News

1 ರೂಪಾಯಿ ಹಳೇ ನಾಣ್ಯದಿಂದ 1 ಲಕ್ಷಕ್ಕೂ ಹೆಚ್ಚು ಗಳಿಸಬಹುದು. ಇಲ್ಲಿದೆ ಮಾಹಿತಿ

18 October, 2020 6:45 AM IST By:

ಅದೃಷ್ಟ ಎನ್ನುವುದು ಯಾವ ಕಡೆಯಿಂದ ಹೇಗೆ ಬರುತ್ತದೆ ಎಂಬುದನ್ನು ಹೇಳಕ್ಕಾಗುವುದಿಲ್ಲ. ಕೆಲವು ಸಲ ಒಂದು ರೂಪಾಯಿಯು ಮನುಷ್ಯನಿಗೆ ಲಕ್ಷಾಧಿಪತಿಯನ್ನಾಗಿ ಮಾಡಬಹುದು ಎಂಬುದನ್ನು ನಾವು ಹಲವಾರು ಬಾರಿ ಕೇಳಿದ್ದೇವೆ. ಇತ್ತೀಚೆಗೆ ಹಳೇ ನಾಣ್ಯಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ಆನ್ ಲೈನ್ ನಲ್ಲಿಯೂ ಖರೀದಿ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.  ನಿಮ್ಮ ಬಳಿ ಕೇವಲ ಒಂದು ರೂಪಾಯಿ ಹಳೆ ನಾಣ್ಯ 100 ವರ್ಷಗಳ ಹಿಂದಿನದ್ದಾದರೆ ನೀವು ಮನೆಯಲ್ಲಿ ಕುಳಿತು ಒಂದು ಲಕ್ಷಕ್ಕೂ ಹೆಚ್ಚು ಹಣ ಗಳಿಸಬಹುದು. ಅದರಲ್ಲಿ ವಿಶೇಷವಾಗಿ 1913 ರಲ್ಲಿ ಸರ್ಕಾರದಲ್ಲಿ ಚಾಲ್ತಿಯಲ್ಲಿದ್ದ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿಯಿದ್ದರೆ ನೀವು ಲಕ್ಷಾಧಿಪತಿಯಾಗಬಹುದು. ನಿಮ್ಮ ಬಳಿ ಹಳೇ ನಾಣ್ಯವಿದ್ದರೆ ನೀವೇಕೆ ಮನೆಯಲ್ಲಿಯೇ ಕುಳಿತು ಪ್ರಯತ್ನ ಮಾಡಬಾರದು. ಹಳೆ ನಾಣ್ಯವಿದೆ ಆದರೆ ಮಾರಾಟ ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಮಾಹಿತಿ.

ಹಳೆಯ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುವ ಅನೇಕ ಜನ ಇನ್ನೂ ಜಗತ್ತಿನಲ್ಲಿದ್ದಾರೆ. ಅವರು ಹಳೆ ನಾಣ್ಯಗಳನ್ನು ಖರೀದಿ ಮಾಡುವಲ್ಲಿ ತುಂಬು ಉತ್ಸುಕರಾಗಿರುತ್ತಾರೆ. ಎಷ್ಟೇ ಹಣ ಕೊಟ್ಟು ಅಂತಹ ನಾಣ್ಯಗಳನ್ನು ಖರೀದಿಸುತ್ತಾರೆ. ಅಪರೂಪದ ನಾಣ್ಯಗಳ ಬಗ್ಗೆ ಅಧಿಕೃತವಾದ ದರ ಎಂಬುದು ಇರುವುದಿಲ್ಲ. ಹೀಗಿದ್ದರೂ ಕಳೆದ ಕೆಲವು ವರ್ಷಗಳಿಂದೀಚೆಗೆ ಹಳೆಯ ನಾಣ್ಯ ಮತ್ತು ನೋಟುಗಳಿಗೆ ಭಾರಿ ಬೆಲೆ ಏರಿಕೆಯಾಗುರುವುದನ್ನು ಗಮನಿಸಬಹುದು. ಅಂದಹಾಗೆ ಎಲ್ಲ ಹಳೆಯ ನಾಣ್ಯಗಳೂ ಭಾರಿ ಬೆಲೆ ತಂದುಕೊಡುತ್ತವೆ ಎಂದು ಹೇಳುವಂತಿಲ್ಲ.

