Health & Lifestyle

ದೇಹದ ತೂಕ ಕಡಿಮೆ ಮಾಡುವುದು ತುಂಬಾ ಸುಲಭ- ಇಲ್ಲಿದೆ ಮಾಹಿತಿ

26 December, 2020 8:08 AM IST By:
Tips to reduce body waight

ಇತ್ತೀಚಿನ ಆಧುನಿಕ ಜೀವನ ಶೈಲಿಯ ಮೋಹಕ್ಕೆ ಬಲಿಯಾಗಿ ಹಲವಾರು ಮಂದಿ ತಮ್ಮ ಆಹಾರ ಪದ್ಧತಿಯನ್ನೇ ಬದಲಾಯಿಸಿಕೊಂಡಿದ್ದಾರೆ. ಇದರೊಟ್ಟಿಗೆ ಒತ್ತಡದ ದುಡಿಮೆಯ ಜೀವನದಿಂದ ಪ್ರತಿ ದಿನ ದೈಹಿಕ ಚಟುವಟಿಕೆಯೂ ಸಹ ಕಡಿಮೆಯಾಗಿದೆ. ಇದರ ಫಲವಾಗಿ ಇಂದು ಸಾಕಷ್ಟು ಪ್ರಮಾಣದ ಜನರಲ್ಲಿ ಚಿಕ್ಕ ವಯಸ್ಸಿಗೆ ದೇಹದಲ್ಲಿ ಬೊಜ್ಜು, ಕೆಟ್ಟ ಕೊಲೆಸ್ಟ್ರಾಲ್, ಕೊಬ್ಬಿನ ಅಂಶ ವಿಪರೀತ ಮಟ್ಟಕ್ಕೆ ದಪ್ಪ ಆಗಿರುತ್ತಾರೆ.

ಆದರೆ ಅವರ ಮನಸ್ಸಿಗೆ ಒಂದು ಸಂಕೋಚ ಇರುತ್ತದೆ.  ನಾನು ಇಷ್ಟೇಕೆ ದಪ್ಪವಾಗಿ ಇದ್ದೇನೆ ಅಂತ ತಲೆಯಲ್ಲಿ ಓಡುತ್ತಾ ಇರುತ್ತದೆ. ಅದಕ್ಕೆ ಏನು ಹೆದರಬೇಕಾಗಿಲ್ಲ ಈ ಐದು ವಿಷಯಗಳನ್ನು ತಪ್ಪದೇ ಮಾಡಿ ನಿಮ್ಮ ದೇಹದ ತೂಕ ತನ್ನಿಂದತಾನೇ ಕಡಿಮೆ ಆಗುತ್ತಾ ಬರುತ್ತದೆ.ಅವುಗಳು ಯಾವವು ಅಂತೀರಾ,  ಬನ್ನಿ ನೋಡೋಣ.

* ಮೊಟ್ಟೆಗಳು ತೂಕ ಕಡಿಮೆ ಮಾಡುವುದರಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ.ಮೊಟ್ಟೆಗಳು ಪ್ರೋಟೀನ್ ನಿಂದ ಕೂಡಿದ್ದು, ನೀವು ಬೆಳಗಿನ ಉಪಹಾರಕ್ಕಾಗಿ ಮೊಟ್ಟೆಯನ್ನು ಸೇವಿಸಿದರೆ ದಿನವಿಡಿ ನಿಮ್ಮ ಹೊಟ್ಟೆ ತುಂಬಿದಂತೆ ಆಗಿರುತ್ತದೆ. ಇದರಿಂದ ಸಹ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

* ಮೊಟ್ಟೆ ಮತ್ತು ಪಾಲಕ್- ಮೊಟ್ಟೆಗಳನ್ನು ಬಾಲಕನೊಂದಿಗೆ ಸೇವಿಸಿದರೆ ಹೆಚ್ಚು ಪರಿಣಾಮಕಾರಿ ಬೀರುತ್ತದೆ.ಮೊಟ್ಟೆಯಲ್ಲಿ ಪ್ರೊಟೀನ್ ಅಂಶ ಇದ್ದರೆ ಪಾಲಕ್ ನಲ್ಲಿ ಕಬ್ಬಿಣಾಂಶ ಜಾಸ್ತಿ ಇದೆ.  ಇದರಿಂದಾಗಿ ಮನುಷ್ಯನ ದೇಹದ ತೂಕ ಕಡಿಮೆಯಾಗುತ್ತದೆ.

* ಪೀನಟ್ ಬಟರ್ ಇದು ಕಡಲೆಕಾಯಿ ಇಂದ ತಯಾರಿಸಲಾಗುತ್ತದೆ. ಪ್ರೋಟೀನ ಮೂಲವಾದ ಪೀನಟ್ ಬಟರ್ ಹಸಿವು ನಿಯಂತ್ರಿಸುವ Monosaturated and Polysaturated ಪ್ಯಾಟ್  ಹೊಂದಿರುತ್ತದೆ. ಮತ್ತು ಇದು ಮೆಟಬಾಲಿಸಂ ಸ್ಟ್ರಾಂಗ್ ಗೊಳಿಸುತ್ತದೆ.

* ಸೇಬು ಮತ್ತು ಪೀನಟ್ ಬಟರ್- ಪೀನಟ್ ಬಟರ್ ಸೇಬುವಿನೊಂದಿಗೆ ಸೇವಿಸುವುದರಿಂದ ತೂಕ ಇಳಿಸುವ ಪ್ರಕ್ರಿಯೆ ಇನ್ನಷ್ಟು ವೇಗ ಗೊಳ್ಳುತ್ತದೆ.

* ಹಸಿರು ಸೊಪ್ಪು ತರಕಾರಿಗಳಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ. ಇವುಗಳು ಹಸಿವನ್ನು ನಿಯಂತ್ರಿಸುತ್ತದೆ. ಮತ್ತು ಕಡಿಮೆ ಕ್ಯಾಲೋರಿ ಗಳು ಹೊಂದಿರುವ ಇವುಗಳು ಜಾಸ್ತಿ ಸಮಯದವರೆಗೆ ಹೊಟ್ಟೆ ಹಸಿವಾಗಿ ದಂತೆ ನೋಡಿಕೊಳ್ಳುತ್ತವೆ.

* ಹಸಿರು ತರಕಾರಿಗಳು ಮತ್ತು ಆಲಿವ್ ಎಣ್ಣೆ- ತರಕಾರಿಗಳೊಂದಿಗೆ ಆಲಿವ್ ಎಣ್ಣೆ ಸೇವಿಸಿದರೆ ತೂಕ ಇಳಿಸುವ ಪ್ರಕ್ರಿಯೆ ಹೇಗೆ ಗೊಳ್ಳುತ್ತದೆ. ಇವುಗಳಲ್ಲಿ ಯಾವುದಾದರೂ ಒಂದನ್ನು ನೀವು ಮಾಡಿದರೆ, ನಿಮ್ಮ ದೇಹದ ತೂಕ ಕಡಿಮೆಯಾಗಲು ಯಾವುದೇ ಅನುಮಾನವಿಲ್ಲ.

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