ಆಲೂಗಡ್ಡೆಯನ್ನು ಸಾಮಾನ್ಯವಾಗಿ ತರಕಾರಿಗಳ ಸಾಮ್ರಾಜ್ಯದಲ್ಲಿ ರಾಜ ಎಂದು ಕರೆಯಲಾಗುತ್ತದೆ. ಹೀಗಿದ್ದರೂ ಕೆಲವರು ಆಲೂ ಸೇವನೆಯಿಂದ ಅಂತರ ಕಾಪಾಡಿಕೊಳ್ಳುತ್ತಾರೆ. ಇದ್ಯಾಗೂ ಕೆವರು ಆಲೂವಿನ ಕುರಿತು ಅಸಡ್ಡೆ ತೋರುತ್ತಾರೆ. ಕೆಲವರು ಆಲೂಗಡ್ಡೆಯನ್ನು ತಿಂದರೆ ವಾತ ಹೆಚ್ಚಾಗುತ್ತದೆ ಎಂದರೆ, ಮತ್ತೆ ಕೆಲವರು ಇದರಲ್ಲಿ ಕರ‍್ಬ್ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಬೊಜ್ಜು ಹೆಚ್ಚಾಗುತ್ತದೆ ಎಂದು ವಾದಿಸುತ್ತಾರೆ.
ಎಲ್ಲಾ ಆರೋಗ್ಯ ಸಮಸ್ಯೆಗೂ ಆರೋಗ್ಯ ಸಂಜೀವಿನಿ ವಿಮೆ
ವಾಸ್ತವವಾಗಿ ಆಲೂಗೆಡ್ಡೆಯಲ್ಲಿ ಮನುಷ್ಯನಿಗೆ ಬೇಕಾಗಿರುವ ಅನೇಕ ಜೀವಸತ್ವಗಳು ಅಡಗಿವೆ. ಹೀಗಾಗಿ ಆಲೂಗಡ್ಡೆ ಸೇವನೆಯಿಂದ ದೇಹಕ್ಕೆ ಸಿಗುವ ಪೋಷಕಾಂಶಗಳಾವುವು ಸಿಕ್ಕಾಪಟ್ಟೆಯಿವೆ. ಈ ತರಕಾರಿಯಲ್ಲಿ ಕಂಡುಬರುವ ಪ್ರೋಟೀನ್ ಅನ್ನು ದೇಹದ ಬಿಲ್ಡಿಂಗ್ ಬ್ಲಾಕ್ ಎಂದು ಕರೆಯಲಾಗುತ್ತದೆ. ನಮ್ಮ ರಕ್ತದ ಅಂಗಾಂಶ ಮತ್ತು ಮೂಳೆಗಳನ್ನು ಬಲಪಡಿಸಲು ಇದು ತುಂಬಾ ಸಹಕಾರಿಯಾಗಿದೆ.
ಅತಿಯಾಗಿ ಮೊಟ್ಟೆ ತಿಂದರೆ ಏನೆಲ್ಲಾ ಅಡ್ಡ ಪರಿಣಾಮಗಳು ಇವೆ ಗೊತ್ತಾ..?
ವಿಟಮಿನ್ ಸಿ, ಫೈಬರ್, ಪೊಟ್ಯಾಶಿಯಂ ಮತ್ತು ವಿಟಮಿನ್ ಬಿ 6 ನ ಉತ್ತಮ ಮೂಲವಾಗಿದೆ ಆಲೂಗಡ್ಡೆ. ಇತ್ತೀಚಿನ ಸಂಶೋಧನೆಯಲ್ಲಿ ಮನುಷ್ಯನ ಆಹಾರಕ್ರಮದಲ್ಲಿ ಆಲೂಗೆಡ್ಡೆ ಸಮತೋಲಿತ ಆಹಾರದ ಪ್ರಮುಖ ಭಾಗ ಎಂದು ಹೇಳಲಾಗಿದೆ.
ʼಶುಗರ್ ಫ್ರೀ ಆಲೂಗಡ್ಡೆʼ ಏನಿದರ ವಿಶೇಷತೆ..?
ಸಕ್ಕರೆ ಮುಕ್ತ ಆಲೂಗಡ್ಡೆ ಇದೆಯೇ? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲಿ ಮೂಡುತ್ತೆ. ಅದಕ್ಕೆ
ಆಲೂಗೆಡ್ಡೆ ಸಂಶೋಧನಾ ಕೇಂದ್ರವು ಈಗಾಗಲೇ ಎರಡು ಪ್ರಭೇದಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ DSP-7 ಮತ್ತು DSP-19-ಹೆಚ್ಚು ಇಳುವರಿ ನೀಡುವ, ಕಡಿಮೆ-ಸಕ್ಕರೆ ಅಂಶವನ್ನು ಹೊಂದಿವೆ ಎಂದು ಹೇಳಲಾಗಿದೆ.
ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವನ್ನು ನಿರ್ವಹಿಸುವುದು ಹೇಗೆ ?
ಶುಗರ್ ಫ್ರೀ ಆಲೂಗಡ್ಡೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು ಸಾಕಷ್ಟು ದುಬಾರಿ ಕೂಡ ಆಗಿದೆ. ಹೌದು ಕೆಜಿಗೆ 80 ರಿಂದ 100 ರೂಪಾಯಿ ಬೆಲೆ ಇದ್ದು, ಸಾಮಾನ್ಯ ಆಲೂಗಡ್ಡೆಗಿಂತ 4 ರಿಂದ 5 ಪಟ್ಟು ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ರೈತರು ಸಾಮಾನ್ಯ ಆಲೂಗಡ್ಡೆಗಿಂತ ಸಕ್ಕರೆ ರಹಿತ ಆಲೂಗೆಡ್ಡೆಯನ್ನು ಬೆಳೆಯುವ ಮೂಲಕ ಹಲವು ಪಟ್ಟು ಲಾಭ ಪಡೆಯಬಹುದು. ಭಾರತದಲ್ಲಿ ಸಕ್ಕರೆ ಮುಕ್ತ ಆಲೂಗಡ್ಡೆ ಬೆಳೆಯುವ ಅನೇಕ ರಾಜ್ಯಗಳಿವೆ. ಇದು ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಪಂಜಾಬ್, ಮತ್ತು ಉತ್ತರ ಪ್ರದೇಶಗಳಲ್ಲಿ ನಾವು ಈ ರೀತಿ ಆಲೂ ಗಡ್ಡೆಗಳನ್ನು ಕಾಣಬಹುದಾಗಿದೆ.