ್ಲಿ ಲಘು ತುಂತುರು ಮಳೆಯಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.