Health & Lifestyle

ಹಳದಿ ಹಲ್ಲಿನ ಸಮಸ್ಯೆಗೆ ಇಲ್ಲಿದೆ ಪವರ್ ಫುಲ್ ಮನೆಮದ್ದು

11 August, 2021 9:27 PM IST By:

ಹಳದಿ ಹಲ್ಲು ಎಲ್ಲರ ಎದುರು ಸಾಕಷ್ಟು ಮುಜುಗರ ತರಬಲ್ಲದ್ದು, ಇಡೀ ನಿಮ್ಮ ವ್ಯಕ್ತಿತ್ವ ಹಾಳು ಮಾಡಬಹುದು. ಮಿತ್ರರೊಡನೆ, ಬಂಧುಬಳಗದವರೊಂದಿಗೆ ಮಾತನಾಡುವಾಗ ಮುಜಗರ ಪಡುತ್ತಿದ್ದೀರಾ.ಈಗ ಚಿಂತೆ ಬಿಟ್ಟುಬಿಡಿ, ಸುಲಭವಾಗಿ ಹಳದಿ ಹಲ್ಲಿನ ಸಮಸ್ಯೆ ನಿವಾರಣೆ ಮಾಡಬಹುದು.

 ಅದ್ಭುತವಾದ ನಗುವನ್ನು ಹೊಂದಿರಲು ನೀವು ಸುಂದರವಾದ ದಂತಪಂಕ್ತಿಗಳನ್ನು ಹೊಂದಿರಬೇಕು. ಆದರೆ ಈ ಸುಂದರವಾದ ಹಲ್ಲಿಗಾಗಿ ನೀವೇನು ಮಾಡಬೇಕು ಗೊತ್ತೇ? ನಿಜವಾಗಿ ಕೂಡ ಹೊಳೆಯುವ ಹುಳುಕಿಲ್ಲದ ಹಲ್ಲನ್ನು ಪಡೆಯುವ ಇಚ್ಛೆ ಯಾರಿಗಿರುವುದಿಲ್ಲ ಹೇಳಿ.  ಜನರಿಂದ ನಿಮ್ಮನ್ನು ದೂರವಿಡುವಂತೆ ಈ ಹಲ್ಲುಗಳು ಮಾಡುವುದರಿಂದ ಕೆಲವೊಂದು ಸೂಕ್ತ ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳಲೇಬೇಕು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಹಲ್ಲಿನ ಆರೋಗ್ಯವನ್ನು ಪಾಲನೆ ಮಾಡುವುದು ಹಲ್ಲಿಗೆ ಉತ್ತಮವಾಗಿದೆ.

ಹಲ್ಲುಗಳನ್ನು ಸುಂದರಗೊಳಿಸುವ ಸಂದರ್ಭದಲ್ಲಿ ಬಾಯಿಯ ಸಂಪೂರ್ಣ ಆರೋಗ್ಯದೆಡೆಗೆ ನೀವು ಗಮನವನ್ನು ಹರಿಸಬೇಕಾಗುತ್ತದೆ. ಬಾಯಿಯ ಆರೋಗ್ಯಕ್ಕಾಗಿ ದಿನಕ್ಕೆರಡು ಬಾರಿ ನೀವು ಹಲ್ಲುಜ್ಜಬೇಕು ಮತ್ತು ಬಾಯಿಯನ್ನು ಸ್ವಚ್ಛವಾಗಿ ತೊಳೆಯಬೇಕು. ಪ್ರತೀ ತಿಂಗಳು ಬಾಯಿಯ ಮತ್ತು ಹಲ್ಲುಗಳ ಪರಿಶೀಲನೆಗಾಗಿ ದಂತವೈದ್ಯರನ್ನು ಕಾಣಬೇಕು.
ಹಲ್ಲಿನಿಂದ ಹಳದಿಯ ನಿವಾರಣಗೆ ಈ ಪೇಸ್ಟ್ ಸಹಕಾರಿ. ಫ್ಲುರೈಡ್ ನಿಮ್ಮ ಹಲ್ಲುಗಳನ್ನು ಬಲಶಾಲಿಯಾಗಿಸುವುದರಿಂದ ಹಲ್ಲಿನ ಹುಳುಕನ್ನು ನಿವಾರಿಸುತ್ತದೆ. ನೀವು ಸರಿಯಾದ ಟೂತ್?ಪೇಸ್ಟ್ ಬಳಸುತ್ತಿದ್ದೀರಿ ಎಂಬುದನ್ನು ಖಾತ್ರಪಡಿಸಿಕೊಳ್ಳಿ.
ಒಂದು ಚಮಚದಷ್ಟು ಬೇಕಿಂಗ್ ಸೋಡಾಗೆ ಸ್ವಲ್ಪ ಉಪ್ಪು ಸೇರಿಸಿ. ಪೇಸ್ಟ್ ಬದಲಿಗೆ ಇದನ್ನು ಹಲ್ಲುಜ್ಜಲು ಬಳಸಿ. ಹಲ್ಲಿನ ಹಳದಿಗಟ್ಟುವಿಕೆ ಮತ್ತು ಕರೆಯನ್ನು ನಿವಾರಿಸಿ ವಾರದಲ್ಲಿ ಫಲಿತಾಂಶವನ್ನು ನೀಡುತ್ತದೆ.

ಕಹಿ ಬೇವು: ಕಹಿ ಬೇವು ಒ0ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒ0ದು ಅಥವಾ ಎರಡು ಹನಿಗಳಷ್ಟು ಲಿ0ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ0ದ ನಿಮ್ಮ ಹಳದಿ ದ0ತಪ0ಕ್ತಿಗಳನ್ನು ಮಾಲೀಸು ಮಾಡಿಕೊಳ್ಳುವುದರ ಮೂಲಕ ಅದನ್ನು ಬಿಳುಪಾಗಿಸಿರಿ. ಫಲಿತಾ0ಶವು ಗಮನಾರ್ಹವಾಗಿ ಕ0ಡುಬರುವ0ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ0ದು ಬಾರಿ ಕೈಗೊಳ್ಳಿರಿ.

ಕಿತ್ತಳೆ ಸಿಪ್ಪೆಯ ಮ್ಯಾಜಿಕ್: ಈ ತಂತ್ರ ನಿಮ್ಮ ಬಾಯಿಯಲ್ಲಿ ಸುವಾಸನೆಯನ್ನು ಹೊಮ್ಮಿಸುವುದು ಖಂಡಿತ. ಹಲ್ಲಿನ ಕರೆಯ ನಿವಾರಣಗೆ ಈ ಟ್ರಿಕ್ಸ್ ಅತ್ಯದ್ಭುತವಾದುದು. ಹಲ್ಲಿನ ಮೇಲೆ ನೇರವಾಗಿ ಕಿತ್ತಳೆ ಸಿಪ್ಪೆಯನ್ನು ಉಜ್ಜಿ ನಂತರ ಬಾಯಿ ಮುಕ್ಕಳಿಸಿ. ಆಗಾಗ್ಗೆ ಇದನ್ನು ಬಳಸುವುದರಿಂದ ಹಲ್ಲಿನ ಕರೆಯನ್ನು ನಿವಾರಿಸಿಕೊಳ್ಳಬಹುದು.
ಹಸಿತರಕಾರಿಗಳು ಮತ್ತು ಹಣ್ಣುಗಳು: ಫೈಬರ್ ಅಂಶವನ್ನು ಒಳಗೊಂಡಿರುವ ಹಸಿತರಕಾರಿಗಳು ಮತ್ತು ಹಣ್ಣುಗಳ ಸೇವನೆಯನ್ನು ಮಾಡಿ. ಇವುಗಳನ್ನು ಸೇವಿಸುವುದೂ ಕೂಡ ಹಲ್ಲಿನ ಹಳದಿ ಕರೆಯನ್ನು ದೂರಮಾಡಲು ಸಹಕಾರಿಯಾಗಿದೆ.
ಹಲ್ಲಿನ ಹಳದಿ ಕಲೆ ನಿವಾರಣೆಗೆ ಎಳ್ಳಿನ ಬೀಜ ಅತ್ಯುತ್ತಮವಾದುದು. ಎಳ್ಳನ್ನು ಕೊಂಚ ಬಿರುಸಾಗಿ ಹುಡಿಮಾಡಿಟ್ಟುಕೊಳ್ಳಿ. ನಂತರ ಈ ಹುಡಿಯನ್ನು ಬಳಸಿ ಹಲ್ಲುಜ್ಜಿ. ನಿಮ್ಮ ಹಲ್ಲಿನಿಂದ ಕರೆ ಮಾಯವಾಗಿ ಫಳಫಳನೆ ಹೊಳೆಯುತ್ತದೆ.

ಮನೆಯಲ್ಲೇ ನೈಸರ್ಗಿಕವಾಗಿ ಹಲ್ಲುಗಳ ಕಾಳಜಿಯನ್ನು ಮಾಡಿಕೊಳ್ಳುವುದರ ಜೊತೆಗೆ ಉತ್ತಮ ಆಹಾರ ಪದ್ಧತಿಯನ್ನು ನೀವು ಅನುಸರಿಸಬೇಕು. ಆಹಾರವನ್ನು ಚೆನ್ನಾಗಿ ಜಗಿದು ಸೇವಿಸಿ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಕು ಇದು ಪ್ರತೀ ಸಲ ನೀವು ಆಹಾರ ಸೇವಿಸಿದ ಸಮಯದಲ್ಲಿ ಅನುಸರಿಸಬೇಕು.

ನಿಂಬೆಹಣ್ಣು: ನಿಂಬೆಹಣ್ಣು ಹಲ್ಲು ಬೆಳ್ಳಗಾಗಲು ಸಹಕಾರಿ. ನಿಂಬು ಸಿಪ್ಪೆಯಿಂದ ಹಲ್ಲುಜ್ಜಬೇಕು. ಅಥವಾ ನಿಂಬೆ ರಸವನ್ನು ನೀರಿನೊಂದಿಗೆ ಬೆರಸಿ ಬಾಯಿ ಮುಕ್ಕಳಿಸುತ್ತ ಬಂದರೆ ಹಲ್ಲಿನ ಹಳದಿ ಬಣ್ಣ ತೊಲಗಿ ಬಿಳಿಯ ಬಣ್ಣಕ್ಕೆ ತಿರುಗುತ್ತದೆ.