ಆಹಾರದ ರುಚಿಯನ್ನು ಹೆಚ್ಚಿಸುವ ಹೂಕೋಸು, ಹಲವು ವಿಶೇಷ ಗುಣಗಳನ್ನು ಹೊಂದಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದದ್ದು, ರುಚಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೂಕೋಸುಗಳ ಪ್ರಯೋಜನಗಳು ತುಂಬಾ ವಿಶೇಷತೆ ಪಡೆದುಕೊಂಡಿದೆ. ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಎಲ್ಲಾ ರೀತಿಯ ಜೀವಸತ್ವಗಳು , ಮೆಗ್ನೇಶಿಯಂ, ಹಾಗೂ ಪೊಟ್ಯಾಶಿಯಂ ಇದೆ. ಹೂಕೋಸುವಿಲ್ಲಿ ಅಡಗಿರುವ ಆರೋಗ್ಯದ ಮಹತ್ವದ ಮಾಹಿತಿ ಇಲ್ಲಿದೆ....
ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ: ಹೃದಯದ ಹಾಗೂ ಮನಸ್ಸನ್ನು ಆರೋಗ್ಯವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಅಲದ್ದೇ, ಕೂದಲಿನ ಆರೋಗ್ಯಕ್ಕೂ ಹೆಚ್ಚು ಉಪಯುಕ್ತ ಎನ್ನಬಹುದು. ಹೂಕೋಸು ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ
ಫೈಬರ್ ಹೆಚ್ಚು: ಹೂಕೋಸು ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ. ದೀರ್ಘಕಾಲದ ಕಾಯಿಲೆ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಾಯ: ಹೂಕೋಸು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಸಂಶೋಧನೆಯೊಂದರ ಪ್ರಕಾರ ,ಮಲಬದ್ಧತೆ , ಮೂಲವ್ಯಾಧಿ , ಕರುಳಿನ ಕ್ಯಾನ್ಸರ್ , ಗ್ಯಾಸ್ಟ್ರಿಕ್ ಹುಣ್ಣು , ಬೊಜ್ಜು ಮುಂತಾದ ಅನೇಕ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ.
ತೂಕ ಇಳಿಸಲು ಸಹಾಯ: ಹೂಕೋಸುವಿನಲ್ಲಿ ಫೈಬರ್ ಮತ್ತು ನೀರಿನ ಅಂಶ ಅಧಿಕವಾಗಿದೆ. ಹೀಗಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೊಜ್ಜು ತಡೆಯುತ್ತದೆ.ಇದರ ಜೊತೆಯಲ್ಲಿ ಹೂಕೋಸು ದೇಹದ ಚಯಾಪಚಯ ಕ್ರಿಯೆಗೆ ಅಗತ್ಯವಾದ ಅನೇಕ ಜೀವಸತ್ವಗಳನ್ನು ಹೊಂದಿರುತ್ತದೆ.
ಮೆದುಳಿಗೆ ಸಹಕಾರಿ: ಮೆದುಳಿನ ಆರೋಗ್ಯಕ್ಕೆ ಹೂಕೋಸು ತುಂಬಾ ಪ್ರಯೋಜನಕಾರಿ. ಮೆದುಳಿನ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ನೀಡುತ್ತದೆ. ಬುದ್ಧಿವಂತಿಕೆಯ ಬೆಳವಣಿಗೆಗೂ ಸಹಕಾರಿಯಾಗಿದೆ.
ಕ್ಯಾನ್ಸರ್ ತಡೆಯಲು ಸಹಾಯ: ಹೂಕೋಸುವಿನಲ್ಲಿ ಸಲ್ಫೋರಾಫೇನ್ ಸಮೃದ್ಧವಾಗಿರುವದರಿಂದ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಲೇಖಕರು: ಶಗುಪ್ತಾ ಅ ಶೇಖ