News

PM Kisan: ಪಿಎಂ ಕಿಸಾನ್ ಯೋಜನೆಯಡಿ 5.61 ಲಕ್ಷ ರೈತರಿಗೆ ಸುಮಾರು 1130 ಕೋಟಿ!

16 March, 2023 8:00 PM IST By: Kalmesh T
1130 crore for 5.61 lakh farmers under PM Kisan scheme!

ಬೆಳಗಾವಿಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ 5.61 ಲಕ್ಷ ರೈತರಿಗೆ ಸುಮಾರು 1130 ಕೋಟಿ ರೂ.ಗಳು ತಲುಪಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಬಸವಣ್ಣನವರ ಪ್ರತಿಮೆ ಸ್ಥಾಪನೆ – ಸಿಎಂ

ಅವರು ಇಂದು ಜಿಲ್ಲಾಡಳಿತ ಬೆಳಗಾವಿ ಇವರ ವತಿಯಿಂದ ರಾಮದುರ್ಗ ತಾಲ್ಲೂಕಿನ ಬಟಕುರ್ಕಿ ಯಲ್ಲಿ ಆಯೋಜಿಸಿರುವ  ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾವೇಶ, ಅನುಷ್ಠಾನ ಹಾಗೂ  ಅರಿವು ಕಾರ್ಯಕ್ರಮದಲ್ಲಿಪಾಲ್ಗೊಂಡು ಮಾತನಾಡಿದರು.

ಇಂಥ ದೊಡ್ಡ ಸಹಾಯವನ್ನು ನರೇಂದ್ರ ಮೋದಿಯವರು ರಾಜ್ಯಕ್ಕೆ ಮಾಡಿದ್ದಾರೆ.  ಜಲ್ ಜೀವನ್ ಮಿಷನ್ ಅಡಿ ಕಳೆದ 3 ವರ್ಷಗಳಲ್ಲಿ 12 ಕೋಟಿ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 40 ಲಕ್ಷ  ಮನೆಗಳಿಗೆ ನೀರು ಒದಗಿಸಲಾಗಿದೆ. ಈ ವರ್ಷ ಇನ್ನೂ 25 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಗುರಿ ಇದೆ ಎಂದರು.

ಭಾರತೀಯ ಸಿರಿಧಾನ್ಯವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತೇಜಿಸಲು APEDA ಗೆ ವಹಿಸಲಾಗಿದೆ

6.57 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ

ಬೆಳಗಾವಿಯಲ್ಲಿ ಒಟ್ಟು 6.57 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕಳೆದ 2 ವರ್ಷಗಳ ಹಿಂದೆ  ಬೆಳಗಾವಿಯ ಪ್ರವಾಹದ ಸಂದರ್ಭದಲ್ಲಿ ಮನೆ ಬಿದ್ದವರಿಗೆ 5 ಲಕ್ಷ  ರೂ. ನೀಡಿದರು.

ಕರ್ನಾಟಕದಲ್ಲಿ ಮಾತ್ರ ಬಿ.ಎಸ್.ಯಡಿಯೂರಪ್ಪ ಅವರು ಈ ರೀತಿಯ ಪರಿಹಾರ ಒದಗಿಸಿದರು. 

ಮಲಪ್ರಭಾ ದಡದಲ್ಲಿ ಕೊರೆತ ಆಗಿದ್ದ ಸಂದರ್ಭದಲ್ಲಿ 125 ಕೋಟಿ ಅನುದಾನ ನೀಡಿ ರಕ್ಷಣಾ ಗೋಡೆಯನ್ನು ಕಟ್ಟಲು ಟೆಂಡರ್ ಆಗಿ ಕೆಲಸ ಪ್ರಾರಂಭವಾಗಿದೆ. ಪ್ರವಾಹ ಬಂದು ಒಂದು  ವರ್ಷದೊಳಗೆ ನಮ್ಮ ಸರ್ಕಾರ ಈ ತೀರ್ಮಾನ ಮಾಡಿದೆ.  ಹೊಸ ವ್ಯವಸ್ಥೆಯಲ್ಲಿ ಕೂಡಲೇ ಸ್ಪಂದಿಸಿ ಕೆಲಸ  ಮಾಡುವುದು ನಮ್ಮ ಧರ್ಮ ಎಂದರು.

ಬೆಳೆ ನಾಶಕ್ಕೆ ದುಪ್ಪಟ್ಟು ಪರಿಹಾರ: ಕೇವಲ 2 ತಿಂಗಳಲ್ಲಿ ಪರಿಹಾರ!

ಬೆಳಗಾವಿಯಲ್ಲಿ 1, 2, 370 ಮಕ್ಕಳಿಗೆ ರೈತ ವಿದ್ಯಾ ನಿಧಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಗೂ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ.  ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 16 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, 53 ಲಕ್ಷ ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ಡಿಬಿಟಿ ಮೂಲಕ  ಹಣ ಪಾವತಿಯಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವಚ್ಛ ಭಾರತ, ಬೆಳಕು, ಉಜ್ವಲ ಮೂಲಕ ಗ್ಯಾಸ್ ಸಂಪರ್ಕ ನೀಡಲಾಗಿದೆ.   ರೈತ ವಿದ್ಯಾ ನಿಧಿ ಯೋಜನೆಯಡಿ 13 ಲಕ್ಷ ರೈತರ ಮಕ್ಕಳಿಗೆ ಈ ಯೋಜನೆ ತಲುಪಿದೆ. ಬೆಳಗಾವಿಯಲ್ಲಿ 1, 2, 370 ಮಕ್ಕಳಿಗೆ ರೈತ ವಿದ್ಯಾ ನಿಧಿ ದೊರೆತಿದೆ.

ದುಡಿಯುವ ವರ್ಗ ಸಬಲರಾಗಿದ್ದಾಗ ರಾಜ್ಯದ   ಅಭಿವೃದ್ಧಿಯಾಗುತ್ತದೆ. ಸಮಸ್ಯೆ ಅರಿತು,  ಸಂವೇದನಾಶೀಲವಾಗಿ  ಸರ್ಕಾರ ಕೆಲಸ ಮಾಡುತ್ತಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ 50 ಸಾವಿನ  ಸಂಘಗಳಿಗೆ  ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.