ಇಂಡಿಯಾ ಮಾರ್ಟ್ ನಲ್ಲಿ  ನಿಮ್ಮದೇ ಖಾತೆ ತೆರೆಯಿರಿ:

ಮಾರಾಟ ಮಾಡಲು ನೀವು ಯಾರನ್ನೂ ಹುಡುಕಿಕೊಂಡು ಹೋಗುವ ಅವಶ್ಯಕತೆಯಿಲ್ಲ. ಇದಕ್ಕಾಗಿ ಯಾವ ಖರ್ಚು ಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಮಾರಾಟ ಮಾಡಬಹುದು. ಇಂಡಿಯಾ ಮಾರ್ಟ್ (India Mart)  ವೆಬ್ ಸೈಟಿಗೆ ಹೋಗಿ ನಿಮ್ಮದೇ ಆದ ಖಾತೆ ತೆರೆಯಿರಿ. ಬಳಿಕ ಮಾರಾಟಗಾರನೆಂದು ನೋಂದಾಯಿಸಿಕೊಳ್ಳಿ. ನೋಂದಣಿ ಮಾಡಿದ ಬೆನ್ನಲ್ಲೆ ನಿಮ್ಮ ಬಳಿಯಿರುವ ನಾಣ್ಯದ ಚಿತ್ರವನ್ನು ವೆಬ್ ಸೈಟಿಗೆ ಅಪ್ ಲೋಡ್ ಮಾಡಿ. ನಾಣ್ಯವು ಮಾರಾಟಕ್ಕಿದೆ ಎಂದು ಬರೆಯಿರಿ. ಯಾರು ಪ್ರಾಚೀನ ನಾಣ್ಯಗಳಿಗೆ ಹುಡುಕಾಡುತ್ತಿರುತ್ತಾರೋ ಅವರು ವೆಬ್ ಸೈಟಿಗೆ ಭೇಟಿ ನೀಡುತ್ತಾರೆ. ನಿಮ್ಮ ನಾಣ್ಯವನ್ನು ನೋಡಿದ ಬಳಿಕ ನಿಮ್ಮನ್ನು ಆನ್ ಲೈನ್ ಮೂಲಕ ಸಂಪರ್ಕಿಸಲಿದ್ದಾರೆ. ನಿಮಗೆ ಹಣ ನೀಡಿ ನಾಣ್ಯವನ್ನು ಕೊಂಡುಕೊಳ್ಳಲಿದ್ದಾರೆ.

ಯಾಕೆ ಹೀಗೆ?

ನಾಣ್ಯದ ಅಪರೂಪತೆ, ಗುಣಮಟ್ಟ, ಐತಿಹಾಸಿಕ ಮಹತ್ವ, ಟಂಕಿಸುವ ಸಂದರ್ಭ ಉಂಟಾಗಿದ್ದ ವಿರೂಪಗಳು ದರ ಬೆಲೆಯನ್ನು ನಿರ್ಧರಿಸುತ್ತವೆ. ಆದ್ದರಿಂದ ಹಳೆಯದು ಎನ್ನುವ ಒಂದೇ ಅಂಶದಿಂದ ಅದರ ಈಗಿನ ಮಾರುಕಟ್ಟೆ ಬೆಲೆಯನ್ನು ಅಂದಾಜಿಸಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.

ಹಳೆಯ ನಾಣ್ಯಗಳನ್ನು ಮಾರಬಹುದೇ?

ಈಗ ನಿಮ್ಮ ಮನೆಯಲ್ಲಿ ಮುತ್ತಾತ ಅಥವಾ ಅದಕ್ಕೂ ಹಿಂದಿನವರ ಕಾಲದ ನಾಣ್ಯಗಳಿವೆ ಎಂದಿಟ್ಟಿಕೊಳ್ಳಿ. ಅದನ್ನು ಮಾರಾಟ ಮಾಡಬಹುದು. ಜನ ವೈಯಕ್ತಿಕವಾಗಿ ತಮ್ಮ ಬಳಿ ಇರುವ ಪ್ರಾಚೀನ ಕಾಲದ ಹಳೆಯ ನಾಣ್ಯಗಳನ್ನು, ಮಾರಿಕೊಳ್ಳಬಹುದು. ಅದು ತಾಮ್ರ, ಚಿನ್ನ, ಬೆಳ್ಳಿಯ ನಾಣ್ಯವಾಗಿದ್ದರೂ ಅಡ್ಡಿಯಿಲ್ಲ. ಸಾವಿರಾರು ವರ್ಷ ಪುರಾತನವಾಗಿದ್ದರೂ ಯಾರೂ ನಿಮ್ಮನ್ನು ಕೇಳುವುದಿಲ್ಲ. ಅಧಿಕೃತ ಏಜೆನ್ಸಿಗಳು ನಡೆಸುವ ಹರಾಜಿನಲ್ಲೂ ಮಾರಾಟ ಮಾಡಬಹುದು.