Health & Lifestyle

ದೇವತೆಗಳ ಹಣ್ಣು 'ಪಪ್ಪಾಯ ತಿಂದ್ರೆ' ಕ್ಯಾನ್ಸರ್ ಬರದಂತೆ ತಡೆಗಟ್ಟಲು ಸಹಕಾರಿ

01 May, 2020 8:54 PM IST By:

ಪಪ್ಪಾಯಿ ಹಣ್ಣು ಸೇವಿಸುವುದರಿಂದ ಮನುಷ್ಯನ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ, ಇದರಲ್ಲಿರುವ ಆಂಟಿ ಆಕ್ಸಿಡೆಂಟ್‍ಗಳು ದೇಹದ ಮೇಧೋಜೀರಕ, ಯಕೃತ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುವುದು ಮತ್ತು ದೇಹದಲ್ಲಿನ ಸಂಪೂರ್ಣ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.
 ಪಪ್ಪಾಯ ಹಣ್ಣು ಉಪಯೋಗಿಸಿದರೆ ಮನುಷ್ಯನ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳುತ್ತದೆ. ಇದರ ಸೇವನೆಯಿಂದ ಹೆಚ್ಚಿನ ಜೀವಸತ್ವ ಮತ್ತು ಖನಿಜಾಂಶಗಳನ್ನು ಹೊಂದಬಹುದು. ಇದರಲ್ಲಿರುವ ಪೋಟ್ಯಾಷಿಯಂ ಅಂಶದಿಂದಾಗಿ ಸಂಧಿವಾತ ರೋಗ ನಿವಾರಣೆಗೆ ಸಹಕಾರಿ. ಹೃದಯ ರೋಗಗಳನ್ನು ನಿವಾರಿಸುವಲ್ಲಿ ತುಂಬಾ ಸಹಕಾರಿಯಾಗಿದೆ.
ಇದರಲ್ಲಿರುವ ಇ ವಿಟಮಿನ್ ಸೌಂದರ್ಯ ವರ್ಧಕ ಅಂಶ ಹೊಂದಿದ್ದು, ಚರ್ಮದ ಕಾಂತಿಗೆ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಸಹಕಾರಿಯಾಗಿದೆ. ಹೆಚ್ಚಿನ ಫೇಸ್ ಮಾಸ್ಕ್ ಗಳಲ್ಲಿ ಪಪ್ಪಾಯಿ ಬಳಸಲಾಗುತ್ತದೆ ಮತ್ತು ಇದು ಸತ್ತ ಚರ್ಮದ ಕೋಶಗಳನ್ನು ಕಿತ್ತು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ಊಟವಾದ ನಂತರ ಪಪ್ಪಾಯಿ ಹಣ್ಣು ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಪರಂಗಿ ಗಿಡದ ಎಲೆಗಳನ್ನು ಕಿತ್ತು ತೊಳೆದು ತಿನ್ನುವುದರಿಂದ ಕರುಳಿನಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ.ಹೃದಯ ಹಾಗೂ ನರಗಳ ದೌರ್ಬಲ್ಯದಿಂದ ನರಳುವವರಲ್ಲಿ ಹೊಸ ಚೈತನ್ಯ ತುಂಬುತ್ತದೆ.
ಒಂದು ಮಧ್ಯಮ ಗಾತ್ರದ ಪಪ್ಪಾಯ ಹಣ್ಣಿನಲ್ಲಿ 68 ಕ್ಯಾಲೋರಿಗಳು ಇರುತ್ತದೆ. ಜಿಂಕ್ 0.13 ಮಿ.ಗ್ರಾಂ., ಕ್ಯಾಲ್ಸಿಯಂ 31 ಮಿ.ಗ್ರಾಂ., ಮ್ಯಾಗ್ನಿಷಿಯಂ 33 ಮಿ.ಗ್ರಾಂ., ಪೊಟ್ಯಾಷಿಯಂ 286 ಮಿ.ಗ್ರಾಂ., ಕಾರ್ಬೋಹೈಡ್ರೇಟ್ 50.1 ಗ್ರಾಂ., ನಾರು 2.7 ಗ್ರಾಂ., ಪೆÇ್ರೀಟಿನ್ 2.9 ಗ್ರಾಂ., ಸಕ್ಕರೆ 8.30 ಗ್ರಾಂ., ಓಮೆಗಾ 3 ಕೊಬ್ಬಿನ ಆಮ್ಲಗಳು-35.0 ಮಿ.ಗ್ರಾಂ. ಪೋಷಕಾಂಶಗಳು ಲಭ್ಯವಿರುತ್ತವೆ. ಪಪ್ಪಾಯ ಹಣ್ಣು ಸೇವನೆಯಿಂದ ಮನುಷ್ಯನ ಶರೀರಕ್ಕೆ ಈ ಮೇಲಿನ ಎಲ್ಲಾ ಲಾಭಾಂಶಗಳು ದೊರೆಯುತ್ತವೆ.