Health & Lifestyle

ಹೆಚ್ಚಾಗಿ ಕುಳಿತುಕೊಳ್ಳುವುದರಿಂದ ನಮ್ಮ ಆರೋಗ್ಯದಲ್ಲಿ ಆಗುವ ದುಷ್ಪರಿಣಾಮ ತಡೆಯಲು ಏನೇನು ಮಾಡಬೇಕು? ಇಲ್ಲಿದೆ ಮಾಹಿತಿ

12 August, 2021 2:08 PM IST By:

ಕೋವಿಡ್ ನಿಂದಾಗಿ ಬಹುತೇಕ ನೌಕರರಿಗೆ ವರ್ಕ್ ಫ್ರಂ ಹೋಂ ಆಗಿದೆ. ಒಂದೇ ಕಡೆ ಕುಳಿತು ನಿರಂತರವಾಗಿ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇತ್ತೀಚೆಗೆ ಬಹುತೇಕ ಕಂಪನಿಗಳು ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಿದ್ದರಿಂದ  8 ಗಂಟೆಗಳಿಗಿಂತ ಹೆಚ್ಚು ಸಮಯ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಅವರು ಹಲವಾರು ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಇದರಿಂದಾಗಿ  ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ ಎಂದು ಯುನೈಟೆಡ್ ಕಿಂಗ್‌ಡಂನ ಹಡರ್ಸ್‌ಫೀಲ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಕೋವಿಡ್‌ನಿಂದಾಗಿ ಜಿಮ್‌, ಉದ್ಯಾನವನಗಳಂತಹ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಿದ್ದರಿಂದ ಜನರು ಮನೆಯಿಂದ ಹೊರಹೋಗದೆ ನಾಲ್ಕು ಗೋಡೆಗಳ ಮಧ್ಯ ಬಂಧನವಾದಂತಾಗಿದೆ.  ಅಲ್ಲದೆ, ವಾಕಿಂಗ್, ಜಾಗಿಂಗ್ ಅಥವಾ ಸೈಕ್ಲಿಂಗ್‌ನಂತಹ ಇತರ ಹೊರಾಂಗಣ ಚಟುವಟಿಕೆಗಳು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಒಂದೇ ಕಡೆ ಕೆಲಸ ಮಾಡುವುದರಿಂದ ಆಗುವ ತೊಂದರೆಗಳನ್ನು ತಪ್ಪಿಸಲು ವೈದ್ಯರು ನೀಡಿದ ಸಲಹೆಗಳ ಮಾಹಿತಿ ಇಲ್ಲಿದೆ.

ಪ್ರತಿನಿತ್ಯ ಶಾಂತಿಯುತವಾಗಿ ಹಾಗೂ ನಿರಾಳವಾದ ಮನಸ್ಸಿನಿಂದ ಕೆಲಸ ಆರಂಭಿಸಬೇಕು. ಪ್ರಾಣಾಯಾಮದಂತಹ ಕೆಲವು ಉಸಿರಾಟದ ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು. ಈ ಅಭ್ಯಾಸವು  ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತದೊತ್ತಡ, ಹೃದಯ ಬಡಿತ ಮತ್ತು ಖಿನ್ನತೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ.

ಮನುಷ್ಯನ ದೇಹಕ್ಕೆ ವ್ಯಾಯಾಮ ಎಷ್ಟು ಅಗತ್ಯ ಎಂದರೆ ಆತ ತಾನು ಸೇವಿಸಿದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಜೀರ್ಣ ಮಾಡಿಕೊಂಡು ಯಾವುದೇ ಅನಾರೋಗ್ಯ ಸಮಸ್ಯೆ ಇಲ್ಲದೆ ಆರೋಗ್ಯವಂತನಾಗಿ ಬದುಕಬೇಕು ಎಂದರೆ ಮೊದಲು ಆತ ತನ್ನ ಮೈ ಕೈ ಗಳಿಗೆ ಕೆಲಸ ಕೊಡಬೇಕು.

ಕಚೇರಿಗಳಿಂದ ಬರುವ ಕರೆಗಳನ್ನು ಸ್ವೀಕರಿಸಿ ಒಂದೇ ಕುಳಿತಿಕೊಳ್ಳುವ ಬದಲಾಗಿ ಸುತ್ತಲೂ ನಡೆದುಕೊಂಡು ಮಾತನಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿ ರಕ್ತ ಪರಿಚಲನೆ ಸುಧಾರಿಸುವುದರ ಜೊತೆಗೆ, ಸ್ಕ್ರೀನ್ ಸಮಯದಿಂದ ಹೆಚ್ಚು ಅಗತ್ಯವಿರುವ ವಿರಾಮದಿಂದ ಪ್ರಯೋಜನವನ್ನು ಪಡೆಯಲು ಸಹಾಯ ಮಾಡುತ್ತದೆ.

ಕೆಲಸದ ನಡುವೆ ಸಣ್ಣ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ಅತೀ ಅಗತ್ಯವಾಗಿದೆ. ನಿರಂತರವಾಗಿ ಕೆಲಸ ಮಾಡುವದರಿಂದ ಸರಿಯಾಗಿ ರಕ್ತ ಪರಿಚಯವಾಗದೆ ನರದೌರ್ಬಲ್ಯದಂತಹ ಸಮಸ್ಯೆಯುಂಟಾಗುತ್ತದೆ. ವಿರಾಮಗಳು ಮನಸ್ಸು ಮತ್ತು ದೇಹ ಎರಡಕ್ಕೂ ಪ್ರಯೋಜನಕಾರಿ. ಇದು ಸ್ನಾಯುಗಳು ಮತ್ತು ಕೀಲುಗಳಿಗೆ ಅಗತ್ಯವಾದ ಚಲನೆಯನ್ನು ಒದಗಿಸುತ್ತದೆ.

 ಮನೆಯಿಂದ ಕೆಲಸ ಮಾಡುವಾಗ ಕಣ್ಣಿನ ಒತ್ತಡ ಕಡಿಮೆ ಮಾಡಲು ಇರುವ ಒಂದು ಸುಲಭವಾದ ವ್ಯಾಯಾಮವೆಂದರೆ. ಪ್ರತಿ 20 ನಿಮಿಷದ ನಂತರ ಪರದೆಯಿಂದ ದೂರ ಇರುವ ವಸ್ತುವನ್ನು ನೋಡುವ ಅಭ್ಯಾಸ ಮಾಡಬೇಕು ಮತ್ತು 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿರುವ ಯಾವುದೇ ವಸ್ತುವಿನ ಮೇಲೆ ಗಮನ ಹರಿಸಬೇಕು. ಇದು ಕಣ್ಣುಗಳಿಗೆ ಒತ್ತಡ ಪರಿಹಾರವಾಗಿ ಕೆಲಸ ಮಾಡುತ್ತದೆ.

ವ್ಯಾಯಾಮ ಮಾಡುವುದು ಒಂದು ಆರೋಗ್ಯಕರ ಅಭ್ಯಾಸ. ಇದನ್ನು ಪ್ರತಿಯೊಬ್ಬರು ತಮ್ಮ ಚಿಕ್ಕ ವಯಸ್ಸಿನಿಂದಲೂ ರೂಢಿ ಮಾಡಿಕೊಂಡರೆ ಒಳ್ಳೆಯದು. ಏಕೆಂದರೆ ಮಕ್ಕಳಲ್ಲಿ ಕಲಿತ ಹಲವು ಅಭ್ಯಾಸಗಳು ಜೀವನದಲ್ಲಿ ಕೊನೆಯವರೆಗೂ ಹಾಗೆ ಮುಂದುವರೆಯುತ್ತವೆ.

ಹಾಗಾಗಿ ವಯಸ್ಸು ಹೆಚ್ಚಾದಂತೆ ಕೆಟ್ಟ ಚಟಗಳಿಗೆ ದುಂಬಾಲು ಬೀಳುವ ಬದಲು ಇಂತಹ ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ಆರೋಗ್ಯ ಮತ್ತು ಆಯಸ್ಸು ಎರಡೂ ವೃದ್ಧಿ ಆಗುತ್ತದೆ.

ಬೆಳಗ್ಗೆ ಮತ್ತು ಸಾಯಂಕಾಲ ಯಾವ ಸಮಯ ಅನುಕೂಲವಾಗುತ್ತದೆಯೋ ಆ ಸಂದರ್ಭದಲ್ಲಿ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಒಂದು ವೇಳೆ ವ್ಯಾಯಾಮ ಮಾಡಲು ಆಗದಿದ್ದರೆ ನಿಮಗೆ ಇಷ್ಟವಾದ ಆಟವಾಡಬಹುದು. ಇದು ನಮಗರಿವಿಲ್ಲದೆಯೇ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.