Health & Lifestyle

ಈ ಆರೋಗ್ಯ ತೊಂದರೆ ಇದ್ದವರು ಅಪ್ಪಿತಪ್ಪಿಯೂ ಅರಿಶಿನ ತಿನ್ನಬೇಡಿ! ಯಾಕೆ ಗೊತ್ತೆ?

21 October, 2022 2:44 PM IST By: Kalmesh T
Side Effect of turmeric powder

ಅಡುಗೆ ಮನೆ ಪದಾರ್ಥಗಳಲ್ಲಿ ಬಹುಮುಖ್ಯ ಪಾತ್ರ ವಹಿಸುವ ಪದಾರ್ಥವೆಂದರೆ ಅದು ಅರಿಶಿನಪುಡಿ. ಅರಿಶಿನ ಇಲ್ಲದೆ ಹೋದರೆ ಬಹುಪಾಲು ಅಡುಗೆಗಳು ಅಪೂರ್ಣ. ಹಾಗಂತ ಕೆಲವೊಂದು ಆರೋಗ್ಯ ಸಮಸ್ಯೆ ಇದ್ದವರು ಅರಿಶಿನ ಬಳಸಬಾರದು ಎನ್ನುತ್ತಾರೆ ತಜ್ಞರು. ಇಲ್ಲಿದೆ ವಿವರ

ಇದನ್ನೂ ಓದಿರಿ: ದೇಹಕ್ಕೆ ಯಾವ ಹಣ್ಣು ಹೆಚ್ಚು ಆರೋಗ್ಯಕರ - ಸೇಬು ಅಥವಾ ಬಾಳೆಹಣ್ಣು?

ಅರಿಶಿನ ಸಾಂಬಾರು ಪದಾರ್ಥಗಳ ಸಾಲಿನಲ್ಲಿ ಮುಖ್ಯವಾದದದು. ಶುಂಠಿ ಬೆಳೆಯಂತೆಯೇ ಈ ಬೆಳೆಗೆ ಮತ್ತು ಭೂಮಿಯಲ್ಲಿ ಯಾವಾಗಲೂ ತೇವಾಂಶವಿರಬೇಕು.

ಅರಿಶಿನ (Turmeric) ವನ್ನು ಆಹಾರ ಪದಾರ್ಥಗಳಿಗೆ ಬಣ್ಣ ಮತ್ತು ಪರಿಮಳ ಬರಿಸಲು, ಸಾಂಬಾರ ಪುಡಿ ತಯಾರಿಸಲು, ಬಟ್ಟೆ ಕಾರ್ಖಾನೆಗಳಲ್ಲಿ ಬಣ್ಣ ಹಾಕಲು, ಆಯುರ್ವೇದ ಔಷಧಿ ಹಾಗೂ ಸುಗಂಧ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ.

ದಕ್ಷಿಣ ಭಾರತದ ಅಡುಗೆಗಳಲ್ಲಂತೂ ಅರಿಶಿನವನ್ನು ಹೆಚ್ಚಾಗಿ ಬಳಸುತ್ತಾರೆ. ಬಹುತೇಕ ಎಲ್ಲಾ ತಿನಿಸುಗಳಲ್ಲೂ ಅರಿಶಿನ ಬಳಕೆ ಸಾಮಾನ್ಯ. ಅರಿಶಿನ ಆರೋಗ್ಯವೃದ್ಧಿಗೂ ಸಹ ಬಹಳಷ್ಟು ಪರಿಣಾಮಕಾರಿಯಾಗಿದೆ.

ಅರಿಶಿನವು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.

ನೇರಳೆ ಹಣ್ಣಿನಲ್ಲಿವೆ ನೂರೆಂಟು ಔಷಧೀಯ ಗುಣ..! ಇದು ನಿಮಗೆ ತಿಳಿದಿದ್ದರೆ ಬೆಸ್ಟ್‌..

ಆದರೆ ಅರಿಶಿನದ ಔಷಧೀಯ ಗುಣಗಳಿಂದಾಗಿ, ಅನೇಕ ಆರೋಗ್ಯ ತಜ್ಞರು ಇದನ್ನು ನಿಯಮಿತವಾಗಿ ಸೇವಿಸುವಂತೆ ಸಲಹೆ ನೀಡುತ್ತಾರೆ.

ಅರಿಶಿನ ಮಸಾಲೆ ಸಾಮನ್ಯವಾಗಿ ಎಲ್ಲರಿಗೂ ಅಲ್ಲ. ಈ ಕಾಯಿಲೆಗಳಿಂದ ಬಳಲುತ್ತಿರುವವರು ಅರಿಶಿನ ತಿನ್ನದಿರುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.

ಯಾರೆಲ್ಲ ತಿನ್ನಬಾರದು ಎನ್ನುತ್ತಾರೆ ವೈದ್ಯರು?

ಕಾಮಾಲೆ ರೋಗ ಹೊಂದಿರುವವರು:

ಜಾಂಡೀಸ್ ಇರುವವರು ಅರಿಶಿನ ಸೇವನೆಯಿಂದ ಆದಷ್ಟು ದೂರವಿರಬೇಕು. ನೀವು ಇನ್ನೂ ಅರಿಶಿನವನ್ನು ಸೇವಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆದು. ಇಲ್ಲದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು.

ನಿಮಗಿದು ಗೊತ್ತೆ.. ಅಸ್ತಮಾ ಇದ್ದವರು ಈ ಹಣ್ಣುಗಳನ್ನು ಸೇವಿಸಬೇಕು

ಮಧುಮೇಹಿಗಳು:

ಮಧುಮೇಹದಂತಹ ಆರೋಗ್ಯ ಸಮಸ್ಯೆ ಇದ್ದವರು ಸಾಮಾನ್ಯವಾಗಿ ತಮ್ಮ ರಕ್ತವನ್ನು ತೆಳುಗೊಳಿಸಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.

ಅಲ್ಲದೆ ಅವರು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬೇಕು. ಮಧುಮೇಹ ರೋಗಿಗಳು ಅಗತ್ಯಕ್ಕಿಂತ ಹೆಚ್ಚು ಅರಿಶಿನವನ್ನು ಸೇವಿಸುವುದರಿಂದ ಅವರ ದೇಹದಲ್ಲಿನ ರಕ್ತದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಇದು ದೇಹಕ್ಕೆ ಸ್ವಲ್ಪವೂ ಒಳ್ಳೆಯದಲ್ಲ. ಆದ್ದರಿಂದ ವೈದ್ಯರು ಅರಿಶಿನ ನಿಯಮಿತವಾಗಿ ಸೇವಿಸಲು ಹೇಳುತ್ತಾರೆ.

ರಕ್ತಸ್ರಾವ:

ಮೂಗಿನಿಂದ ಅಥವಾ ದೇಹದ ಯಾವುದೇ ಭಾಗದಿಂದ ರಕ್ತಸ್ರಾವವಾಗುತ್ತಿರುವವರು ಅರಿಶಿನ ಸೇವನೆಯನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ರಕ್ತಸ್ರಾವ ಹೆಚ್ಚಾಗುತ್ತದೆ. ದೇಹದಿಂದ ರಕ್ತ ಕಡಿಮೆಯಾಗಬಹುದು.

ಕರಳು ಸಂಬಂಧಿ ಕಾಯಿಲೆಗಳು:

ಕರುಳಿನ ಸಮಸ್ಯೆಗಳು ಬಹಳ ಸಂಕೀರ್ಣ ರೋಗವಾಗಿದ್ದು, ಈ ಸಮಸ್ಯೆಯನ್ನು ಎದುರಿಸುತ್ತಿರುವವರು ಸಾಕಷ್ಟು ನೋವನ್ನು ಎದುರಿಸಬೇಕಾಗುತ್ತದೆ.

ಅಂತಹ ಸಂದರ್ಭಗಳಲ್ಲಿ ಅರಿಶಿನ ಸೇವನೆಯನ್ನು ಕಡಿಮೆ ಮಾಡಿ. ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ.