Horticulture

ತೋಟಗಾರಿಕೆ ಬೆಳೆಗಳಲ್ಲಿ ಕೊಯ್ಲೋತ್ತರ ನಿರ್ವಹಣೆ ಮತ್ತು ಮೌಲ್ಯವರ್ಧನಾ ಕ್ರಮಗಳು

31 March, 2023 2:26 PM IST By: Kalmesh T
Postharvest management and value addition measures in horticultural crops

ಹಣ್ಣು ತರಕಾರಿಗಳ ಕೊಯ್ಲು ನಂತರದಿಂದ ಪ್ರಾರಂಭಿಸಿ, ಬಳಕೆಯವರೆಗೆ ಹಲವು ವಿಧದಲ್ಲಿ ನಷ್ಠವಾಗುತ್ತದೆ. ತೋಟಗಾರಿಕೆ ಉತ್ಪನ್ನಗಳನ್ನು ಸಂಸ್ಕರಿಸುವ ತಂತ್ರಜ್ಞಾನ ಲಭ್ಯವಿಲ್ಲದಿರುವುದು,  ಫಸಲು ಉತ್ಪಾದನೆಯಾದ ನಂತರ ತಗಲುವ ರೋಗ ಮತ್ತು ಹವಾಗುಣದಲ್ಲಿನ ವೈಪರೀತ್ಯಗಳು, ಅವುಗಳ ಕೊಯ್ಲೋತ್ತರ ನಷ್ಠಗಳಿಗೆ ಪ್ರಮುಖ ಕಾರಣಗಳಾಗಿವೆ.

ಕೃಷಿ ಭೂಮಿಯನ್ನು ಯೋಜನಾ ಬದ್ಧವಾಗಿ ವಿನ್ಯಾಸ ಮಾಡುವ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೊಯ್ಲೋತ್ತರ ನಷ್ಟಗಳು ಮತ್ತು ಉದಾಹರಣೆಗಳು

  • ತೂಕ ಕಡಿಮೆಯಾಗುವುದು
  • ಹಣ್ಣು ತರಕಾರಿಗಳಲ್ಲಿ ಪ್ರಮಾಣ ಕಡಿಮೆಯಾಗುವುದು
  • ಪೆಟ್ಟು ಬೀಳುವುದು
  • ಪೀಡೆಗಳಿಂದ ನಷ್ಟ
  • ಉಷ್ಣತೆಯಲ್ಲಿ ಏರುಪೇರು
  • ಪೋಷಕಾಂಶ ಕಡಿಮೆ
  • ವಾತಾವರಣದಲ್ಲಿನ ಅನಿಲಗಳಿಂದಾಗಿ ನಷ್ಟ
  • ಪೌಷ್ಠಿಕಾಂಶ ನಷ್ಟ: ಶರ್ಕರ ಪಿಷ್ಠಗಳು ಮತ್ತು ವಿಟಮಿನ್-ಸಿ

ಕೊಯ್ಲು ಮತ್ತು ಕೊಯ್ಲೋತ್ತರ ಹಂತಗಳಲ್ಲಾಗುವ ನಷ್ಠಳಿಗೆ ಕಾರಣಗಳು

ೊಯ್ಲು ಹಂತ:

  • ಸರಿಯಾಗಿ ಮಾಗದಿರುವ ಮುನ್ನ ಕೊಯ್ಲು ಮಾಡುವುದು.
  • ಒರಟಾದ ಹಾಗೂ ಕೊಳಕಾದ ಚೀಲ, ಬುಟ್ಟಿ ಬಳಸುವುದು
  • ಮಣ್ಣು ಬೆರೆಯುವುದು
  • ದಿನದ ಉಷ್ಣತೆ ಹೆಚ್ಚು ಇದ್ದಾಗ ಕೊಯ್ಲು ಮಾಡುವುದು.
  • ಬುಟ್ಟಿ ಅಥವಾ ಚೀಲ ನಿರ್ವಹಣೆಯಲ್ಲಿ ಒರಟುತನ, ಬೀಳಿಸುವುದು.
  • ಉತ್ಪಾದನೆಯ ಮೊನಚಾದ ತೊಟ್ಟುಗಳು ಇರುವಂತೆ ಕೊಯ್ಲು ಮಾಡುವುದು.
  • ಚೀಲ, ಬುಟ್ಟಿಯಲ್ಲಿ ಸಾಮರ್ಥಯಕ್ಕಿಂತ ಹೆಚ್ಚು ತುಂಬುವುದು.
  • ಕೊಯ್ಲು ನಂತರ ಸೂರ್ಯನ ಬಿಸಿಲಿಗೆ ನೇರವಾಗಿ ಇಡುವುದು.

