ಕರಿಮೆಣಸು ಅಥವಾ ಕಾಳುಮೆಣಸು ಬಹುವಾರ್ಷಿಕ ಹಬ್ಬುವ ಬಳ್ಳಿ. ಈ ಬೆಳೆಯನ್ನು ಇದರ ಕಾಳುಗಳಿಗೋಸ್ಕರ ಕೃಷಿ ಮಾಡುತ್ತಿದ್ದು, ಇದು ಅನೇಕ ಪ್ರಯೋಜನಕಾರಿ ಉಪಯೋಗಗಳನ್ನು ಹೊಂದಿದೆ. ಇದರ ಬಾಳಿಕೆ ಮತ್ತು ಮೌಲ್ಯದಿಂದಾಗಿ ಇದನ್ನು‘ಕಪ್ಪುಚಿನ್ನ' ಎಂದು ಸಹ ಕರೆಯಲಾಗುತ್ತದೆ.
ಶೀಘ್ರ ಸೊರಗುರೋಗದ ಸಮಗ್ರ ಹತೋಟಿ ಕ್ರಮಗಳು :
- ರೋಗ ಬಾಧೆಯಿರುವ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರುಗಳ ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು.
- ತೋಟಗಳಲ್ಲಿ ನೀರು ನಿಲ್ಲದಂತೆ ಬಸಿಕಾಲುವೆಗಳನ್ನು ನಿರ್ಮಿಸುವುದು ಸೂಕ್ತ.
- ಬೇಸಾಯ ಕ್ರಮಗಳನ್ನು ಅನುಸರಿಸುವಾಗ ಬಳ್ಳಿ ಬೇರುಗಳಿಗೆ ಗಾಯಗಳಾಗದಂತೆ ನೋಡಿಕೊಳ್ಳಬೇಕು.
- ರೋಗರಹಿತ ಬಳ್ಳಿ ಮತ್ತು ರೋಗಾಣು ಮುಕ್ತ ಮಣ್ಣನ್ನು ಸಸಿ ಮಾಡಲು ಉಪಯೋಗಿಸಬೇಕು.
- ನೆಲದ ಮೇಲೆ ಹರಡಿರುವ ಮತ್ತು ಹೆಚ್ಚಾದ ಕವಲು ಬಳ್ಳಿಗಳನ್ನು ಮುಂಗಾರಿನ ಮುನ್ನ ಕತ್ತರಿಸಿ ತೆಗೆಯಬೇಕು. ಉಳಿದ ಬಳ್ಳಿಗಳನ್ನು ಆಶ್ರಯ ಮರಕ್ಕೆಕಟ್ಟಿ ಬೆಳೆಯಲು ಬಿಡಬೇಕು.
ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!
ರೈತರಿಗೆ ಮಹತ್ವದ ಮಾಹಿತಿ; ಅಧಿಕೃತ ಅಂಗಡಿಗಳಲ್ಲಿ ಬೆಳೆ ಬೀಜ ಖರೀದಿಸಲು ತೋಟಗಾರಿಕೆ ಅಧಿಕಾರಿಗಳ ಸಲಹೆ!
- ಗಿಡದ ಬುಡದಲ್ಲಿ ಹಸಿರೆಲೆಗೊಬ್ಬರ ಹಾಗೂ ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆಸುವುದರಿಂದ ರೋಗಾಣುವಿನ ಹರಡುವಿಕೆಕಡಿಮೆ ಮಾಡಬಹುದು.
- ಕಾಳುಮೆಣಸು ಬೆಳೆಸುವ ತೋಟದಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು.
- ತೋಟದಲ್ಲಿ ಬಳ್ಳಿಗಳಿಗೆ ಎಲೆಗಳಿಂದ ಹೊದಿಕೆ ಮಾಡತ್ತಿರಬೇಕು ಮತ್ತು ಮಳೆಗಾಲದಲ್ಲಿ ಮಣ್ಣಿನ ಅಗೆತದ ಕೆಲಸ ಮಾಡಬಾರದು.
- ಪ್ರತಿ ಬಳ್ಳಿಗೆ 50 ರಿಂದ 60 ಗ್ರಾಂ. ಟ್ರೈಕೋಡರ್ಮಾ ವಿರಿಡೆ ಅಥವಾ ಟ್ರೈಕೋಡರ್ಮಾ ಹಾರ್ಜಿಯಾನಂ ಜೈವಿಕ ಶಿಲೀಂಧ್ರವನ್ನು 1 ಕಿ. ಗ್ರಾಂ. ಬೇವಿನ ಹಿಂಡಿಅಥವಾ 5 ಕಿ. ಗ್ರಾಂ. ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರ ಮಾಡಿ ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚೆ ಬುಡಕ್ಕೆ ಹಾಕುವುದು ಒಳಿತು.
- ಮುಂಗಾರಿನ ಮುಂಚೆ ನೆಲದಿಂದ 1 ಮೀ.ಎತ್ತರದವರೆಗೆ ಬಳ್ಳಿಯ ಕಾಂಡಕ್ಕೆ ಶೇ. 10 ರ ಬೋರ್ಡೋ ಪೇಸ್ಟನ್ನು ಲೇಪಿಸಬೇಕು.
- ಹೊಸದಾಗಿ ನಾಟಿ ಮಾಡಿದ ಚಿಗುರು ಬೆಳೆಯುವ ಹಬ್ಬು ಬಳ್ಳಿಗಳನ್ನು ನೆಲದ ಮೇಲೆ ಹರಡಲು ಬಿಡದಂತೆ ಆಧಾರ ಗಿಡಕ್ಕೆ ಎತ್ತಿ ಕಟ್ಟುತ್ತಿರಬೇಕು.
- ಆಧಾರಗಿಡದ ರೆಂಬೆಗಳನ್ನು ಮಳೆಗಾಲದ ಪ್ರಾರಂಭದಲ್ಲಿ ಕತ್ತರಿಸುವುದರಿಂದ ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆಉಂಟಾಗದಂತೆ ಹಾಗೂ ಸೂರ್ಯರಶ್ಮಿ ನೆಲಮಟ್ಟದವರೆಗೂ ತಲುಪುವಂತೆ ನೋಡಿಕೊಳ್ಳುವುದರಿಂದ ರೋಗದ ತೀವ್ರತೆ ಕಡಿಮೆಗೊಳಿಸಬಹುದು.
- ಶೇ. 0.25ರ ಮೆಟಲಾಕ್ಸಿಲ್‌ಎಮ್ 8% + ಮ್ಯಾಂಕೊಝೆಬ್ 64% ಡಬ್ಲೂ.ಪಿ ಶಿಲೀಂಧ್ರನಾಶಕವನ್ನು ಪ್ರತಿ ಬಳ್ಳಿಗೆ 2 ರಿಂದ 3 ಲೀಟರ್‌ನಂತೆ ಸಿಂಪಡಿಸಬೇಕು.
ಉತ್ತಮ ಕೃಷಿ ಮತ್ತು ಆದಾಯಕ್ಕಾಗಿ ಹೂಕೋಸು ಕೃಷಿ! ಇಲ್ಲಿದೆ ಹೂಕೋಸು ಬೆಳೆಯ ಸಮಗ್ರ ಮಾಹಿತಿ…
Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…
ಚಿಬ್ಬುರೋಗ/ ಪೊಳ್ಳು ರೋಗ:
- ಈ ರೋಗವು ಕೊಲೆಟೊ ಟ್ರೈಕಮ್‌ಗ್ಲೀಯೋ ಸ್ಪೋರಿಯೊಡ್ಸ್ ಶಿಲೀಂಧ್ರದಿಂದ ಉಂಟಾಗುತ್ತದೆ.
