Health & Lifestyle

ಹಾಗಲಕಾಯಿ ತಿನ್ನಲು ಕಹಿ,,,,ಉದರಕ್ಕೆ ಸಿಹಿ (Bitter gourd)

24 July, 2020 6:33 PM IST By:

ಹಾಗಲಕಾಯಿ (Bitter gourd) ಕಹಿಗೆ ಹೆಸರುವಾಸಿಯಾಗಿದೆ. ಅದರ ಸೇವನೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ(health) ಪ್ರಯೋಜನಕಾರಿಯಾಗಿದೆ.  ಪ್ರಾಚೀನ ಕಾಲದಿಂದಲೂ ಔಷಧಿಗಳಲ್ಲಿ ಮತ್ತು ಆಹಾರ ತರಕಾರಿಗಳಲ್ಲಿ ಇದನ್ನು ಬಳಸುತ್ತಾರೆ.  ಇದು ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣ, ಮೆಗ್ನೀಷಿಯಂ, ಮತ್ತು ಪೊಟ್ಯಾಷಿಯಂ ಜೀವಸತ್ವ - ಸಿ ಹಾಗೂ ಅಧಿಕ ಪ್ರಮಾಣದಲ್ಲಿ ನಾರಿನಾಂಶ ಹೊಂದಿದೆ.

ಹಾಗಲಕಾಯಿ (Bitter gourd) ಯಲ್ಲಿರುವ ಪೌಷ್ಟಿಕಾಂಶಗಳು (100 ಗ್ರಾಂ)

ಪೋಷಕಾಂಶಗಳು ಪ್ರಮಾಣ

ಸಸಾರಜನಕ (ಗ್ರಾಂ)        1.6

ಕೊಬ್ಬು (ಗ್ರಾಂ)              0.2

ನಾರಿನಾಂಶ (ಗ್ರಾಂ)        0.8

ಶರ್ಕರ ಪಿಷ್ಟ (ಗ್ರಾಂ)         4.2

ಕ್ಯಾಲ್ಸಿಯಂ (ಮಿ.ಗ್ರಾಂ)     20.0

ಕಬ್ಬಿಣ  (ಮಿ.ಗ್ರಾಂ)         1.8

ಸೋಡಿಯಂ (ಮಿ. ಗ್ರಾಂ)    17.8

ಪೊಟ್ಯಾಷಿಯಂ (ಮಿ.ಗ್ರಾಂ)  152.8

ಜೀವಸತ್ವ- ಸಿ (ಮಿ.ಗ್ರಾಂ)   210.0

ಹಾಗಲಕಾಯಿಯ ಉಪಯೋಗಗಳು ಹಾಗೂ ಔಷಧೀಯ ಗುಣಗಳು.

ಕೊಲೆಸ್ಟ್ರಾಲ್‍  ಕಡಿಮೆ ಮಾಡುತ್ತದೆ: ಹಾಗಲಕಾಯಿಯಲ್ಲಿ ಪೈಟೋನ್ಯೂಟ್ರಿಯೆಂಟ್‍ಗಳೆಂಬ ಆಂಟಿ ಆಕ್ಸಿಡೆಂಟಗಳಿರುತ್ತದೆ. ಇವು ಕೆಟ್ಟ ಕೊಲೆಸ್ಟ್ರಾಲನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿ ಯನ್ನು ಹೆಚ್ಚಿಸುತ್ತದೆ (increase immune system): ವೈರಸ ಮತ್ತು ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡುವ ಸಾಮಥ್ರ್ಯವನ್ನು ಹೊಂದಿರುವುದರಿಂದ ವಿವಿಧ ಅಲರ್ಜಿಯನ್ನು ತಡೆಗಟ್ಟಲು  ಸಹಾಯ ಮಾಡುತ್ತದೆ.

ಮಧುಮೇಹವನ್ನು ಕಡಿಮೆ ಮಾಡುತ್ತದೆ((control Diabetics): ಪ್ರತಿದಿನ ಹಾಗಲಕಾಯಿ ಸೇವಿಸುವುದರಿಂದ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಮಲಬದ್ಧತೆಯನ್ನು (constipation) ತಡೆಗಟ್ಟುತ್ತದೆ:  ಮಲಬದ್ದತೆಯನ್ನು ತಡೆಗಟ್ಟುವಲ್ಲಿ ಹಾಗಲಕಾಯಿ ನೈಸರ್ಗಿಕ ಪರಿಹಾರವಾಗಿದೆ.  ಯಾವದೇ ಅಡ್ಡ ಪರಿಣಾಮಗಳಿಲ್ಲ.

ಚರ್ಮ (Skin) ಮತ್ತು ಕೂದಲಿನ (Hair) ಕಾಂತಿಗಾಗಿ: ಚರ್ಮದ ಮೇಲಿನ ಮಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುವಲ್ಲಿ ಆಂಟಿ ಆಕ್ಸಿಡೆಂಟಗಳು ಮತ್ತು ವಿಟಮಿನ್ ಸಿ ಮತ್ತು ಎ ಸಹಾಯ ಮಾಡುತ್ತದೆ. 

ತೂಕ ಕಡಿಮೆ ಮಾಡುತ್ತದೆ(weight loose): ಕ್ಯಾಲೋರಿ, ಕೊಬ್ಬು ಮತ್ತು ಕಾರ್ಬೋಹೈಡ್ರೇಟಗಳು ಕಡಿಮೆ ಇರುವುದರಿಂದ ತೂಕ ಇಳಿಸುವಲ್ಲಿ ಆಹಾರದಲ್ಲಿ ಸೇರಿಸಲಾಗುತ್ತದೆ.

ಕಣ್ಣಿನ ದೃಷ್ಟಿ (Eye sight) ಹೆಚ್ಚಿಸುತ್ತದೆ: ಇದರಲ್ಲಿನ ಬೀಟಾ ಕ್ಯಾರೋಟಿನ್ ಮತ್ತು ಜೀವಸತ್ವ ಎ ಪೋಷಕಾಂಶಗಳು ಹೇರಳವಾಗಿರುವುದರಿಂದ ಕಣ್ಣಿಗೆ ಅವಶ್ಯಕವಾದ ಪೋಷಕಾಂಶಗಳು ದೊರೆತು ಕಣ್ಣಿನ ತೊಂದರೆಗಳಿಂದ ರಕ್ಷಣೆ ನೀಡುತ್ತದೆ.

ರಕ್ತವನ್ನು ಶುದ್ಧಿಕರಿಸುತ್ತದೆ( Blood purify): ಪ್ರತಿದಿನ ಬೆಳೆಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಹಾಗಲಕಾಯಿ ರಸ ಸೇವಿಸುವುದರಿಂದ ರಕ್ತ ಶುದ್ಧಿಗೊಳ್ಳುತ್ತದೆ.

 

ರೇಖಾ ಕಾರಭಾರಿ