News

15,000 ಸಾವಿರ ರೂ. ಚುನಾವಣೆಯಲ್ಲಿ ಗೆದ್ದರೆ ಪ್ರತಿ ವರ್ಷ ರೈತರಿಗೆ: ಜನಾರ್ದನ ರೆಡ್ಡಿ ಭರವಸೆ!

27 February, 2023 11:49 AM IST By: Hitesh
15,000 thousand to farmers every year if winning the election: Janardhan Reddy promises!

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹೊಸ ಹೊಸ ಭರವಸೆಗಳನ್ನು ನೀಡುವುದು ತರಾವರಿ ಆಶ್ವಾಸನೆಗಳನ್ನು ನೀಡುವುದು ಮಾಮೂಲಿ.

ರಾಜ್ಯದಲ್ಲಿ ಕೋಟ್ಯಾಂತರ ರೂಪಾಯಿ ಮೊತ್ತದ ಯೋಜನೆಗೆ: ಸೋಮವಾರ ಮೋದಿಯಿಂದ ಚಾಲನೆ

ಇದೀಗ ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ದ ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಇಂತಹದ್ದೇ ಒಂದು ಆಶ್ವಾಸನೆಯನ್ನು ನೀಡಿದೆ.

ಈ ಭರವಸೆಗಳನ್ನು ಹಾಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗದಿದ್ದರೆ, ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.

7th pay commission 7ನೇ ವೇತನ ಆಯೋಗ ಅನುಷ್ಠಾನಕ್ಕೆ ಆಗ್ರಹಿಸಿ ಸರ್ಕಾರಿ ನೌಕರರಿಂದ ಮಾ. 1ರಿಂದ ಕೆಲಸಕ್ಕೆ ಗೈರು!

ಹೌದು ಹೆಚ್ಚು ನೆಗೆಟಿವ್‌ ವಿಚಾರಗಳಿಂದಲೇ ಖ್ಯಾತಿಯಲ್ಲಿರುವ ಜನಾರ್ದನ ರೆಡ್ಡಿ ಅವರು ಇತ್ತೀಚಿಗೆ ಹೊಸ ಪಕ್ಷವನ್ನು ಪ್ರಾರಂಭಿಸಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ದಿನದಿಂದ ದಿನಕ್ಕೆ ಚುನಾವಣಾಯ ಆರ್ಕಷಣೆಯ ಕೇಂದ್ರಬಿಂದುವಾಗುತ್ತಿದೆ.  

PMKisanUpdate ಪಿ.ಎಂ ಕಿಸಾನ್‌ ಹಣ ಇದೇ ದಿನ ನಿಮ್ಮ ಖಾತೆಗೆ ಬರಲಿದೆ!

Janardhan Reddy

ಕೆಆರ್‌ಪಿಪಿ 40 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದಾರೆ.

ಇದೀಗ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ರೈತ ಕುಟುಂಬಕ್ಕೆ ಪ್ರತಿ ವರ್ಷವೂ 15,000 ರೂಪಾಯಿ ಸಹಾಯ ಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಜನಾರ್ದನ ರೆಡ್ಡಿ ಅವರು ಈಚೆಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಅಲ್ಲದೇ ಈಗಾಗಲೇ ಚುನಾವಣೆಗೆ ಸಂಬಂಧಿಸಿಂತೆ

ಪ್ರಚಾರದ ಸಿದ್ಧತೆಗಳನ್ನೂ ಅವರು ಪ್ರಾರಂಭಿಸಿ ಆಗಿದೆ. ಚುನಾವಣಾ ಪ್ರಚಾರಕ್ಕೆ ಅವರ ಮಗಳು ಹಾಗೂ ಪತ್ನಿ ಸಹ ಸಾಥ್‌ ನೀಡಿದ್ದಾರೆ.

ವಿವಿಧ ರಾಜಕೀಯ ಪಕ್ಷದಲ್ಲಿ ಟಿಕೆಟ್‌ ಸಿಗದೆ ಇರುವವರು ಹಾಗೂ ಕಡೆಗಣನೆಗೆ ಒಳಪಟ್ಟವರೂ ಸಹ ಜನಾರ್ದನ ರೆಡ್ಡಿ ಅವರ ಪಕ್ಷಕ್ಕೆ ಕ್ರಮೇಣ ಸೇರ್ಪಡೆ ಆಗುತ್ತಿದ್ದಾರೆ.  

ಜನಾರ್ದನ ರೆಡ್ಡಿ ಅವರು ಇನ್ನೂ ಹಲವು ಭರವಸೆಗಳನ್ನು ನೀಡಿದ್ದಾರೆ. ಅದರಲ್ಲಿ ರೈತರಿಗೆ ಬೀಜ ಹಾಗೂ ರಸಗೊಬ್ಬರವನ್ನು ಪೂರೈಸುವ

ಉದ್ದೇಶದಿಂದ ರೈತ ಭರವಸೆ ಕೇಂದ್ರಗಳನ್ನು ಪ್ರಾರಂಭಿಸುವುದಾಗಿಯೂ ತಿಳಿಸಿದ್ದಾರೆ.

ಇನ್ನು ರಾಜ್ಯದ ನಿರುದ್ಯೋಗಿ ಯುವಕರಿಗೆ ಮಾಸಿಕ 2,500 ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ.  

ಈ ಭರವಸೆಗಳನ್ನು ಹಾಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗದಿದ್ದರೆ, ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ. 

Aadhar Card -Sim Card Link ಸಿಮ್‌ ಕಾರ್ಡ್‌ಗೂ ಆಧಾರ್‌ ಕಾರ್ಡ್‌ ಜೋಡಣೆ: ಕಾರಣ ಏನು ಗೊತ್ತೆ ?