ಉತ್ತಮ ಆರೋಗ್ಯದ ದೃಷ್ಟಿಯಲ್ಲಿ ಪಪ್ಪಾಯ ಹಣ್ಣಿನ ವಿಶೇಷತೆಯ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಅದೇ ರೀತಿ ನಮ್ಮ ಮುಖದ ಕಳೆ ಅಥವಾ ಹೊಳಪು ಹೆಚ್ಚಾಗಬೇಕು ಎಂದರೆ ಅದರಲ್ಲಿ ಪಪ್ಪಾಯ ಹಣ್ಣಿನ ಪಾತ್ರ ದೊಡ್ಡದು
ಪಪಾಯಿ ಹಣ್ಣಿನಲ್ಲಿರುವ ಔಷಧಿಯ ಗುಣಗಳು
- ಪಪ್ಪಾಯ ಹಣ್ಣು ಅಜೀರ್ಣದ ತೊಂದರೆಯನ್ನು ನಿವಾರಿಸಲು ಸಹಕಾರಿ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಪೋಷಕಾಂಶಗಳು ಹೆಚ್ಚಿಸುವುದರಿಂದ ತೂಕ ಇಳಸಿಕೊಳ್ಳಲು ಒಳ್ಳೆಯ ಆಹಾರ.
- ಪಪ್ಪಾಯ ನೋವನ್ನು ಉಪಶಮನ ಮಾಡುವ ಗುಣಗಳ್ಳಿದ್ದು, ಆರ್ಥಟಿಸ್, ಒಸ್ಟೆಒಪೊರೊಸಿಸ್ ಇನ್ನಾವುದೇ ಬಗೆಯ ನೋವಿನಿಂದ ಶೀಘ್ರವಾಗಿ ಗುಣವಾಗಲು ಸಹಾಯ ಮಾಡುತ್ತದೆ.
- ಪಪ್ಪಾಯ ಹಣ್ಣನ್ನು ಹೆಚ್ಚು ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮಿನಿಂದ ದೂರ ಉಳಿಯಬಹುದು. ಇದರಲ್ಲಿ ವಿಟಮಿನ್ ‘ಸಿ’ ಹೆಚ್ಚಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹಚ್ಚಾಗುತ್ತದೆ.
- ಈ ಹಣ್ಣನ್ನು ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆಯಾಗಬಹುದು ಹಾಗೂ ಮುಟ್ಟಿನ ಸಮಸ್ಯೆಯಿಂದ ದೂರವಿರಬಹುದು.
- ಗ್ಯಾಸ್ಟಿಕ್ ಸಮಸ್ಯೆಗೆ ಪಪ್ಪಾಯ ಹಣ್ಣು ಸಿದ್ದೌಷಧವಾಗಿದ್ದು, ಕರುಳು ಹಾಗೂ ಜೀರ್ಣಂಗಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಾದರೂ ನಿವಾರಿಸಬಲ್ಲುದು.
- ಇದರ ಎಲೆಯ ರಸವನ್ನು ಸೇವಿಸುವುದರಿಂದಡೆಂಗ್ಯೂ ಎಂಬ ಮಾರಾಣಂತಿಕ ರೋಗವನ್ನು ರಕ್ತದ ಕಿರುತಟ್ಟೆಗಳ ಪ್ರಮಾಣ ಹೆಚ್ಚಿಸುವುದರಿಂದ ತಡೆಗಟ್ಟಬಹುದು. ಪರಂಗಿ ಹಣ್ಣಿನ ಬೀಜದಲ್ಲಿ ಆಂಟಿ ಬ್ಯಾಕ್ಟಿರಿಯಲ್ ಗುಣವಿರುವುದರಿಂದ ಮೂತ್ರ ಪಿಂಡ ವೈಫಲ್ಯಜಠರ ಸಮಸ್ಯೆಯವನ್ನು ನಿವಾರಿಸುತ್ತದೆ.
