Health & Lifestyle

ಬೆಳಗಿನ ಸಮಯದಲ್ಲಿ ಸ್ನಾನ ಮಾಡುವುದರಿಂದ ನಿಮಗೆ ಗೊತ್ತಿರದ ವೈಜ್ಞಾನಿಕ ಸತ್ಯದ ಮಾಹಿತಿ ಇಲ್ಲಿದೆ

02 January, 2021 6:31 AM IST By:
shower

ಪ್ರತಿದಿನ ಸ್ನಾನ ಮಾಡುವುದು ಸ್ವಚ್ಛತೆಗೆ ಸಂಬಂಧಿಸಿದೆ. ದಿನಾಲು ಸ್ನಾನ ಮಾಡುವುದರಿಂದ ಮೈಮೇಲಿರುವ ಕೊಳೆ, ದೇಹದ ದುರ್ವಾಸನೆ ಮತ್ತು ಆರೋಗ್ಯದ ದೃಷ್ಟಿಯಿಂದ ಸ್ನಾ ಮಾಡುವುದು ಅಗತ್ಯವೆಂದು ಕೆಲವರು ಹೇಳುತ್ತಾರೆ.  ಸ್ವಚ್ಛ ಮತ್ತು ತಾಜಾ ಭಾವನೆಗಾಗಿ ಸ್ನಾನ ಅಗತ್ಯವೆಂದು ಬಹುತೇಕರು ಹೇಳುತ್ತಾರೆ. ಆದರೆ ವೈಜ್ಞಾನಿಕ ಹಿನ್ನೆಲೆ ಇನ್ನೊಂದಿದೆ ಅದು ನಿಮಗೆ ಗೊತ್ತೇ.ಇಲ್ಲಿದೆ ಮಾಹಿತಿ.

ಸ್ನಾನ ರಕ್ತ ಪರಿಚಲನೆಗೆ ಉತ್ತಮ

 ಸ್ನಾನದ ಪ್ರಯೋಜನಗಳನ್ನು ವಿವರಿಸುವ ಅಗತ್ಯವಿಲ್ಲ,  ಕೊಳೆ ಮತ್ತು ಮೃತ ಚರ್ಮಕೋಶ ತೆಗೆಯುವುದರ ಹೊರತಾಗಿ, ಇದು ಚರ್ಮಕ್ಕೆ ಪುನಶ್ಚೇತನ ನೀಡುತ್ತದೆ, ರಕ್ತ ಪರಿಚಲನೆಗೆ ನೆರವಾಗುತ್ತದೆ. ಒತ್ತಡದ ವಿರುದ್ಧ ಹೋರಾಡುತ್ತದೆ, ಸ್ನಾಯುವಿನ ಒತ್ತಡ ನಿವಾರಿಸುತ್ತದೆ. ಒಟ್ಟಾರೆಯಾಗಿ, ನಿರ್ದಿಷ್ಟ ರೋಗಗಳಿಂದ ವೇಗವಾಗಿ ಚೇತರಿಸಿಕೊಳ್ಳಲು ಬೆಳಗಿನ ಸ್ನಾ ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಬ್ರಾಹ್ಮೀಮುಹೂರ್ತ ಸ್ನಾನ ಮಾಡುವ ಆದರ್ಶ ಸಮಯವಾಗಿದೆ. ಆದರೆ ಇತ್ತೀಚಿನ ಕಾಲದಲ್ಲಿ ಆ ಸಮಯದಲ್ಲಿ ಸ್ನಾನ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಬೆಳಗ್ಗೆ ಸ್ನಾನ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಸೂರ್ಯೋದಯದ ನಂತರ ಎಷ್ಟು ಬೇಗನೇ ಸಾಧ್ಯವಿದೆಯೋ ಅಷ್ಟು ಬೇಗನೇ ಸ್ನಾನ ಮಾಡುವುದು ಒಳಿತು.