- ಪ್ರಾಥಮಿಕವಾಗಿ ಈ ರೋಗವು ಸೋಂಕಿತ ಬಳ್ಳಿಗಳನ್ನು ನಾಟಿ ಮಾಡುವುದರಿಂದ ಉಂಟಾಗುತ್ತದೆ, ನಂತರ ಗಾಳಿಯ ಮುಖಾಂತರ ಸೋಂಕಿತ ಬಳ್ಳಿಯಿಂದ ಆರೋಗ್ಯಕರ ಬಳ್ಳಿಗೆ ರೋಗವು ಹರಡುತ್ತದೆ.
ನಿರ್ವಹಣಾ ಕ್ರಮಗಳು:
- ತೋಟದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.
- ರೋಗ ಪೀಡಿತ ಬಳ್ಳಿಗಳನ್ನು ತೆಗೆದು ನಾಶಪಡಿಸಬೇಕು.
- ಪ್ರತಿ ಲೀಟರ್ ನೀರಿಗೆ 1 ಗ್ರಾಂ. ಕಾರ್ಬಂಡಜಿಮ್ 50 ಡಬ್ಲೂ.ಪಿ. ಬೆರೆಸಿ ಸಿಂಪಡಿಸಿ ಅಥವಾ ಹೆಕ್ಸಾಕೋನಜೋಲ್ 5 ಇ.ಸಿ 1 ಮಿ.ಲೀ. ಬೆರೆಸಿ ಸಿಂಪಡಿಸಿ.
ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!
ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್
3. ಸ್ಟಂಟ್‌ರೋಗ:
- ಈ ರೋಗ ಪ್ರಸರಣದ ಪ್ರಮುಖ ವಿಧಾನವೆಂದರೆ ನಾಟಿ ಸಮಯದಲ್ಲಿ ರೋಗಪೂರಿತ ಸಸಿಗಳ ಬಳಕೆ ಮಾಡುವುದು.
- ಇದಲ್ಲದೆ ಸಸ್ಯ ಹೇನುಗಳು ಮತ್ತು ಹಿಟ್ಟುತಿಗಣೆಗಳು ಕೂಡ ಈ ರೋಗವನ್ನು ಒಂದು ಬಳ್ಳಿಯಿಂದ ಇನ್ನೊಂದು ಬಳ್ಳಿಗೆ ಹರಡಿಸಲು ಸಹಕಾರಿಯಾಗುತ್ತವೆ.
ನಿರ್ವಹಣಾ ಕ್ರಮಗಳು
- ನಾಟಿ ಸಮಯದಲ್ಲಿ ರೋಗ ಮುಕ್ತ ಸಸಿಗಳ ಬಳಕೆ ಮಾಡುವುದು.
- ನಿಯಮಿತವಾಗಿ ಬಳ್ಳಿಗಳ ಪರಿಶೀಲನೆ ಮಾಡುವುದು ಮತ್ತು ರೋಗಕಂಡು ಬಂದಲ್ಲಿ ಅಂತಹ ಬಳ್ಳಿಗಳನ್ನು ಕಿತ್ತುತೋಟದಿಂದ ಹೊರಗೊಯ್ದು ನಾಶಪಡಿಸುವುದು.
- ಸಸ್ಯಹೇನುಗಳು ಮತ್ತು ಹಿಟ್ಟುತಿಗಣೆಗಳ ನಿರ್ವಹಣೆಗೆ ಶೇ. 0.3 ರಿಮಿಡಾಕ್ಲೋಪ್ರಿಡ್ ಪೀಡೆನಾಶಕವನ್ನು ಸಿಂಪರಣೆ ಮಾಡಬೇಕು.
Pashu Dhan Bima Yojana! 70% Subsidyಯೊಂದಿಗೆ ನಿಮ್ಮ ಜಾನುವಾರುಗಳಿಗೆ ವಿಮೆ ಪಡೆಯಿರಿ
Pig Farming:ಹಂದಿ ಸಾಕಾಣಿಕೆದಾರರಿಗೆ ಬಂಪರ್.. ಶೇ 98 ರಷ್ಟು ಸಬ್ಸಿಡಿ ಸಿಗುತ್ತೆ!