ದೇಹ ಮತ್ತು ಮನಸ್ಸು ಹಗುರಾಗಿರಬೇಕಾದರೆ ಕನಿಷ್ಠ 6ರಿಂದ 8 ಗಂಟೆ ನಿತ್ಯ ನಿದ್ದೆ ಮಾಡಬೇಕು ಎನ್ನುತ್ತಾರೆ ವೈದ್ಯರು.
ಆದರೆ, ಇಲ್ಲೊಬ್ಬ ಪುಣ್ಯಾತ್ಮ ಬರೋಬ್ಬರಿ 60 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲವಂತೆ.
ಇದು ಸಾಧ್ಯವೇ ಆ ವ್ಯಕ್ತಿ ಯಾರು, ಸೋಷಿಯಲ್ ಮೀಡಿಯದಲ್ಲಿ ಟ್ರೆಂಡ್ ಆಗುತ್ತಿರುವುದು ಏಕೆ ಈ ಕುರಿತು ವಿವರವಾದ ಲೇಖನ ಇಲ್ಲಿದೆ.
BBMP ಬಿಬಿಎಂಪಿ ಬಜೆಟ್ 2023-2024ರಲ್ಲೂ ಜನರಿಗೆ ಸಿಹಿಸುದ್ದಿ ?
ಉತ್ತಮ ನಿದ್ದೆ ಆರೋಗ್ಯದ ಗುಟ್ಟು ಎನ್ನುತ್ತಾರೆ ವೈದ್ಯರು. ಆದರೆ ಇಲ್ಲೊಬ್ಬರು ಬರೋಬ್ಬರಿ 60 ವರ್ಷಗಳಿಂದ ನಿದ್ದೆಯ ಮುಖವನ್ನೇ ನೋಡಿಲ್ಲವಂತೆ. ಹೌದು ವಿಯೆಟ್ನಾಂನ ಥಾಯ್ನಗೊಕ್ ಎಂಬ ವ್ಯಕ್ತಿ 1962ರಿಂದ ತಾನು ನಿದ್ದೆಯನ್ನೇ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಥಾಯ್ ನಗೊಕ್ ಎಂಬ 80 ವರ್ಷದ ವ್ಯಕ್ತಿ ದಶಕಗಳ ಹಿಂದೆ, ಬಾಲ್ಯದಲ್ಲಿ ತನಗೆ ಜ್ವರವಿತ್ತು. ಇದಾದ ನಂತರದಲ್ಲಿ ತನಗೆ ಮತ್ತೆ ನಿದ್ರೆ ಬರಲಿಲ್ಲ ಎನ್ನುತ್ತಾರೆ.
ಅರೇ ಇದೇನ್ರಿ ನಿದ್ರೆಯೇ ಬರುವುದಿಲ್ಲವೆಂದರೆ ವರವಲ್ಲವೇ ಎಂದು ನಮಗನಿಸುವಷ್ಟರಲ್ಲಿ ಥಾಯ್ನಗೊಕ್ ಅವರು ತಾನಗೂ ಎಲ್ಲರಂತೆ ನೆಮ್ಮದಿಯಿಂದ ಕಣ್ಮುಚ್ಚಿ ಕ್ಷಣ ಕಾಲವಾದರೂ ನಿದ್ರಿಸಬೇಕು ಎಂಬ ತುಡಿತವಿದೆ ಎನ್ನುವುದು ಮರುಕವನ್ನು ಮೂಡಿಸುತ್ತದೆ.
ಹೆಣ್ಣು ಮಕ್ಕಳಿಗೆ ಉಚಿತ ಬಸ್‌ಪಾಸ್: ಕೆಎಸ್ಆರ್‌ಟಿಸಿ ಅಂಬಾರಿ ಉತ್ಸವ ಬಸ್ ಲೋಕಾರ್ಪಣೆ!
ಇನ್ನು ಥಾಯ್ನಗೊಕ್ ಅವರ ಪತ್ನಿ, ಮಕ್ಕಳು, ಸ್ನೇಹಿತರು ಮತ್ತು ನೆರೆಹೊರೆಯವರು ಸೇರಿದಂತೆ ಯಾರೂ ಥಾಯ್ನಗೊಕ್ ಅವರು ಮಲಗಿರು ವುದನ್ನು ನೋಡಿಲ್ಲ.
ಅನೇಕರು ನಗೊಕ್ ಅವರ ಸ್ಥಿತಿಯನ್ನು ಪರೀಕ್ಷಿಸಲು ಪ್ರಯತ್ನಿಸಿದ್ದೂ ಇದೆ. ಆದರೆ, ಯಾರಿದಂದಲೂ ಅವರ ವಾದವನ್ನು ತಿರಸ್ಕರಿಸಲು ಸಾಧ್ಯವಾಗಿಲ್ಲ.
80 ವರ್ಷ ವಯಸ್ಸಿನ ವ್ಯಕ್ತಿಯ ನಿದ್ರಾಹೀನತೆ ಮತ್ತು ಕ್ಷಣಕಾಲವೂ ನಿದ್ದೆಯಿಲ್ಲದ ಕರಾಳರಾತ್ರಿಗಳು ಆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನೀವು ಭಾವಿಸಿದರೆ. ಅದನ್ನೂ ಇವರು ಸುಳ್ಳು ಮಾಡುತ್ತಾರೆ.
ಈ ಸಮಸ್ಯೆ ಅವರ ಆರೋಗ್ಯದ ಮೇಲೆ ಎಳ್ಳಷ್ಟೂ ಪರಿಣಾಮ ಬೀರಿಲ್ಲ. ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ನಗೊಕ್ ಅವರು ಆರೋಗ್ಯವಾಗಿದ್ದಾರೆ.
ಇದನ್ನೂ ಓದಿರಿ : weather change ಹವಾಮಾನ ಬದಲಾವಣೆಯಿಂದ ಸಂಕಷ್ಟಕ್ಕೆ ಸಿಲುಕಲಿವೆ ಭಾರತದ 9 ರಾಜ್ಯಗಳು: ಎಚ್ಚರಿಕೆ!
ನಿದ್ರೆ ಎನ್ನುವುದು ಒಂದು ಜೈವಿಕ ಪ್ರಕ್ರಿಯೆ. ನಿದ್ರೆಯಿಂದ ಮೆದುಳಿನ ಕಾರ್ಯ, ಹಸಿವು ನಿಯಂತ್ರಣ, ಹಾರ್ಮೋನ್ ಮತ್ತು ಹೃದಯರಕ್ತನಾಳ ಸುಗಮವಾಗಿ ಕೆಲಸ ಮಾಡುವುದರಿಂದೊಂಗಿ ಹಲವು ಪ್ರಯೋಜನಗಳಿವೆ ಆದರೆ, ನಗೊಕ್ ಅವರ ವಿಚಾರದಲ್ಲಿ ಇದು ಸುಳ್ಳಾಗಿದೆ.
ಈ ಎಲ್ಲ ಚರ್ಚೆಗಳ ಹೊರತಾಗಿ ಅವರಿಗೆ ಯಾವ ಕಾರಣಕ್ಕೆ ನಿದ್ರೆ ಬರುತ್ತಿಲ್ಲ ಎನ್ನುವುದು ವೈಜ್ಞಾನಿಕವಾಗಿ ಇನ್ನಷ್ಟೇ ರುಜುವಾಗಬೇಕಾಗಿದೆ.
ಇದನ್ನೂ ಓದಿರಿ : PMKisanUpdate ಪಿ.ಎಂ ಕಿಸಾನ್ ಹಣ ಇದೇ ದಿನ ನಿಮ್ಮ ಖಾತೆಗೆ ಬರಲಿದೆ!