ಹುಣಸೆ ಹಣ್ಣು ಅಂದರೇನೇ ಪ್ರತಿಯೊಬ್ಬರ ಬಾಯಲ್ಲೂ ನೀರೂರುತ್ತದೆ. ಅದರಲ್ಲೂ ಭಾರತೀಯ ಅಡುಗೆ ಪದ್ಧತಿಯಲ್ಲಿ ಹುಣಸೆ ಹಣ್ಣಿಗೆ ವಿಶೇಷ ಸ್ಥಾನವಿದೆ. ಆಹಾರದ ರುಚಿ ಹೆಚ್ಚಿಸುವ ಈ ಹಣ್ಣಿನಲ್ಲಿ ಅನೇಕ ಆರೋಗ್ಯ ಗುಣಗಳಿವೆ ಎಂಬುದು ನಿಮಗೆ ತಿಳಿದಿದೆಯೇ? . ಹೌದು, ಹುಣಸೆ ಹಣ್ಣಿನ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು, ಜೀರ್ಣಕ್ರಿಯೆಯನ್ನು ಸುಧಾರಿಸಬಹುದು, ಅಷ್ಟೇ ಯಾಕೆ ಹೃದ್ರೋಗಗಳನ್ನು ದೂರವಿಡಬಹುದು. ಹೀಗೆ ನಾನಾ ರೀತಿಯಲ್ಲಿ ಹೇಗೆ ಸಹಾಯ ಮಾಡುತ್ತದೆಎಂಬುದನ್ನು ತಿಳಿಯಬೇಕಾದರೆ ಈ ಕೆಳನಗಿನ ಮಾಹಿತಿ...
ಅಡುಗೆಗೆ ರುಚಿ ಕೊಡುವ ಹುಣಸೆ ಹಣ್ಣು ನಮ್ಮ ದೇಹಕ್ಕೆ ಹಲವಾರು ಲಾಭಗಳನ್ನು ನೀಡುತ್ತದೆ. ನಮ್ಮ ಭಾರತೀಯ ಅಡುಗೆಯ ಪ್ರಮುಖ ಆಕರ್ಷಣೆಯ ಅಂಗವಾಗಿರುವ ಸಾಂಬಾರ ಮತ್ತು ರಸಮ್ ಗಳಿಗೆ ರುಚಿ ನೀಡುವುದೇ ಹುಣಸೆ ಹಣ್ಣು. ಇದು ಜೀರ್ಣಕ್ರಿಯೆಗೆ ಸಹಕಾರಿ. ಅಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು, ಹಾಗೆಯೇ ನಿಮ್ಮ ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ತ್ವಚೆಗೂ ಸಹ ಒಳ್ಳೆಯದು. ಅದ್ಹೇಗೆ ಅಂತೀರಾ? ಒಮ್ಮೆ ಈ ಲೇಖನ ಓದಿ.
ಇದು ಪೌಷ್ಠಿಕ ಹಾಗೂ ಔಷಧೀಯ ಗುಣಗಳ ಆಗರವಾಗಿರುವದರಿಂದ ಹುಣಸೆ ಹಣ್ಣನ್ನುಚಟ್ನಿ, ಜ್ಯೂಸ್, ಟಾಫಿ ಇಂತಹ ಅನೇಕ ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆಯಲ್ಲಿ ಉಪಯೋಗಿಸಗುತ್ತದೆ. ಕಡಿಮೆ ಉಪಯೋಗದಲ್ಲಿರುವ ಇಂತಹ ಹಣ್ಣುಗಳನ್ನು ಹೇರಳವಾಗಿ ಬಳಸುವ ಮೂಲಕ ಜನರ ಆರೋಗ್ಯ ಹಾಗೂ ಪೋಷಣೆಯ ಸ್ಥಿತಿಯನ್ನು ಸುಧಾರಿಸಬಹುದು.
ಹುಣಸೆ ಹಣ್ಣಿನ ಪೌಷ್ಟಿಕ ಮೌಲ್ಯ (ಪ್ರತಿ 100 ಗ್ರಾಂ)
ಪೋಷಕಾಂಶಗಳು ಪ್ರಮಾಣ
ಶಕ್ತಿ (ಕಿ. ಕ್ಯಾ) 115
ಪ್ರೋಟೀನ್ (ಗ್ರಾಂ) 3.10
ಕೊಬ್ಬಿನಾಂಶ (ಗ್ರಾಂ 0.10
ನಾರಿನಾಂಶ (ಗ್ರಾಂ) 5.60
ಶರ್ಕರ ಪಿಷ್ಠ (ಗ್ರಾಂ) 67.40
(ವಿಟಮಿನ್-ಬಿ2ಮಿ. (ಗ್ರಾಂ) 0.07
(ವಿಟಮಿನ್-ಬಿ1) (ಮಿ. ಗ್ರಾಂ) 0.16
ನಯಾಸಿನ್ (ಮಿ.ಗ್ರಾಂ) 0.60-0.70
ಜೀವಸತ್ವ ಸಿ 0.7-3.0
ಟಾರ್ಟಾರಿಕ್ ಆಮ್ಲ (ಮಿ. ಗ್ರಾಂ) 8.0-23.0
ಹುಣಸೆ ಹಣ್ಣಿನ ಉಪಯೋಗಗಳು ಹಾಗೂ ಔಷಧೀಯ ಗುಣಗಳು
1.ಹುಣಸೆ ಹಣ್ಣು ಆರೋಗ್ಯಕ್ಕೆ ಹೆಚ್ಚು ಉಪಯೋಗವಾಗುವಂತಹ ಅಗತ್ಯ ಬಾಷ್ಪಶೀಲ ರಾಸಾಯನಿಕ ಸಂಯುಕ್ತಗಳನ್ನು, ಖನಿಜಗಳನ್ನು, ಜೀವಸತ್ವಗಳನ್ನು ಹಾಗೂ ನಾರಿನಾಂಶವನ್ನು ಹೊಂದಿದೆ.
2.ಇದರ ಜಿಗುಟಾದ ತಿರುಳು, ಗೋಂದು, ಪೆಕ್ಟಿನ್ ಮತ್ತು ಟ್ಯಾನಿನ್ ಅಲ್ಲದೇ ಸಂಯುಕ್ತ ಸಕ್ಕರೆ ಅಂಶಗಳನ್ನು ಹೊಂದಿದೆ. 100 ಗ್ರಾಂ ಹಣ್ಣಿನ ತಿರುಳು 5.1-13% ವರೆಗೂ ನಾರಿನಾಂಶವನ್ನು ದೇಹಕ್ಕೆ ಒದಗಿಸುತ್ತದೆ. ಇದರಲ್ಲಿರುವ ನಾರಿನಾಂಶವು ಕರುಳಿನ ಮೂಲಕ ಚಲಿಸಿ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ ಹಾಗೂ ಕ್ಯಾನ್ಸರ್‍ಉಂಟುಮಾಡುವ ರಾಸಾಯನಿಕಗಳನ್ನು ಉತ್ಪಾದಿಸದಂತೆ ತಡೆಹಿಡಿಯುತ್ತದೆ.
3.ಇದರಲ್ಲಿರುವ ನಾರಿನಾಂಶ ಕೊಲೆಸ್ಟ್ರಾಲನ್ನು ಮರು ಹೀರಿಕೊಳ್ಳಲು ಸಹಾಯಮಾಡುತ್ತದೆ ಜೊತೆಗೆ ದೇಹದಲ್ಲಿರುವ ಕೆಟ್ಟ ಅಥವಾ ಕೊಲೆಸ್ಟ್ರಾಲ್ ಮಟ್ಟವನ್ನು ವಿಸರ್ಜಿಸಲು ಸಹಾಯಮಾಡುತ್ತವೆ.
4.ಹುಣಸೆ ಹಣ್ಣಿನಲ್ಲಿ ಟಾರ್ಟಾರಿಕ್ ಆಮ್ಲ ಹೇರಳವಾಗಿದೆ. ಈ ಆಮ್ಲವು ಆಹಾರದಲ್ಲಿ ಒಂದು ಹುಳಿ ರುಚಿಯನ್ನು ನೀಡುತ್ತದೆ. ಇದು ಬಹಳ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ (ಆ್ಯಂಟಿಆಕ್ಸಿಡೆಂಟ್). ಇದು ದೇಹದಲ್ಲಿರುವ ಸ್ವತಂತ್ರ ಹಾನಿಕಾರಕರಾಡಿಕಲ್ ನಿಂದ ರಕ್ಷಿಸಲು ಸಹಾಯಮಾಡುತ್ತದೆ.
5.ಹೈಡ್ರೋಕ್ಸಿ ಸಿಟ್ರಿಕ್ ಆಸಿಡ್ ಹುಣಸೆ ಹಣ್ಣಿನಲ್ಲಿ ಹೈಡ್ರೋಕ್ಸಿ ಸಿಟ್ರಿಕ್ ಆಸಿಡ್ (ಎಚ್ಸಿಎ) ಅಧಿಕವಾಗಿದೆ. ಈ ಅಂಶವು ಕೊಬ್ಬಿನ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಈ ಆಮ್ಲವು ಸಿಟ್ರಿಕ್ ಆಮ್ಲವನ್ನು ಹೋಲುತ್ತದೆ. ಈ ಗುಣವು ವಿವಿಧ ಸಸ್ಯಗಳಲ್ಲಿ ಇರುವುದನ್ನು ನಾವು ಗಮನಿಸಬಹುದು. ಹುಣಸೆ ಹಣ್ಣಿನಲ್ಲಿ ಇದು ಸಮೃದ್ಧ ವಾಗಿರುವುದನ್ನು ಕಾಣಬಹುದು
6.ಹುಣಸೆ ಹಣ್ಣಿನ ಪಾನೀಯ ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ.
7.ಹುಣಸೆ ಹಣ್ಣಿನರಸಕಣ್ಣಿಗೆ ಸಂಬಂಧಪಟ್ಟರೋಗದ ಲಕ್ಷಣಗಳನ್ನು ಗುಣಪಡಿಸುವಲ್ಲಿ ನೆರವಾಗುತ್ತದೆ
8. ಈ ಹಣ್ಣನ್ನುಕಾಮಾಲೆ ರೋಗವನ್ನು ಸಹ ಗುಣಪಡಿಸಲು ಉಪಯೋಗಿಸಲಾಗುತ್ತದೆ.
ಲೇಖಕರು :
1.ರೇಖಾ ಕಾರಭಾರಿ, ವಿಷಯತಜ್ಞರು(ಗೃಹ ವಿಜ್ಞಾನ)
2.ಧನಂಜಯ ಸಿ. ಚೌಗಲಾ ಕಾರ್ಯಕ್ರಮ ಸಂಯೋಜಕರು
ಸಂಪರ್ಕ : ಐ.ಸಿ.ಎ.ಆರ್. ಕೃಷಿ ವಿಜ್ಞಾನಕೇಂದ್ರ, ಬರ್ಡ್ಸ್ ಕ್ಯಾಂಪಸ್, ತುಕ್ಕಾನಟ್ಟಿ,
ತಾಲೂಕ : ಗೋಕಾಕ ಜಿಲ್ಲೆ: ಬೆಳಗಾವಿ.