Health & Lifestyle

ಸೂರ್ಯ ನಮಸ್ಕಾರದಿಂದ ಆಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ...

26 October, 2020 2:05 PM IST By:

ಜಗತ್ತಿನ ಸಮಸ್ತ ಜೀವಿಗಳ ಅಸ್ತಿತ್ವಕ್ಕೆ ಕಾರಣವಾಗಿರುವ ಸೂರ್ಯನಿಗೆ ಯಾವುದೇ ಜಾತಿ, ಧರ್ಮವಿಲ್ಲ. ಅವನಿಗೆ ನಮಸ್ಕರಿಸಿದರೆ ಹಿಂದೂ ದೇವರಿಗೆ ನಮಸ್ಕರಿಸಿದಂತಾಗುವುದಿಲ್ಲ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ. ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ.

ಉಸಿರಾಟದ ವಿನ್ಯಾಸಕ್ಕೆ ಅನುಗುಣವಾಗಿ ಲಯಬದ್ಧ ರೀತಿಯಲ್ಲಿ ಸಂಯೋಜನೆಗೊಂಡಿರುವ ವಿಶಿಷ್ಠ ಆಸನವಾಗಿರುವ ಸೂರ್ಯ ನಮಸ್ಕಾರ ಎಲ್ಲಾ ಆಸನಗಳಿಂತಲೂ ಸರ್ವಶ್ರೇಷ್ಠವಾದದ್ದು. ವಿವಿಧ ಆಸನಗಳ ಬದಲಿಗೆ ಮುಂಜಾನೆ ಸೂರ್ಯ ನಮಸ್ಕಾರ ಮಾಡುವುದರಿಂದ ನಮಗೆ ಅಧಿಕ ಲಾಭವಿದೆ ಎನ್ನುತ್ತಾರೆ ತಜ್ಞರು. ಸೂರ್ಯ ನಮಸ್ಕಾರ ಮಾಡುವ ವೈಜ್ಞಾನಿಕ ವಿಧಾನವನ್ನು ಇಲ್ಲಿ ಸುಲಭವಾಗಿ ಅರ್ಥವಾಗುವ ಹಾಗೆ ತಿಳಿಸಲಾಗಿದೆ. ಇದನ್ನು ನೋಡಿಕೊಂಡು, ಸರ್ವಾಂಗೀಣ ಆರೋಗ್ಯಕ್ಕಾಗಿ ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡಬಹುದು.

ಯೋಗದ ಅವಿಭಾಜ್ಯ ಅಂಗವಾಗಿರುವ ಸೂರ್ಯ ನಮಸ್ಕಾರವು 12 ಆಸನಗಳನ್ನು ಒಳಗೊಂಡಿರುವ ಒಂದೇ ಆಸನವಾಗಿದೆ. ಮಾಡುವ ವಿಧಾನ ಮತ್ತು ಲಾಭಗಳು ತಿಳಿದುಕೊಳ್ಳೋಣ.

  1. ನಮಸ್ಕಾರಾಸನ

ಮೊದಲಿಗೆ ಎರಡೂ ಕಾಲು ಜೋಡಿಸಿಕೊಂಡು ಪೂರ್ವಕ್ಕೆ ಮುಖ ಮಾಡಿ ನಿಂತುಕೊಂಡು ಎರಡೂ ಕೈಗಳನ್ನು ನಮಸ್ಕರಿಸುವ ಭಂಗಿಯಲ್ಲಿ ಎದೆಯ ಮುಂಭಾಗದಲ್ಲಿ ಹಿಡಿದುಕೊಂಡು ಸೂರ್ಯದೇವನನ್ನು ಸ್ಮರಿಸಿಕೊಳ್ಳಬೇಕು.

  1. ಹಸ್ತ ಉತ್ತಾನಾಸನ

ಈ ಆಸನ ಮಾಡುವ ಮೊದಲು ಉಸಿರನ್ನು ದೇಹದೊಳಗೆ ತೆಗೆದುಕೊಳ್ಳಿ. ಬಳಿಕ ನಿಮ್ಮ ಕೈಗಳನ್ನು ತಲೆಯಿಂದ ಮೇಲಕ್ಕೆ ಎತ್ತಿ. ಎದೆಯ ಭಾಗವನ್ನು ಹಿಂದಕ್ಕೆ ಬಗ್ಗಿಸಿ. ಈ ಸಂದರ್ಭದಲ್ಲಿ ನಿಮ್ಮ ತಲೆ ಹಾಗೂ ಬೆನ್ನನ್ನು ಸಾಧ್ಯವಾದಷ್ಟು ಹಿಂಭಾಗಕ್ಕೆ ಬಾಗಿಸಿ. ಈ ವೇಳೆ ಮಂಡಿಗಳನ್ನು ಬಿಗಿಯಾಗಿ ಇರಿಸಿಕೊಳ್ಳಿ. ಆದರೆ ಬೆನ್ನಿನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಬೇಡಿ.

  1. ಹಸ್ತಪಾದಾಸನ

ಬೆನ್ನುಮೂಳೆಯನ್ನು ನೇರವಾಗಿಟ್ಟುಕೊಂಡು ಉಸಿರನ್ನು ಹೊರಗೆ ಬಿಡುತ್ತಾ ಸೊಂಟದಿಂದ ಮುಂದಕ್ಕೆ ಬಗ್ಗಿ. ಉಸಿರನ್ನು ಸಂಪೂರ್ಣವಾಗಿ ಹೊರಗೆ ಬಿಟ್ಟು ಕೈಗಳನ್ನು ಪಾದದ ಬಳಿ ನೆಲದ ಮೇಲಿಡಿ. ಸಾಧ್ಯವಾಗದಿದ್ದಲ್ಲಿ ಮಂಡಿಯನ್ನು ಕೊಂಚ ಬಗ್ಗಿಸಿ ಅಂಗೈಯನ್ನು ನೆಲದ ಮೇಲಿಡಲು ಪ್ರಯತ್ನಿಸಿ ಬಳಿಕ ಮಂಡಿಯನ್ನು ನೇರವಾಗಿಸಲು ಪ್ರಯತ್ನಿಸಿ.

  1. ಏಕಪಾದ ಪ್ರಸರಣಾಸನ

ಉಸಿರನ್ನು ಒಳಗೆಳೆಯುತ್ತಾ ಬಲಗಾಲನ್ನು ಸಾಧ್ಯವಾದಷ್ಟು ಹಿಂದೆ ತಳ್ಳಿ. ಬಳಿಕ ಬಲ ಮಂಡಿಯನ್ನು ನೆಲಕ್ಕೆ ತಾಗಿಸಿ ಆಕಾಶದೆಡೆ ಮುಖ ಮಾಡಿ. ಈ ವೇಳೆ ಎಡಪಾದ ಅಂಗೈಗಳ ನಡುವೆ ಇರುವಂತೆ ನೋಡಿಕೊಳ್ಳಿ.

  1. ದ್ವಿಪಾದ ಪ್ರಸರಣಾಸನ

ಉಸಿರನ್ನು ನಿಧಾನವಾಗಿ ಒಳಗೆ ತೆಗೆದುಕೊಳ್ಳುತ್ತಾ ಎಡ ಕಾಲಿನ ಪಾದವನ್ನು ಹಿಂದಕ್ಕೆ ತೆಗೆದುಕೊಂಡು ಶರೀರವನ್ನುಸಂಪೂರ್ಣವಾಗಿ ನೇರವಾದ ರೇಖೆಯಲ್ಲಿರಿಸಿ ಹಾಗೂ ತೋಳುಗಳನ್ನು ನೆಲಕ್ಕೆ ಲಂಬವಾಗಿರಿಸಿ.

  1. ಅಷ್ಟಾಂಗ ನಮಸ್ಕಾರ

ನಿಧಾನವಾಗಿ ಮಂಡಿಗಳನ್ನು ನೆಲಕ್ಕೆ ತಂದು ಉಸಿರು ಬಿಡಿ. ಬಳಿಕ ಪೃಷ್ಠವನ್ನು ಹಿಂದೆ ತೆಗೆದುಕೊಂಡು, ಮುಂದಕ್ಕೆ ಬಗ್ಗಿ ಎದೆ ಹಾಗೂ ಗಲ್ಲವನ್ನು ನೆಲಕ್ಕೆ ತಾಗುವಂತಿಡಿ. ದೇಹದ ಹಿಂದಿನ ಭಾಗವನ್ನು ಸ್ವಲ್ಪ ಮೇಲಕ್ಕೆತ್ತಿ. ಈ ವೇಳೆ ಎರಡೂ ಕೈಗಳು ಮತ್ತು ಪಾದಗಳು, ಎರಡೂ ಮಂಡಿಗಳು, ಎದೆ ಮತ್ತು ಗಲ್ಲ ಹೀಗೆ ಎಂಟು ಶರೀರದ ಭಾಗಗಳು ನೆಲಕ್ಕೆ ತಾಗಿರಬೇಕು.

  1. ಭುಜಂಗಾಸನ

ಈ ಆಸನ ಮಾಡುವ ವೇಳೆ ನಿಧಾನವಾಗಿ ಉಸಿರು ಹೊರಬಿಟ್ಟು ಎದೆಯನ್ನು ಮುಂದಕ್ಕೆ ಬಾಗಿಸಿ ಕೈಗಳನ್ನು ನೆಲದ ಮೇಲೆ ನೇರವಾಗಿಡಿ. ಕತ್ತನ್ನು ಹಿಂಬದಿಗೆ ಬಾಗಿಸಿ ಮೇಲಕ್ಕೆ ನೋಡಿ.

  1. ಅಧೋಮುಖ ಶ್ವಾನಾಸನ

ಈ ಆಸನ ಮಾಡುವ ಸಂದರ್ಭದಲ್ಲಿ ನಿಧಾನವಾಗಿ ಉಸಿರನ್ನು ಹೊರಬಿಟ್ಟು, ಎರಡೂ ಕಾಲುಗಳನ್ನು ನಿಧಾನವಾಗಿ ಹಿಂದಕ್ಕೆ ತೆಗೆದುಕೊಳ್ಳಿ. ಎರಡೂ ಕೈಗಳನ್ನು ಮುಂದಿನ ಬದಿಯಲ್ಲಿ ನೆಲಕ್ಕೆ ತಾಗಿಸಿ, ಕತ್ತನ್ನು ಬಾಗಿಸಿ.

  1. ಅಶ್ವ ಸಂಚಾಲಾಸನ

ಉಸಿರನ್ನು ಒಳಗೆಳೆಯುತ್ತಾ ಎಡಗಾಲನ್ನು ಸಾಧ್ಯವಾದಷ್ಟು ಹಿಂದೆ ತಳ್ಳಿ. ಬಳಿಕ ಬಲ ಮಂಡಿಯನ್ನು ನೆಲಕ್ಕೆ ತಾಗಿಸಿ ಆಕಾಶದೆಡೆ ಮುಖ ಮಾಡಿ. ಈ ವೇಳೆ ಎಡಪಾದ ಅಂಗೈಗಳ ನಡುವೆ ಇರುವಂತೆ ನೋಡಿಕೊಳ್ಳಿ.

  1. ಹಸ್ತ ಪಾದಾಸನ

ಈ ಆಸನ ಮಾಡುವ ಮೊದಲು ಉಸಿರನ್ನು ದೇಹದೊಳಗೆ ತೆಗೆದುಕೊಳ್ಳಿ. ಬಳಿಕ ನಿಮ್ಮ ಕೈಗಳನ್ನು ತಲೆಯಿಂದ ಮೇಲಕ್ಕೆ ಎತ್ತಿ. ಎದೆಯ ಭಾಗವನ್ನು ಹಿಂದಕ್ಕೆ ಬಗ್ಗಿಸಿ. ಈ ಸಂದರ್ಭದಲ್ಲಿ ನಿಮ್ಮ ತಲೆ ಹಾಗೂ ಬೆನ್ನನ್ನು ಸಾಧ್ಯವಾದಷ್ಟು ಹಿಂಭಾಗಕ್ಕೆ ಬಾಗಿಸಿ. ಈ ವೇಳೆ ಮಂಡಿಗಳನ್ನು ಬಿಗಿಯಾಗಿ ಇರಿಸಿಕೊಳ್ಳಿ. ಆದರೆ ಬೆನ್ನಿನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಬೇಡಿ.

  1. ಹಸ್ತ ಉತ್ತಾನಾಸನ

ಈ ಆಸನ ಮಾಡುವ ಮೊದಲು ಉಸಿರನ್ನು ದೇಹದೊಳಗೆ ತೆಗೆದುಕೊಳ್ಳಿ. ಬಳಿಕ ನಿಮ್ಮ ಕೈಗಳನ್ನು ತಲೆಯಿಂದ ಮೇಲಕ್ಕೆ ಎತ್ತಿ. ಎದೆಯ ಭಾಗವನ್ನು ಹಿಂದಕ್ಕೆ ಬಗ್ಗಿಸಿ. ಈ ಸಂದರ್ಭದಲ್ಲಿ ನಿಮ್ಮ ತಲೆ ಹಾಗೂ ಬೆನ್ನನ್ನು ಸಾಧ್ಯವಾದಷ್ಟು ಹಿಂಭಾಗಕ್ಕೆ ಬಾಗಿಸಿ. ಈ ವೇಳೆ ಮಂಡಿಗಳನ್ನು ಬಿಗಿಯಾಗಿ ಇರಿಸಿಕೊಳ್ಳಿ. ಆದರೆ ಬೆನ್ನಿನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಬೇಡಿ.

  1. ನಮಸ್ಕಾರಾಸನ

ಮೊದಲಿಗೆ ಎರಡೂ ಕಾಲು ಜೋಡಿಸಿಕೊಂಡು ಪೂರ್ವಕ್ಕೆ ಮುಖ ಮಾಡಿ ನಿಂತುಕೊಂಡು ಎರಡೂ ಕೈಗಳನ್ನು ನಮಸ್ಕರಿಸುವ ಭಂಗಿಯಲ್ಲಿ ಎದೆಯ ಮುಂಭಾಗದಲ್ಲಿ ಹಿಡಿದುಕೊಂಡು ಸೂರ್ಯದೇವನ್ನು ಸ್ಮರಿಸಿಕೊಳ್ಳಬೇಕು.

ಲಾಭಗಳು:

  • ದೇಹ ದಂಡನೆಗೆ ಸಹಕಾರಿ.
  • ಕತ್ತು, ಬೆನ್ನುಹುರಿ, ತೊಡೆ, ಮೀನುಖಂಡಗಳಲ್ಲಿನ ಅಶಕ್ತತೆ ನಿವಾರಣೆ.
  • ದೇಹ ದಂಡನೆ ಮೂಲಕ ಮನಸ್ಸಿನ ಮೇಲೆ ಹತೋಟಿ.
  • ದೇಹದ ಎಲ್ಲಾ ಅವಯವಗಳು ಸಡಿಲಗೊಂಡು, ನರ-ನಾಡಿಗಳು ಚೈತನ್ಯ ಪಡೆಯುತ್ತವೆ.
  • ಮೆದುಳಿನ ಕಾರ್ಯ ಚುರುಕಾಗುತ್ತದೆ. ಓಜಸ್ಸು, ತೇಜಸ್ಸು ಹೆಚ್ಚುತ್ತದೆ.
  • ಪಚನ ಕ್ರಿಯೆಗೆ ಸಹಕಾರಿ. ಮಲಬದ್ಧತೆ ನಿವಾರಣೆ.
  • ಉದರ ದೋಷ ನಿವಾರಣೆ.
  • ಮನಸ್ಸು ಸದಾ ಲವಲವಿಕೆಯಿಂದ ಕೂಡಿರುತ್ತದೆ.
  • ಸ್ವಪ್ನದೋಷ, ವೀರ್ಯಸ್ಖಲನ, ಸಂದಿವಾತ, ಸ್ತ್ರೀಯರಲ್ಲಿ ಸೂತಕ(ಮಾಸಿಕ ಸ್ರಾವ) ದೋಷ, ಗರ್ಭಾಶಯ ವಿಕಾರ ದೋಷಗಳನ್ನು ನಿವಾರಿಸಬಲ್ಲ ಶಕ್ತಿ ಸೂರ್ಯ ನಮಸ್ಕಾರಕ್ಕಿದೆ.
  • ಸೂರ್ಯನಿಗೆ ನಮನಗಳನ್ನು ಅರ್ಪಿಸಿದ ಭಾವದಲ್ಲಿ ಮನಸ್ಸು ತಿಳಿಯಾಗಿ ಶಾಂತ ಸ್ವಭಾವ ಪಡೆಯುತ್ತದೆ. ಹತ್ತು ಹಲವು ಕಾಯಿಲೆಗಳಿಂದ ದೂರವಿರಲು ಸಹಕಾರಿ.

ಯೋಗದ ಬಗ್ಗೆ ಮಾಹಿತಿ, ಆನ್‌ಲೈನ್‌ ತರಗತಿಗಳಿಗಾಗಿ : 9611991229 ಸಂಪರ್ಕಿಸಬಹುದು 

ಲೇಖಕರು : ಪ್ರವೀಣ್ ಎಸ್, ಯೋಗ ಶಿಕ್ಷಕರು