- ಇದರಲ್ಲಿ ವಿಟಮಿನ್ ‘ಸಿ’ ಮತ್ತು ವಿಟಮಿನ್ ‘ಇ’ ಹಾಗೂ ಆಂಟಿಆಕ್ಸಿಡೆಂಟ್ ಅಂಶ ಇರುವುದರಿಂದ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಮುಖದ ಹಾಗೂ ದೇಹಕ್ಕೆ ಬರುವ ವಯಸ್ಸಾದ ಚಿಹ್ನೆಗಳು ದೂರವಾಗಿ ವಯಸ್ಕರಂತೆ ಕಾಣಬಹುದು.
ಸೌಂದರ್ಯ ವೃದ್ದಿಗೆ ಸಹಕಾರಿ ಪಪ್ಪಾಯಿ ಹಣ್ಣು
- ಪಪಾಯದಲ್ಲಿ ನಾರಿನಂಶ ಹೆಚ್ಚಿರುವುದರಿಂದ ಚರ್ಮದ ಕಾಂತಿಯನ್ನು ವರ್ಧಿಸುತ್ತದೆ. ಇದರಲ್ಲಿ ಪೆಪೆಸ್‍ಕಿಣ್ವ ಇರುದರಿಂದ ಸತ್ತ ಚರ್ಮದ ಜೀವಕೋಶಗಳನ್ನು ಮತ್ತು ನಿಷ್ಕ್ರೀಯ ಪ್ರೋಟಿನ್ ತೆಗೆದುಹಾಕಲು ಸಹಕಾರಿ.
- ಪಪ್ಪಾಯ ಹಣ್ಣನ್ನು ಕುಟ್ಟಿ ಅದರ ಮಿಶ್ರಣವನ್ನು ಪ್ರತಿನಿತ್ಯ ಮುಖಕ್ಕೆ ಲೇಪಿಸುವುದರಿಂದ ಮುಖದಕಾಂತಿ ಹೆಚ್ಚಾಗುತ್ತದೆ.
- ಪಪ್ಪಾಯ ಹಣ್ಣಿನ ತಿರುಳಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಇದನ್ನು ಫೇಸ್ ಪ್ಯಾಕ್ನಂತೆ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ನಂತರ ಮುಖ ತೊಳೆಯುದರಿಂದ ಮುಖದ ಚರ್ಮ ಮೃದುವಾಗುತ್ತದೆ.
- ಮೊಸರು ಹಾಗೂ ಪರಂಗಿ ಹಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿ ತಲೆಕೂದಲಿನ ಬುಡಕ್ಕೆ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.
- ಕಚ್ಚಾ ಪಪಾಯವನ್ನು ನುಣ್ಣಗೆಕುಟ್ಟಿ ಮುಖಕ್ಕೆ ಹಚ್ಚಿ ಅರ್ಧಗಂಟೆ ನಿಮ್ಮ ಚರ್ಮದ ಮೇಲಿನ ಅನಗತ್ಯ ಕಲೆಗಳು ಮತ್ತು ಮೊಡವೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
- ಮುಖದ ಜೊತೆಗೆ ನೋಯುತ್ತಿರುವ ಮತ್ತು ಬಿರುಕು ಬಿಟ್ಟ ಹಿಮ್ಮಡಿಯನ್ನು ಚಿಕಿತ್ಸೆಗೆ ಬಳಸಬಹುದು.
- ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಧ್ಯಾಯನದ ಪ್ರಕಾರ ಕನಿಷ್ಠ ವಾರಕ್ಕೆ 3 ಬಾರಿ ಹಣ್ಣನ್ನು ತಿನ್ನುವುದರಿಂದ ಕೂದಲು ತೆಳುವಾಗುವುದು ಕಡಿಮೆಯಾಗುತ್ತದೆ.
- ಕೂದಲನ್ನು ಮೃದು ಮತ್ತು ಸುಗಮ ಮಾಡುವ ಖನಿಜಗಳು. ಜೀವಸತ್ವಗಳು ಮತ್ತು ಕಿಣ್ವಗಳು ಇರುವುದರಿಂದ ನೈಸರ್ಗಿಕ ಕಂಡಿಷನರ್ ಹಾಗೆ ವರ್ತಿಸುತ್ತದೆ.