 ಪರಿಷ್ಕರಣೆ ಹಂತ:

  • ಸರಿಯಾಗಿ ಪರಿಷ್ಕರಿಸದೆ ಇರುವುದು: ಗೆಡ್ಡೆ ಗೆಣಸು ಸ್ವಚ್ಚ ಮಾಡದೇ ಸಂಗ್ರಹಿಸುವುದು.
  • ಸರಿಯಾಗಿ ಒಣಗಿಸದೇ ಇರುವುದರಿಂದ: ಈರುಳ್ಳಿ, ಬೆಳ್ಳುಳ್ಳಿ, ಒಣಗಿಸದೇ ಸಂಗ್ರಹ ಮಾಡುವುದು.

ಪ್ಯಾಕಿಂಗ್ ಹಂತ:

  • ಕೊಳೆತ,ಕೆಟ್ಟ,ಪೆಟ್ಟು ಬಿದ್ದವನ್ನು ಆಯ್ದು ವಿವಿಧ ಗಾತ್ರದವುಗಳನ್ನು ವಿಂಗಡಿಸದೇ ಇರುವುದು.
  • ಅಸಮರ್ಪಕವಾಗಿ ಸ್ವಚ್ಚ ಮಾಡುವುದು, ತೊಳೆಯುವುದು, ಶುಚಿಯಾಗಿಡುವುದು.
  • ಒರಟು ನಿರ್ವಹಣೆ
  • ಅಸಮಪರ್ಕ ಕೊಯ್ಲು ನಂತರ ಪಚಾರ-ಹೆಚ್ಚು ವ್ಯಾಕ್ಸ್, ಅಸಮರ್ಪಕ ಕ್ಲೋರಿನ್ ಪ್ರಮಾಣ ನೀಡುವುದು.
  • ಸೂಕ್ತ ರಾಸಾಯನಿಕ ಬಳಸದೇ ಇರುವುದು ಅಥವಾ ಅಸಮರ್ಪಕ ಬಳಕೆ.
  • ಶೈತ್ಯ ವ್ಯವಸ್ಥೆ ಇಲ್ಲದೆ ಬಹುಕಾಲ ಇಡುವುದು.
  • ಗುಣಮಟ್ಟದ ಪರಿಮಿತಿಗಳನ್ನು ಸರಿಯಾಗಿ ಪಾಲಿಸದೇ ಇರುವುದು.

 ಪ್ಯಾಕಿಂಗ್ ಮತ್ತು ಪ್ಯಾಕಿಂಗ್ ಸಾಧನೆ/ವಸ್ತುಗಳು

  • ಒರಟು ಪ್ಯಾಕಿಂಗ್ ವಸ್ತು ಬಳಕೆ
  • ಮರದ/ಬಿದುರಿನ ರಟ್ಟು ಬುಟ್ಟಿಗಳಲ್ಲಿ ಸರಿಯಾದ ಮೆತ್ತನೆ ಹೊದಿಕೆ ಬಳಸದೇ ಇರುವುದು
  • ಮೆತ್ತಗಿರಲಿ ಎಂದು ಹೆಚ್ಚು ಕುಶನಿಂಗ್ ವಸ್ತು ಬಳಸುವುದು
  • ಸಂಗ್ರಹಣಾ ಸಾಮರ್ಥ್ಯಕ್ಕಿಂತ ಹೆಚ್ಚು ತುಂಬುವುದು
  • ಅತಿದೊಡ್ಡ ಸಂಗ್ರಹಕ ಬಳಸುವುದು ಅಥವಾ ಸಂಗ್ರಾಹಾಕ ಸಾಮರ್ಥ್ಯಕ್ಕಿಂತ ಕಡಿಮೆ ತುಂಬುವುದು.

ಸಂಗ್ರಹಣೆ:

  • ಶೀತಲ ಗೃಹಗಳಲ್ಲಿ ಸಂಗ್ರಹಣಾ ಸಾಮರ್ಥ್ಯಕ್ಕಿಂತ ಹೆಚ್ಚು ತುಂಬುವುದು
  • ಉಷ್ಣತೆ ಹೆಚ್ಚಿಸುವ ವಸ್ತುಗಳನ್ನು ಶೈತ್ಯಾಗಾರಗಳಲ್ಲಿಡುವುದು.
  • ಸಂಗ್ರಾಹಕಗಳನ್ನು ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚು ಎತ್ತರ ದರ ಮೇಲೋಂದರಂತೆ ಇಡುವುದು.
  • ಸಂಗ್ರಹಣೆಗೆ ವಿವಿಧ ಉಷ್ಣತೆ /ಆದ್ರತೆಯನ್ನು ಕಾಲಕಾಲಕ್ಕೆ ಪರೀಕ್ಷಿಸದೇ ಇರುವುದು.
  • ಅಸಮರ್ಪಕ ಶುಚಿತ್ವ ಮತ್ತು ಉಷ್ಣತೆ ಹಾಗೂ ಆದ್ರತರಯ ಅಸಮರ್ಪಕ ನಿರ್ವಹಣೆ.