News

ಕಬ್ಬು ಬೆಳೆಗಾರರಿಗೆ ಪ್ರತಿ ಎಕರೆಗೆ 10 ಸಾವಿರ ರೂಪಾಯಿ ಸಬ್ಸಿಡಿ

18 December, 2020 3:37 PM IST By:

ಕೇಂದ್ರ ಸರ್ಕಾರದ ವಿರುದ್ಧ ದೇಶದೆಲ್ಲಡೆ ರೈತರು ಪ್ರತಿಭಟನೆ ನಡೆಸುತ್ತಿರುವಾಗಲೆ  ಒಂದೊಂದೇ ರಾಜ್ಯದ ರೈತರಿಗೆ ರಾಜ್ಯ ಸರ್ಕಾರಗಳು ಸಿಹಿಸುದ್ದಿಯನ್ನು ನೀಡುತ್ತಿವೆ , ಮೊನ್ನೆ ಕೇಂದ್ರ ಸರ್ಕಾರ 60 ಲಕ್ಷ ಟನ್ ಸಕ್ಕರೆ ರಫ್ತಿ ನಿಂದ ಬರುವಂತಹ ಸಬ್ಸಿಡಿಯನ್ನು rs.3500 ಕೋಟಿ ಸಬ್ಸಿಡಿ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಘೋಷಿಸಿದ್ದರು. 

ಇದೀಗ ಪುದುಚರಿ ಸರ್ಕಾರ ಮತ್ತೊಂದು ಘೋಷಣೆಯನ್ನು ಮಾಡಿದ್ದು  ಕಬ್ಬು ಬೆಳೆಯುವ ರೈತರಿಗೆ ಬ್ಯಾಕ್-ಎಂಡ್ ಸಬ್ಸಿಡಿಯನ್ನು ಒದಗಿಸುತ್ತಿದೆ ಮತ್ತು ಇದನ್ನು ಪುದುಚೇರಿಯ ಕೃಷಿ ಸಚಿವ ಆರ್ ಕಮಲಕನ್ನನ್ ಅವರು ಘೋಷಣೆ ಮಾಡಿದರು.
 ಸರ್ಕಾರ ರೈತರಿಗಾಗಿ ಒದಗಿಸುತ್ತಿದ್ದ ಅಂತಹ ಕೃಷಿಗೆ ಬೇಕಾದಂತಹ ಅಂಶಗಳು ಸರಿಯಾದ ಸಮಯಕ್ಕೆ ತಲುಪದ ಕಾರಣದಿಂದಾಗಿ ಸರ್ಕಾರ ಅದರ ಬದಲು ನೇರವಾಗಿ ರೈತರ ಖಾತೆಗೆ 10,000 ಅನ್ನು ಜಮಾ ಮಾಡಲು ನಿರ್ಧರಿಸಿದೆ. ಇದನ್ನು ನೇರವಾಗಿ ರೈತರ ಖಾತೆಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ತಲುಪಿಸಲಾಗುವುದು. ಇದು ಸರ್ಕಾರದ 1.70 ಕೋಟಿ ರೂಪಾಯಿಗಳ ಯೋಜನೆಯಾಗಿದೆ.

ಈ ಯೋಜನೆ ಮೂಲಕ ರಾಜ್ಯದ 839 ರೈತರಿಗೆ ಅನುಕೂಲವಾಗಲಿದೆ, ಇದರಲ್ಲಿ 820 ರೈತರು ಸಾಮಾನ್ಯ ವರ್ಗಕ್ಕೆ ಸೇರಿದವರು,ಇವರಿಗಾಗಿ ಸರ್ಕಾರ 1.68 ಕೋಟಿ ರೂಪಾಯಿಯನ್ನು ಮೀಸಲಾಗಿಟ್ಟಿದೆ ಹಾಗೂ ಇನ್ನುಳಿದ 19 ರೈತರಿಗೆ 3.07 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದೆ.