Health & Lifestyle

ಹಿತ್ತಲ ಗಿಡ 'ಪಪ್ಪಾಯಿ ಗಿಡದ ಎಲೆಗಳ' ಜಬರ್ದಸ್ತ್ ಪವರ್

31 July, 2019 5:00 PM IST By:

ಪಪ್ಪಾಯಿ ಹಣ್ಣು ಹೇಗೆ ಉತ್ತಮವೋ, ಇದರ ಬೀಜ, ಎಲೆಗಳೂ ಅದಕ್ಕಿಂತ ಉತ್ತಮವಾಗಿವೆ. ಹೇಗೆ ಎಂದರೆ ಇವು ಡೆಂಗಿ ಅಥವಾ ಡೆಂಗ್ಯೂ ಜ್ವರ, ಕ್ಯಾನ್ಸರ್ ಸಹಿತ ಹಲವು ಕಾಯಿಲೆಗಳಿಗೆ ಸಿದ್ಧೌಷಧದ ರೂಪದಲ್ಲಿ ಕೆಲಸ ಮಾಡುತ್ತವೆ. ವಿಶೇಷವಾಗಿ ಇದರ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಪಪಾಯಿನ್ ಎಂಬ ಒಂದು ಪೋಷಕಾಂಶ ಹಾಗೂ ಇತರ ಆಲ್ಕಲಾಯ್ಡ್‌ಗಳೂ ಮತ್ತು ಇತರ ಫಿನಾಲಿಕ್ ಸಂಯುಕ್ತಗಳು ದೇಹದಲ್ಲಿ ಪ್ರೋಟೀನುಗಳನ್ನು ಜೀರ್ಣಿಸಿಕೊಳ್ಳಲು ನೆರವಾಗುತ್ತದೆ ಹಾಗೂ ಇತರ ಜೀರ್ಣಕ್ರಿಯೆಯ ತೊಂದರೆಗಳನ್ನು ನಿವಾರಿಸುತ್ತದೆ. ಡೆಂಗ್ಯೂ ಜ್ವರದ ಹತೋಟಿಗೆ ಪಪ್ಪಾಯಿ ಗಿಡದ ಎಲೆಗಳೇ ಸಾಕು ಪಪ್ಪಾಯಿಯಲಿರುವ ಕಾರ್ಪಾಯ್ನ್ ಎಂಬ ಹೆಸರಿನ ಒಂದು ವಿಶಿಷ್ಟ ಆಲ್ಕಲಾಯ್ಡು ಕ್ಯಾನ್ಸರ್ ಕಾಯಿಲೆಗೆ ನೀಡಲಾಗುವ ಔಷಧಿಗಳ ಅಡ್ಡಪರಿಣಾಮಗಳಿಂದ ರಕ್ಷಿಸುತ್ತದೆ. ಪಪ್ಪಾಯಿ ಎಲೆಯ ರಸ ಕಹಿಯಾಗಿರಬಹುದು, ಆದರೆ ಇದರ ಗುಣಗಳು ಇನ್ನೂ ಬೇಕಾದಷ್ಟಿವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ:

ಯಕೃತ್ ನ ಕ್ಷಮತೆಯನ್ನು ಕ್ಷೀಣಿಸುವ ಸಿರ್ರೋಹ್ಸಿಸ್, ಯಕೃತ್ ಕ್ಯಾನ್ಸರ್, ಕಾಮಾಲೆ ಮೊದಲಾದ ರೋಗಗಳನ್ನು ಗುಣಪಡಿಸುವ ಮೂಲಕ ಯಕೃತ್‌ನ ಆರೋಗ್ಯ ಮತ್ತು ಕ್ಷಮತೆಯನ್ನು ಹೆಚ್ಚಿಸುತ್ತದೆ.


