ಕೇಂದ್ರ ಸರ್ಕಾರವು ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆಗೆ ಅಂತಿಮ ಗಡುವು ನೀಡಿದೆ.
ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್‌ಅನ್ನು ಮಾರ್ಚ್ 31ರ ಒಳಗಾಗಿ ಲಿಂಕ್ ಮಾಡದಿದ್ದರೆ, ಬರೋಬ್ಬರಿ 10,000 ಸಾವಿರ ರೂ. ದಂಡ ಪಾವತಿ ಮಾಡಬೇಕಾಗುತ್ತದೆ.
ಅಲ್ಲದೇ ಲಿಂಕ್ ಮಾಡದೆ ಇದ್ದರೆ ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್‌ನ ನಂಬರ್ ಸಹ ನಿಷ್ಕ್ರೀಯವಾಗಲಿದೆ.
ಹೊಸ ಪ್ಯಾನ್ ಕಾರ್ಡ್ ಮಾಡಬೇಕಾದರೂ 10,000 ಸಾವಿರ ರೂಪಾಯಿ ಪಾವತಿ ಮಾಡಿಯೇ ಹೊಸ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪ್ಯಾನ್-ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕ ಸಮೀಪಿಸುತ್ತಿದೆ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 1000 ರೂಪಾಯಿ ದಂಡದೊಂದಿಗೆ 31 ಮಾರ್ಚ್ 2023 ರ ಗಡುವನ್ನು ನೀಡಲಾಗಿದೆ.
ಒಂದೊಮ್ಮೆ ನೀವು ಮಾರ್ಚ್ 31, 2023ರ ಒಳಗಾಗಿ ಪ್ಯಾನ್ ಕಾರ್ಡ್-ಆಧಾರ್ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.
Gold Silver price Today: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ!
ಕೇಂದ್ರ ಸರ್ಕಾರವು ವಿಲೀನದ ಅವಧಿಯನ್ನು ಮಾರ್ಚ್ 31, 2023 ರವರೆಗೆ ದಂಡದೊಂದಿಗೆ ವಿಸ್ತರಿಸಿದೆ.
ದಂಡವಿಲ್ಲದೆ ಕೊನೆಯ ದಿನಾಂಕ ಜೂನ್ 30, 2022. ನೀವು ಗಡುವಿನೊಳಗೆ ಸಂಪರ್ಕಿಸಲು ಸಾಧ್ಯವಾಗದಿದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.
ರಾಜ್ಯದ ವಿವಿಧೆಡೆ ಮುಂದುವರಿದ ಧಾರಾಕಾರ ಮಳೆ!
ಸಾರ್ವಜನಿಕರಿಂದ ಆಕ್ರೋಶ
ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರವಾದ ವಿರೋಧ ವ್ಯಕ್ತವಾಗಿದೆ.
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಜನ ಜಾಗೃತಿಯನ್ನು ಮೂಡಿಸದೆ.
ಇದೀಗ ಏಕಾಏಕಿ ಭಾರೀ ಮೊತ್ತದ ದಂಡಕ್ಕೆ ಮುಂದಾಗಿದೆ ಎಂದು ವಿರೋಧ ವ್ಯಕ್ತವಾಗಿದೆ. ಇನ್ನಷ್ಟು ಗಡುವು ನೀಡಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ.