Health & Lifestyle

ಎಲೆಕೋಸು ರುಚಿಯಷ್ಟೆ ಅಲ್ಲ, ದೇಹದ ಆರೋಗ್ಯಕ್ಕೂ ಪ್ರಯೋಜನ

22 October, 2020 10:01 AM IST By:

ಎಲೆಕೋಸು ರುಚಿಯಷ್ಟೆ ಅಲ್ಲ, ದೇಹದ ಆರೋಗ್ಯ ಕಾಪಾಡುವಲ್ಲಿ ಕೂಡ ಬಹಳ ಮುಖ್ಯವಾದ ತರಕಾರಿ. ಬೇರೆ ತರಕಾರಿಗಳಿಗೆ ಹೋಲಿಸಿದರೆ ಕಡಿಮೆ ಕ್ಯಾಲೋರಿ ಹೊಂದಿರುತ್ತದೆ. ಆದರೆ ಉತ್ತಮ ಪೌಷ್ಟಿಕಾಂಶ ಹೊಂದಿರುತ್ತದೆ. ಅತ್ಯಂತ ಪ್ರಮಾಣದಲ್ಲಿ ತೇವಾಂಶ ಹೊಂದಿರುತ್ತದೆ. ಇದರಲ್ಲಿ ನಾರಿನಂಶ ಉತ್ತಮವಾಗಿರುವುದರಿಂದ ಮೂಲವ್ಯಾಧಿಗಳ ತೊಂದರೆ ಇರುವವರು ದಿನನಿತ್ಯ ಬೇಯಿಸಿದ ಎಲೆಕೋಸನ್ನು ಸೇವಿಸಿ. ಹೊಟ್ಟೆಯಲ್ಲಿ ಉಂಟಾಗುವ ಹುಣ್ಣುಗಳಿಗೂ ಕೂಡ ಇದು ಉತ್ತಮ ತರಕಾರಿ. ಹೆಸರಿಗೆ ತಕ್ಕಂತೆ ಎಲೆಗಳ ಪದರುಗಳಿಂದಲೆ ಆವೃತವಾಗಿರುವ ಈ ಎಲೆಕೋಸಿನ ಪ್ರಯೋಜನ ತಿಳಿದುಕೊಳ್ಳೊಣವೇ.....

ಪೋಷಕಾಂಶಗಳ ಖನಿಜ: ಎಲೆಕೋಸು ಕಡಿಮೆ ಕ್ಯಾಲೋರಿ ತರಕಾರಿಯಾಗಿದ್ದು ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದರಲ್ಲಿ ವಿಶೇಷವಾಗಿ ವಿಟಮಿನ್ ಸಿ ಅಧಿಕವಾಗಿದೆ. ಹೃದ್ರೋಗ, ಕೆಲವು ಕ್ಯಾನ್ಸರ್ ಮತ್ತು ದೃಷ್ಟಿ ನಷ್ಟದಿಂದ ರಕ್ಷಿಸಬಹುದಾದ ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದೆ.

 ಉರಿಯೂತ ನಿಯಂತ್ರಿಸಲು ಸಹಾಯ:  ಇದರಲ್ಲಿರುವ ಸಮೃದ್ಧ ಅಮೈನೊ ಆಮ್ಲಗಳು ಉರಿಯೂತದ ಮೇಲೆ ಪ್ರಭಾವ ಬೀರಿ ಇಲ್ಲವಾಗಿಸುತ್ತವೆ.

ಜೀರ್ಣಕ್ರಿಯೆಗೆ ಸಹಾಯ:  ಎಲೆಕೋಸು ಕರಗದ ಫೈಬರ್ ಅನ್ನು ಹೊಂದಿರುತ್ತದೆ. ಇದು ಬ್ಯಾಕ್ಟೀರಿಯಾಗಳಿಗೆ ಇಂಧನವನ್ನು ಒದಗಿಸುವ ಮೂಲಕ ಮತ್ತು ನಿಯಮಿತವಾಗಿ ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಾಂಗ ವ್ವಯವಸ್ಥೆಯನ್ನು ಆರೋಗ್ಯಕರವಾರಿಸುತ್ತದೆ.

ಹೃದ್ರೋಗದ ಅಪಾಯ ಕಡಿಮೆ:  ಎಲೆಕೋಸಿನಲ್ಲಿ ಅಂಥೋಸಯಾನಿನ್ಸ್ ಎಂಬ ಶಕ್ತಿಯುತ ವರ್ಣದ್ರವ್ಯಗಳಿವೆ, ಇವು ಹೃದಯ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ರಕ್ತದೊತ್ತಡ  ಕಡಿಮೆ: ಇದು ಪೋಟ್ಯಾಸಿಯಂ ಅನ್ನು ಹೊಂದಿರುವದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿ.

ರಕ್ತ ಹೆಪ್ಪುಗಟ್ಟುವಿಕೆ: ರಕ್ತ ಹೆಪ್ಪುಗಟ್ಟಲು ವಿಟಮಿನ್ ಕೆ ನಿರ್ಣಾಯಕ. ಎಲಕೋಸು ವಿಟಮಿನ್ ಕೆ1 ನ ಉತ್ತಮ ಮೂಲವಾಗಿದೆ.

ಕಣ್ಣಿನ ಪೊರೆ ಸಮಸ್ಯೆ ನಿವಾರಿಸುತ್ತದೆ:  ಎಲೆಕೋಸಿನಲ್ಲಿರುವ ಬೀಟಾ ಕೆರೊಟಿನ್ ಕಣ್ಣಿನ ರಕ್ಷಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಇದು ಮ್ಯಾಕುಲರ್ ಡಿಜನರೇಷನ್ ಉಂಟಾಗದಂತೆ ಕಾಪಾಡುತ್ತದೆ. ಆಗಾಗಿ ಕಣ್ಣಿನ ಪೊರೆ ಉಂಟಾಗುವುದಿಲ್ಲ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಇದರಲ್ಲಿರುವ ಸಮೃದ್ಧ ವಿಟಮಿನ್ ಸಿಯು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಫ್ರೀ ರಾಡಿಕಲ್ ಗಳನ್ನು ಸಹ ಇದು ಹದ್ದು ಬಸ್ತಿನಲ್ಲಿಟ್ಟಿರುತ್ತದೆ.

ಲೇಖಕರು: ಶಗುಪ್ತಾ ಅ ಶೇಖ