News

LPG ಸಿಲಿಂಡರ್‌ ಬೆಲೆಯಲ್ಲಿ 100 ರೂ ಇಳಿಕೆ..ಇಂದಿನಿಂದಲೇ ಹೊಸ ದರ ಜಾರಿ!

01 August, 2023 10:37 AM IST By: Maltesh
100 rupees reduction in the price of LPG cylinder

LPG ಸಿಲಿಂಡರ್ ಬೆಲೆ ಇಳಿಕೆ ಆಗಿದೆ, ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ವಾಣಿಜ್ಯ ಸಿಲಿಂಡರ್ ಬೆಲೆಯ ವಿಚಾರದಲ್ಲಿ ಈ ಬದಲಾವಣೆ ಆಗಿದೆ. ಕಂಪನಿಯು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಆಗಸ್ಟ್ 1 ರ ಬೆಳಿಗ್ಗೆ 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂ. ಇಳಿಕೆ ಮಾಡಿದೆ. ಈಗ  ವಾಣಿಜ್ಯ ಸಿಲಿಂಡರ್‌ ಬೆಲೆ ಈಗ ರೂ.1680 ಆಗಿದೆ.

ವಾಣಿಜ್ಯ ಅನಿಲ ಸಿಲಿಂಡರ್‌ಗಳ ಹೊಸ ದರ ಆಗಸ್ಟ್ 1 ರಿಂದ ಜಾರಿಗೆ ಬಂದಿದೆ27 ದಿನಗಳ ನಂತರ ಸಿಲಿಂಡರ್ ಬೆಲೆ ಇಳಿಕೆ.. ತೈಲ ಕಂಪನಿಗಳು 27 ದಿನಗಳ ನಂತರ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿವೆ.

ಈ ಹಿಂದೆ ಜುಲೈ 4 ರಂದು ಕಂಪನಿಗಳು ಪ್ರತಿ ಸಿಲಿಂಡರ್ ಬೆಲೆಯನ್ನು 7 ರೂ. ಜುಲೈಗೂ ಮುನ್ನ ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಸಿಲಿಂಡರ್ ಬೆಲೆ ಇಳಿಕೆಯಾಗಿತ್ತು. ಮಾರ್ಚ್ 1, 2023 ರಂದು, ಸಿಲಿಂಡರ್ ಬೆಲೆ ರೂ.2119.50 ಆಗಿದೆ. ನಂತರ ಏಪ್ರಿಲ್ ನಲ್ಲಿ 2028 ರೂ.ಗೆ, ಮೇನಲ್ಲಿ 1856.50 ರೂ.ಗೆ ಮತ್ತು ಜೂನ್ 1 ರಂದು 1773 ರೂ.ಗೆ ಕುಸಿದಿದೆ. ಆದರೆ ಇದರ ನಂತರ ಜುಲೈನಲ್ಲಿ ರೂ.7 ಹೆಚ್ಚಳವಾಯಿತು ಮತ್ತು ಸಿಲಿಂಡರ್ ದೆಹಲಿಯಲ್ಲಿ ರೂ.1780 ತಲುಪಿತು.

ಜೂನ್ 1 ರಂದು ರೂ.1773 ತಲುಪಿದೆ. ಆದರೆ ಇದರ ನಂತರ ಜುಲೈನಲ್ಲಿ ರೂ.7 ಹೆಚ್ಚಳವಾಯಿತು ಮತ್ತು ಸಿಲಿಂಡರ್ ದೆಹಲಿಯಲ್ಲಿ ರೂ.1780 ತಲುಪಿತು. ಭಾರತ್, ಇಂಡೇನ್, ಎಚ್‌ಪಿಯಂತಹ ಕಂಪನಿಗಳು ಈಗ 19 ಕೆಜಿಯ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದ್ದು, ಆದರೆ 14.2 ಕೆಜಿ ಸಿಲಿಂಡರ್‌ಗಳ ಬೆಲೆ ಸ್ಥಿರವಾಗಿದೆ.

ಈ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈದರಾಬಾದ್‌ನಲ್ಲಿ ಸಿಲಿಂಡರ್‌ನ ಬೆಲೆ ಸುಮಾರು ರೂ. 1155 ನಲ್ಲಿದೆ. ಅಲ್ಲದೆ, ಎಪಿಯಲ್ಲಿ ಸಿಲಿಂಡರ್ ಬೆಲೆ ಬಹುತೇಕ ಅದೇ ಮಟ್ಟದಲ್ಲಿ ರೂ. 1161 ರಲ್ಲಿ ಮುಂದುವರಿಯುತ್ತದೆ