ರಕ್ತದಲ್ಲಿರುವ ಪ್ಲೇಟ್ಲೆಟ್ (ಕಿರುಬಿಲ್ಲೆ) ಗಳನ್ನು ಹೆಚ್ಚಿಸುತ್ತದೆ:

ಪಪ್ಪಾಯಿ ಎಲೆಯ ರಸಕ್ಕೆ ರಕ್ತದಲ್ಲಿರುವ ಕಿರುಬಿಲ್ಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಗುಣವಿದ್ದು ಈ ಮೂಲಕ ರಕ್ತಹೆಪ್ಪುಗಟ್ಟುವ ಸಮಯ ಮತ್ತು ಕ್ಷಮತೆಯನ್ನು ಹೆಚ್ಚಿಸಲು ಸಾಧ್ಯ. ಈ ಗುಣ ಪಪ್ಪಾಯಿಯ ರಸದ ಅತ್ಯುತ್ತಮ ಗುಣವಾಗಿದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ:

ಈ ಎಲೆಗಳಲ್ಲಿ ಅಮೈಲೇಸ್, ಖೈಮೋಪಾಪಾಯಿನ್, ಪೋಟೀಸ್ ಮತ್ತು ಪಪಾಯಿನ್ ಮೊದಲಾದ ಪೋಷಕಾಂಶಗಳಿದ್ದು ಇವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತವೆ.

ಹಲವು ಕಾಯಿಲೆಗಳಿಂದ ರಕ್ಷಿಸುತ್ತದೆ:

ಪಪ್ಪಾಯಿ ಎಲೆಯಲ್ಲಿ ಅಸಿಟೋಜೀನಿನ್ ಎಂಬ ಸಂಯುಕ್ತವಿದೆ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಲೇರಿಯಾ, ಡೆಂಗಿ ಜ್ವರ ಹಾಗೂ ಕ್ಯಾನ್ಸರ್ ಕಾಯಿಲೆಗಳನ್ನು ಆವರಿಸುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

ಮಹಿಳೆಯರ ಮಾಸಿಕಸ್ರಾವವನ್ನು ಸುಗಮಗೊಳಿಸುತ್ತದೆ:


ಈ ರಸವನ್ನು ನಿಯಮಿತವಾಗಿ ಕುಡಿಯುತ್ತಾ ಬರುವ ಮಹಿಳೆಯರಲ್ಲಿ ಮಾಸಿಕ ದಿನಗಳು ಕ್ರಮಬದ್ಧವಾಗಿರಲು ಹಾಗೂ ನಂತರದ ದಿನಗಳ ನೋವು ಹಾಗೂ ಮಾನಸಿಕ ವಿಕ್ಷೋಭೆ ಕಡಿಮೆಯಾಗಲು ನೆರವಾಗುತ್ತದೆ.

ಶಾರೀರಿಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಪ್ರತಿದಿನವೂ ಕೊಂಚ ಪಪಾಯಿ ಎಲೆಯ ರಸವನ್ನು ಕುಡಿಯುತ್ತಾ ಬರುವ ಮೂಲಕ ದೇಹದಲ್ಲಿ ಶಕ್ತಿಯ ಹೆಚ್ಚಳವಾಗುತ್ತದೆ ಹಾಗೂ ಹೆಚ್ಚು ಕಾಲ ಸುಸ್ತಾಗದೇ ಕೆಲಸ ನಿರ್ವಹಿಸಲು ನೆರವಾಗುತ್ತದೆ. ಕ್ರೀಡಾಪಟುಗಳಿಗೆ ಈ ಗುಣ ತುಂಬಾ ಅಗತ್ಯವಾಗಿದೆ.

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ:

ಪಪ್ಪಾಯಿ ರಸದ ಸೇವನೆಯಿಂದ ರಕ್ತದಲ್ಲಿ ಇನ್ಸುಲಿನ್ ಸುಲಭವಾಗಿ ಹಾನಿಗೊಳಗಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದು ಮಧುಮೇಹವನ್ನು ತಡೆಗಟ್ಟಲು ತುಂಬಾ ನೆರವಾಗುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ :

ಈ ರಸದಲ್ಲಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ತನ್ಮೂಲಕ ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ. ಈ ಗುಣವೂ ಪಪ್ಪಾಯಿ ರಸದ ಅತ್ಯುತ್ತಮ ಗುಣಗಳಲ್ಲೊಂದಾಗಿದೆ.