Health & Lifestyle

ಆರೋಗ್ಯಕೆ ಸಪೋರ್ಟ್ ಮಾಡುತ್ತದೆ ಸಪೋಟಾ

03 October, 2020 8:46 PM IST By:

ಸಪೋಟಾ ಹಣ್ಣನ್ನು ಇಷ್ಟಪಡದಿರುವವರು ಯಾರಿಲ್ಲ ಹೇಳಿ, ಸಪೋಟಾ ರುಚಿಗೆ ಅಷ್ಟೇ ಅಲ್ಲ. ಆರೋಗ್ಯಕ್ಕೂ ಹೆಚ್ಚು ಸಹಕಾರಿ ಇದರಲ್ಲಿ ಅನೇಕ ವಿಧವಾದ ಆರೋಗ್ಯ ಗುಣಗಳು ಅಡಗಿವೆ. ಇದರಲ್ಲಿ ಪ್ರಕ್ಟೋಸ್, ಸುಕ್ರೋಸ್, ಸಕ್ಕರೆ ಅಂಶ ಹೇರವಾಗಿರುತ್ತದೆ. ಒಂದು ಸಪೋಟ ಹಣ್ಣು ಹತ್ತು ರೋಗಗಳ ನಿವಾರಕ ಎಂದು ಸಹ ಹೇಳಲಾಗುತ್ತದೆ. ಹಾಗಾದರೆ ಈ ಪುಟ್ಟ ಹಣ್ಣಿನಲ್ಲಿ ಯಾವ್ಯಾವ ಆರೋಗ್ಯ ಗುಟ್ಟು ಅಡಗಿವೆ ಎಂಬುದನ್ನು ತಿಳಿದುಕೊಳ್ಳೊಣವೇ. ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ.

ಸಪೋಟಾ ವಿಟಮಿನ್ A ಮತ್ತು C ಯಿಂದ ಸಮೃದ್ಧವಾಗಿದೆ:

 ದಿನಕ್ಕೆ 1 ಸಪೋಟಾ ಹಣ್ಣನ್ನು ತಿನ್ನುವುದರಿಂದ ಕಣ್ಣಿನ ಸಮಸ್ಯೆಗಳಿಂದ ದೂರವಿಡಬಹುದು. ವಿಟಮಿನ್ ಎ ನಮ್ಮ ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ. ವಿಟಮಿನ್ ಸಿ ಹೆಚ್ಚಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಅಧಿಕಗೊಳಿಸುತ್ತದೆ. ಚರ್ಮವನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ. ಹೃದಯದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ:

ಸಪೋಟಾ ಜೀರ್ಣಾಂಗ ವ್ಯವಸ್ಥೆಯನ್ನು ನಿಯಂತ್ರಣದಲ್ಲಿರುಸುತ್ತದೆ.ಮಲಬದ್ಧತೆ ಸಮಸ್ಯೆ ಹಾಗೂ ಕರುಳಿಗೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ಹಣ್ಣು ಕ್ಯಾಲ್ಸಿಯಂ, ಮೆಗ್ನಿಶಿಯಂ, ರಂಜಕ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ.

ರಕ್ತದೋತ್ತಡ ನಿಯಂತ್ರಣ:

ಸಪೋಟಾದಲ್ಲಿ ಮೆಗ್ನೇಶಿಯಮ್ ಹೆಚ್ಚಾಗಿರುವುದರಿಂದ ರಕ್ತನಾಳಗಳನ್ನು ಮೆಲೆಕ್ಕೆತ್ತುವ ಸಾಮರ್ಥ್ಯ ಪಡೆದಿವೆ. ಪೊಟ್ಯಾಶಿಯಂ ರಕ್ತದೋತ್ತಡ ಮತ್ತು ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ. ರಕ್ತಹೀನತೆಗೆ ಚಿಕಿತ್ಸೆ ನೀಡುವುದು ಸಹ ಒಳ್ಳೆಯದು.

ಮೂಳೆಗಳ ಆರೋಗ್ಯ ವೃದ್ಧಿ:

ಸಪೋಟ  ಹಣ್ಣಿನಲ್ಲಿ ಕ್ಯಾಲ್ಸಿಯಂ , ರಂಜಕ ಮತ್ತು ಕಬ್ಬಿಣ ಅಂಶಗಳು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತವೆ. ಈ ಹಣ್ಣಿನಲ್ಲಿ ಕ್ಯಾಲ್ಸಿಯಂ , ಕಬ್ಬಿಣ ಮತ್ತು ರಂಜಕಾಂಶಗಳು ಅಧಿಕ ಪ್ರಮಾಣದಲ್ಲಿರುವುದರಿಂದ ಮೂಳೆಗಳ ಸಹಿಷ್ಣುತೆ ಮತ್ತು ಬಲವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ತಾಮ್ರ, ಸೆಲೆನಿಯಂ, ಸಪೋಟ ಹಣ್ಣಿನಲ್ಲಿ ಸತು, ಫಾಸ್ಪರಸ್ ಸೇರಿದಂತೆ ಮುಂತಾದ ಖನಿಜಗಳು ಹೇರಳವಾಗಿದೆ.

ಇದು ನಮ್ಮ ಚಯಾಪಚಯ ಕ್ರಿಯೆಯನ್ನು ನಿಯಂತ್ರಣಗೊಳಿಸುತ್ತದೆ.  ದೇಹದಲ್ಲಿ ರಕ್ತ ವೃದ್ಧಿಯಾಗಲು ಸಹಕಾರಿಯಾಗುತ್ತದೆ. ಸಪೋಟ ಹಣ್ಣಿನ ರಸಕ್ಕಕೆ ಹಾಲು ಬೆರೆಸಿ ಕುಡಿದರೆ ಹೊಟ್ಟೆ ಉರಿ ನಿವಾರಣೆಯಾಗುತ್ತದೆ.

ಉತ್ತಮ ನೀರಿನ ಅಂಶವನ್ನು ಹೊಂದಿದ್ದ ಈ ಸಿಹಿಯಾಗಿ ರುಚಿಕರವಾಗಿರುವ ಹಣ್ಣನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡು ಅತ್ಯುತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

ಲೇಖಕರು: ಶಗುಪ್ತಾ ಅ ಶೇಖ